ಭಾರತದ ಕುಸ್ತಿ ಒಕ್ಕೂಟ ಸೋಮವಾರ ನರಸಿಂಗ್ ಯಾದವ್ ಅವರಿಗೆ ಬೆಂಬಲವಾಗಿ ನಿಂತಿದೆ. ನರಸಿಂಗ್ ರಾವ್ ಅವರು ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ವಿಫಲವಾದ್ದರಿಂದ ಅವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದು ಅನುಮಾನಾಸ್ಪದವಾಗಿದೆ. ನರಸಿಂಗ್ ರಾವ್ ಒಳಸಂಚಿಗೆ ಬಲಿಪಶುವಾಗಿದ್ದಾರೆ ಎಂದೂ ಕುಸ್ತಿ ಒಕ್ಕೂಟ ಅಭಿಪ್ರಾಯಪಟ್ಟಿದೆ.
ನರಸಿಂಗ್ ಅಮಾಯಕರಾಗಿದ್ದು, ಯಾವುದೇ ತಪ್ಪು ಮಾಡಿಲ್ಲ, ಅವರಿಗೆ ಬೆಂಬಲವಾಗಿ ನಿಲ್ಲುವುದಾಗಿ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.
ಕುಸ್ತಿ ಒಕ್ಕೂಟವು ನರಸಿಂಗ್ ಅಮಾಯಕರೆಂದು ನಂಬಿಕೆ ಇರಿಸಿದೆ. ಅವರು ಈ ಸಮಸ್ಯೆಯಿಂದ ಹೊರಬರಲು ನಾನು ಸಾಧ್ಯವಾದಷ್ಟು ಪ್ರಯತ್ನಿಸಿ 74ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆಲ್ಲಲಿ ಎಂದು ಬ್ರಿಜ್ ಭೂಷಣ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನರಸಿಂಗ್ ನಿಷ್ಕಳಂಕ ದಾಖಲೆ ಹೊಂದಿದ್ದು, ಒಲಿಂಪಿಕ್ಸ್‌ಗೆ ಕೆಲವೇ ದಿನಗಳ ಮುಂಚೆ ನಿಷೇಧಿತ ವಸ್ತುವನ್ನು ಉಲ್ಲೇಖಿಸಿ ಅವರ ವೃತ್ತಿಜೀವನ ಹಾಳುಮಾಡುವುದು ಮೂರ್ಖತನ ಎಂದು ಡಬ್ಲ್ಯುಎಫ್‌ಐ ಮುಖ್ಯಸ್ಥ ಹೇಳಿದರು. ನರಸಿಂಗ್ ರಾವ್ ನಮಗೆ ಪತ್ರಮುಖೇನ ಬರೆದು ಅವರ ವಿರುದ್ಧ ಪಿತೂರಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.