Select Your Language

Notifications

webdunia
webdunia
webdunia
webdunia

ಕೀಫೆ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ: ಪುಣೆ ಟೆಸ್ಟ್`ನಲ್ಲಿ 333 ರನ್`ಗಳ ಹೀನಾಯ ಸೋಲು

ಕೀಫೆ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ: ಪುಣೆ ಟೆಸ್ಟ್`ನಲ್ಲಿ 333 ರನ್`ಗಳ ಹೀನಾಯ ಸೋಲು
pune , ಶನಿವಾರ, 25 ಫೆಬ್ರವರಿ 2017 (14:51 IST)
ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲೇ ಭಾರತ ಹೀನಾಯ ಸೋಲನುಭವಿಸಿದೆ. ತವರುನೆಲದಲ್ಲಿ ವಿದೇಶಿ ಬ್ಯಾಟ್ಸ್`ಮನ್`ಗಳನ್ನ ತಮ್ಮ ಸ್ಪಿನ್ ಕೈಚಳಕದಿಂದ ಕಟ್ಟಿಹಾಕುತ್ತಿದ್ದ ಭಾರತೀಯರಿಗೆ ಕಾಂಗರೂಗಳ ಸ್ಪಿನ್ ಮೋಡಿ ತಲೆತಿರುಗುವಂತೆ ಮಾಡಿದೆ.

2ನೇ ಇನ್ನಿಂಗ್ಸ್`ನಲ್ಲಿ ಆಸ್ಟ್ರೇಲಿಯಾ ನೀಡಿದ 441 ರನ್`ಗಳ ಗುರಿಗೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ಕೇವಲ  107 ರನ್`ಗಳಿಗೆ ಆಲೌಟ್ ಆಗುವ ಮೂಲಕ 333 ರನ್`ಗಳ ಅಂತರದ ಹೀನಾಯ ಸೋಲನುಭವಿಸಿದೆ. ಮೊದಲ ಇನ್ನಿಂಗ್ಸ್`ನಲ್ಲಿ 6 ವಿಕೆಟ್ ಉರುಳಿಸಿದ್ದ ಸ್ಪಿನ್ನರ್ ಕೀಫೆ 2ನೇ ಇನ್ನಿಂಗ್ಸ್`ನಲ್ಲೂ 6 ವಿಕೆಟ್ ಉರುಳಿಸುವ ಮೂಲಕ ಭಾರತಕ್ಕೆ ಸಿಂಹಸ್ವಪ್ನರಾದರು.


ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಭಾರತ ಯಾವುದೇ ಹಂತದಲ್ಲಿ ಆಸೀಸ್ ಸ್ಪಿನ್ನರ್`ಗಳಿಗೆ ಸವಾಲೊಡ್ಡಲು ಸಾಧ್ಯವಾಗಲಿಲ್ಲ. ಪೂಜಾರ ಗಳಿಸಿದ 31 ರನ್ ಭಾರತದ ಪರ ಗರಿಷ್ಠ ಮೊತ್ತ. ನಾಯಕ ಕೊಹ್ಲಿ, ರಹಾನೆ, ವಿಜಯ್ ಎಲ್ಲರೂ ಪೆವಿಲಿಯನ್ ಪರೇಡ್ ನಡೆಸಿದರು.

ಆಸ್ಟ್ರೇಲಿಯಾದ ಸ್ಪಿನ್ನರ್`ಗಳಾದ ಕೀಫೆ 6 ವಿಕೆಟ್ ಉರುಳಿಸಿದರೆ, ನಥನ್ ಲಯೋನ್ 4 ವಿಕೆಟ್ ಕಬಳಿಸಿದರು. ಈ ಮೂಲಕ ಭಾರತದ 19 ಟೆಸ್ಟ್`ಗಳ ಜಯದ ನಾಗಾಲೋಟಕ್ಕೆ ಕಾಂಗರೂಗಳು ಫುಲ್ ಸ್ಟಾಪ್ ಇಟ್ಟಿದ್ದಾರೆ.

ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ: 260 & 285
ಭಾರತ : 105 & 107
ಎಸ್`ಎನ್`ಜೆ ಓ ಕೀಫೆ: 35/6
ನಥನ್ ಲಯೋನ್ : 53/4

Share this Story:

Follow Webdunia kannada

ಮುಂದಿನ ಸುದ್ದಿ

ಪುಣೆ ಟೆಸ್ಟ್: ಭಾರತದ ಗೆಲುವಿಗೆ 441 ರನ್ ಟಾರ್ಗೆಟ್