Select Your Language

Notifications

webdunia
webdunia
webdunia
webdunia

ಈಕೆ ಈಗ ಭಾರತದ ‘ಸಿಂಧೂ’ರ ತಿಲಕ!

ಈಕೆ ಈಗ ಭಾರತದ ‘ಸಿಂಧೂ’ರ ತಿಲಕ!
ನವದೆಹಲಿ , ಸೋಮವಾರ, 28 ಆಗಸ್ಟ್ 2017 (08:44 IST)
ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸೈನಾ ನೆಹ್ವಾಲ್ ಆರಂಭಿಸಿದ್ದ ಪರಂಪರೆಯನ್ನು ಮುಂದುವರಿಸಿದ್ದಾರೆ. ಈ ಮೂಲಕ ಭಾರತದ ಪಾಲಿನ ಸಿಂಧೂರ ತಿಲಕವಾಗಿದ್ದಾರೆ.

 
ನಿನ್ನೆ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಆಕೆ ಸೋತಿರಬಹುದು. ಆದರೆ ಸತತ ಎರಡು ಗಂಟೆ ಕಣದಲ್ಲಿ ಆಕೆ ಹೋರಾಡಿದ ರೀತಿಗೆ ಎಲ್ಲರೂ ಬೆರಗಾಗಿದ್ದಾರೆ.

ಜಪಾನ್ ಮತ್ತು ಚೀನಾ ಆಟಗಾರ್ತಿಯರನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಅವರ ದೇಹ ರಚನೆಯೇ  ಈ ಆಟಕ್ಕೆ ಹೇಳಿ ಮಾಡಿಸಿದಂತಿರುತ್ತದೆ. ಅದರಲ್ಲೂ ಜಪಾನ್ ನ ನೊಝೊಮಿ ಒಖುಹರಾ ಚುರುಕು ಕಾಲುಗಳ ಚಿಗರೆ.

ಎಲ್ಲರೂ ನಿರೀಕ್ಷಿಸುತ್ತಿದ್ದ ಫೈನಲ್ ಪಂದ್ಯದಲ್ಲಿ ಸಿಂಧು ಮೊದಲಾರ್ಧವನ್ನು ಚೆನ್ನಾಗಿಯೇ ಮಾಡಿದ್ದರು. ಆದರೆ ಕೊನೆಯ ಎರಡು ಗೇಮ್ ನಲ್ಲಿ ಸಿಂಧು ಅಂಕ ಕಳೆದುಕೊಂಡರು. ಅಲ್ಲಿಯವರೆಗೆ ಎದುರಾಳಿಗೆ ಪ್ರತೀ ಅಂಕ ಗಳಿಸಲು ಬೆವರು ಸುರಿಸುವಂತೆ ಮಾಡಿದರು.

ರನ್ನರ್ ಅಪ್ ಆಗಿ ಬೆಳ್ಳಿ ಪದಕಕ್ಕೇ ತೃಪ್ತಿ ಪಟ್ಟುಕೊಂಡರೂ ಈ ಪಂದ್ಯ  2 ಗಂಟೆಗೂ ಹೆಚ್ಚು ಕಾಲ ಮುಂದುವರಿದಿದ್ದು ಇದರ ರೋಚಕತೆಗೆ ಸಾಕ್ಷಿಯಾಗಿತ್ತು. ಇದರೊಂದಿಗೆ ಸಿಂಧು ತಮ್ಮ ವೃತ್ತಿ ಜೀವನದ ಮೂರನೇ ಬೆಳ್ಳಿ ಪದಕ ಗೆದ್ದರು. ಆದರೆ ಚಿನ್ನ ಗೆದ್ದು ಭಾರತದ ಪರ ಇತಿಹಾಸ ನಿರ್ಮಿಸುವ ಅವಕಾಶ ಸ್ವಲ್ಪದರಲ್ಲೇ ಕೈ ತಪ್ಪಿತು.

ಇದನ್ನೂ ಓದಿ.. ಮುಂದಿನ ಎರಡು ದಿನ ಬೆಂಗಳೂರಲ್ಲಿ ಛತ್ರಿ ಇಲ್ಲದೆ ಓಡಾಡುವಂತಿಲ್ಲ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಪರೂಪಕ್ಕೆ ತಪ್ಪು ಮಾಡಿದ ಧೋನಿ!