Select Your Language

Notifications

webdunia
webdunia
webdunia
webdunia

ಪುಣೆ ಟೆಸ್ಟ್: ಭಾರತದ ಗೆಲುವಿಗೆ 441 ರನ್ ಟಾರ್ಗೆಟ್

ಪುಣೆ ಟೆಸ್ಟ್: ಭಾರತದ ಗೆಲುವಿಗೆ 441 ರನ್ ಟಾರ್ಗೆಟ್
pune , ಶನಿವಾರ, 25 ಫೆಬ್ರವರಿ 2017 (12:00 IST)
ಪುಣೆ ಟೆಸ್ಟ್`ನಲ್ಲಿ ಭಾರತ ಗೆಲ್ಲಲು 2ನೇ ಇನ್ನಿಂಗ್ಸ್`ನಲ್ಲಿ 441 ರನ್ ಗಳಿಸಬೇಕಿದೆ. 2ನೇ ಇನ್ನಿಂಗ್ಸ್`ನಲ್ಲಿ ಆಸ್ಟ್ರೇಲಿಯಾ ತಂಡ 285 ರನ್`ಗಳಿಗೆ ಆಲೌಟ್ ಆಗುವ ಒಟ್ಟಾರೆ ಭಾರತಕ್ಕೆ 441 ರನ್`ಗಳ ಗುರಿ ನೀಡಿದೆ.


ನಿನ್ನೆ 143 ರನ್`ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ಇವತ್ತು 285 ರನ್`ಗಳಿಗೆ ಆಲೌಟ್ ಆಯಿತು. ಅಮೋಘ 109 ರನ್ ಸಿಡಿಸಿದ ನಾಯಕ ಸ್ಟೀವ್ ಸ್ಮಿತ್ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. ಭಾರತದ ಪರ ಅಶ್ವಿನ್ 4, ಜಡೇಜಾ 3 ಮತ್ತು  ಉಮೇಶ್ ಯಾದವ್ 2 ವಿಕೆಟ್ ಪಡೆದಿದ್ದಾರೆ.

ಇವತ್ತು ಪಂದ್ಯದ 3ನೇ ದಿನವಾಗಿದ್ದು, ಟರ್ನಿಂಗ್ ಪಿಚ್`ನಲ್ಲಿ ಭಾರತದ ಬ್ಯಾಟ್ಸ್`ಮನ್`ಗಳು ರನ್ ಗಳಿಸಲು ಪರದಾಡಬೇಕಿದೆ. ಸ್ವಲ್ಪ ಯಾಮಾರಿದರೂ ಆಸೀಸ್ ಬೌಲರ್`ಗಳು ಮೆರೆದಾಡುವ ಸಾಧ್ಯತೆ ಇದೆ.  

ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ: 260 ಮತ್ತು 285
ಭಾರತ : 105
ಸ್ಟೀವ್ ಸ್ಮಿತ್ : 109 ರನ್

 

Share this Story:

Follow Webdunia kannada

ಮುಂದಿನ ಸುದ್ದಿ

ಶತಕ ಸಿಡಿಸಿ ಭಾರತವನ್ನ ಕಾಡಿದ ರನ್ ಮೆಶಿನ್ ಸ್ಟೀವ್ ಸ್ಮಿತ್