Publish Date: Mon, 31 Jul 2017 (11:44 IST)
Updated Date: Mon, 31 Jul 2017 (11:47 IST)
ನವದೆಹಲಿ: ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ತನಗೆ ಅನಿಸಿದ್ದನ್ನು ನೇರವಾಗಿ ಹೇಳುವ ಜಾಯಮಾನದವರು. ಜ್ವಾಲಾ ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬನಿಗೆ ಕೊಟ್ಟ ಉತ್ತರ ಇದಕ್ಕೆ ಲೇಟೆಸ್ಟ್ ಉದಾಹರಣೆ.
ಜ್ವಾಲಾ ತಾಯಿ ಯೆಲನ್ ಮೂಲತಃ ಚೀನಾದವರು. ಇದನ್ನೇ ಕೆಣಕಿರುವ ಅಭಿಮಾನಿಯೊಬ್ಬ ‘ನಿಮ್ಮ ತಾಯಿ ಚೀನಾದವರು ಎಂಬ ಕಾರಣಕ್ಕೆ ಪ್ರಧಾನಿ ಮೋದಿಯನ್ನು ವಿರೋಧಿಸುತ್ತಿದ್ದೀರಾ?’ ಎಂದು ಪ್ರಶ್ನಿಸಿದ್ದ.
ಉಭಯ ದೇಶಗಳ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಅಭಿಮಾನಿ ಜ್ವಾಲಾರನ್ನು ಕೆಣಕುವ ಪ್ರಯತ್ನ ನಡೆಸಿದ್ದ. ಈ ಪ್ರಶ್ನೆಯಿಂದ ಕೆಂಡಾಮಂಡಲರಾದ ಜ್ವಾಲಾ ‘ನೀನು ಏನು ಮಾತನಾಡುತ್ತಿದ್ದೀಯಾ ಎಂದು ಎರಡು ಬಾರಿ ಯೋಚಿಸಿ ಪೋಸ್ಟ್ ಮಾಡು’ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ