ಏಷ್ಯಾ ಕಪ್ ಹಾಕಿ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಎದುರಾಳಿ ಚೀನಾ ವಿರುದ್ಧ 5-4 ಗೋಲುಗಳ ಅಂತರದಿಂದ ಜಯಗಳಿಸಿ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ.
ಇಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳೆಯರ ತಂಡ ಶೂಟೌಟ್‌ನಲ್ಲಿ 5-4 ಅಂತರದಿಂದ ಜಯಗಳಿಸಿ ಅದ್ಭುತ ಸಾಧನೆ ತೋರಿದೆ.
ಗಿಫು ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭದಲ್ಲಿ ಎರಡು ತಂಡಗಳು ಗೋಲ್ ಗಳಿಸುವಲ್ಲಿ ವಿಫಲವಾದವು. ಆದಪೆ ಪಂದ್ಯ ಆರಂಭವಾದ 25ನೇ ನಿಮಿಷದಲ್ಲಿ ಭಾರತ ತಂಡದ ನವಜೋತ್ ಕೌರ್ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು.
60 ನಿಮಿಷಗಳ ಪಂದ್ಯದಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲ್ ಗಳಿಸಿದ್ದರಿಂದ ಶೂಟೌಟ್‌ಗೆ ಆಹ್ವಾನಿಸಲಾಯಿತು. ಶೂಟೌಟ್‌ನಲ್ಲಿ 5-4 ಅಂತರಗಳ ಮೂಲಕ ಜಯಗಳಿಸಿದ ಭಾರತ 13 ವರ್ಷಗಳ ನಂತರ ಏಷ್ಯಾ ಕಪ್ ಮುಡಿಗೇರಿಸಿಕೊಂಡಿದೆ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.