Select Your Language

Notifications

webdunia
webdunia
webdunia
webdunia

ಅಂಡರ್-20 ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ವಿಶ್ವ ದಾಖಲೆ

ನವದೆಹಲಿ: ಪೋಲೆಂಡ್ ಬಿಡ್‌‍ಗೋಸ್‌ನ ಅಂಡರ್-20 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಜಾವೆಲಿನ್ ಎಸೆತದ ಕ್ರೀಡಾಪಟು ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಾಗ ಶನಿವಾರ ಹೊಸ ತಾರೆಯೊಬ್ಬ ಉದಯಿಸಿದ್ದ. ಈ ಗೆಲುವಿನ ಮೂಲಕ ಚೋಪ್ರಾ ವಿಶ್ವಚಾಂಪಿಯನ್ನರಾದ ಮೊದಲ ಭಾರತೀಯ ಅಥ್ಲೀಟ್ ಎಂಬ ಶ್ರೇಯಕ್ಕೆ ಪಾತ್ರರಾದರು.
ನವದೆಹಲಿ , ಸೋಮವಾರ, 25 ಜುಲೈ 2016 (15:47 IST)
ಪೋಲೆಂಡ್ ಬಿಡ್‌‍ಗೋಸ್‌ನ ಅಂಡರ್-20 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಜಾವೆಲಿನ್ ಎಸೆತದ ಕ್ರೀಡಾಪಟು ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಾಗ ಶನಿವಾರ ಹೊಸ ತಾರೆಯೊಬ್ಬ ಉದಯಿಸಿದ್ದ. ಈ ಗೆಲುವಿನ ಮೂಲಕ ಚೋಪ್ರಾ ವಿಶ್ವಚಾಂಪಿಯನ್ನರಾದ ಮೊದಲ ಭಾರತೀಯ ಅಥ್ಲೀಟ್ ಎಂಬ ಶ್ರೇಯಕ್ಕೆ ಪಾತ್ರರಾದರು.
 
18 ವರ್ಷದ ಯುವಕ ಅಂಡರ್ 20 ವಿಭಾಗದಲ್ಲಿ 86.48 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಹೊಸ ವಿಶ್ವದಾಖಲೆ ನಿರ್ಮಿಸಿದರು.ಈ ಮೂಲಕ ಜಿಜಿಸ್‌ಮಂಡ್ಸ್ ಸಿರ್‌ಮಾಯ್ ಅವರ 84.69 ಮೀಟರ್ ಗಡಿಯನ್ನು ಮುರಿದರು. ಹರ್ಯಾಣದ ಪಾಣಿಪತ್ ಜಿಲ್ಲೆಯ ಈ ಯುವಕ  ಯಾವುದೇ ಮಟ್ಟದಲ್ಲಿ ವಿಶ್ವದಾಖಲೆ ನಿರ್ಮಿಸಿದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
 
ಈಟಿ ನನ್ನ ಕೈಯಿಂದ ಎರಡನೇ ಎಸೆತದಲ್ಲಿ ಹೊರಬಿದ್ದಾಗ, 89 ಮೀಟರ್‌ಗಿಂತ ದೂರಹೋಗುತ್ತದೆಂದು ನಾನು ಎಣಿಸಿರಲಿಲ್ಲ. ಆದರೆ ಕೆಲವು ತಿಂಗಳಿಂದ ನನ್ನ ಫಿಟ್ನೆಸ್‌ ಕುರಿತು ಶ್ರಮಪಟ್ಟು ಕೆಲಸ ಮಾಡಿದ್ದರಿಂದ, ನನ್ನ ತಂತ್ರವು ಫಲನೀಡಿದೆ ಎಂದು ಚೋಪ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಸ್ಪಿನ್ನರ್ ಮೊಹಮ್ಮದ್ ಹಫೀಜ್‌ ಶಂಕಾಸ್ಪದ ಬೌಲಿಂಗ್ ಶೈಲಿಯ ಮರುಪರೀಕ್ಷೆ