Select Your Language

Notifications

webdunia
webdunia
webdunia
webdunia

ಮೊದಲ ಟೆಸ್ಟ್: ಇಂಗ್ಲೆಂಡ್ ಗೆ ನಾಯಕ ರೂಟ್ ಶತಕ ಆಸರೆ

ಮೊದಲ ಟೆಸ್ಟ್: ಇಂಗ್ಲೆಂಡ್ ಗೆ ನಾಯಕ ರೂಟ್ ಶತಕ ಆಸರೆ
bengaluru , ಶನಿವಾರ, 7 ಆಗಸ್ಟ್ 2021 (21:36 IST)

ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನ ಭಾರತ ತಂಡ 278 ರನ್ ಗಳಿಗೆ ಆಲೌಟ್ ಆದ ನಂತರ ಎರಡನೇ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 6 ವಿಕೆಟ್ ಗೆ 263 ರನ್ ಗಳಿಸಿದೆ.

ಮೊದಲ ಇನಿಂಗ್ಸ್ ನಲ್ಲಿ 95 ರನ್ ಗಳ ಹಿನ್ನಡೆ ಅನುಭವಿಸಿರುವ ಇಂಗ್ಲೆಂಡ್ ಇದೀಗ 158 ರನ್ ಗಳ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ನಿಯಮಿತವಾಗಿ ವಿಕೆಟ್ ಕಳೆದುಕೊಂಡರೂ ನಾಯಕ ರೋಟ್ ತಂಡವನ್ನು ಮುನ್ನಡೆಸಿದರು. ರೂಟ್ 159 ಎಸೆತಗಳಲ್ಲಿ 14 ಬೌಂಡರಿ ಸೇರಿ 103 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ.

ಜಾನಿ ಬೇರ್ ಸ್ಟೋ (30), ಡಾನ್ ಲಾರೆನ್ಸ್ (25), ಡಾಮ್ ಸಿಬ್ಲೆ (28) ನಾಯಕನಿಗೆ ಸಾಥ್ ನೀಡಿದರೆ, ಭಾರತದ ಪರ ಮೊಹಮದ್ ಸಿರಾಜ್ 3 ವಿಕೆಟ್ ಪಡೆದು ಮಿಂಚಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಟೋಕಿಯೊ ಒಲಿಂಪಿಕ್ಸ್: 47ನೇ ಸ್ಥಾನಕ್ಕೆ ಜಿಗಿದ ಭಾರತ