Select Your Language

Notifications

webdunia
webdunia
webdunia
webdunia

ಪಾಕ್ ತಂಡದ ನಾಯಕ ಸರ್ಫರಾಜ್ ಪುತ್ರನನ್ನು ಎತ್ತಿಕೊಂಡು ಧೋನಿ ಫೋಟೊ

ಪಾಕ್ ತಂಡದ ನಾಯಕ ಸರ್ಫರಾಜ್ ಪುತ್ರನನ್ನು ಎತ್ತಿಕೊಂಡು ಧೋನಿ ಫೋಟೊ
ಲಂಡನ್ , ಭಾನುವಾರ, 18 ಜೂನ್ 2017 (11:11 IST)
ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪಾಕ್  ತಂಡದ ನಾಯಕ ಸರ್ಫರಾಜ್ ಖಾನ್ ಅವರ ಮಗನನ್ನು ಎತ್ತಿಕೊಂಡಿರುವ ಫೋಟೊ ಈಗ ವೈರಲ್ ಆಗಿದೆ.
 
ಉಭಯ ದೇಶಗಳ ನಡುವಿನ ಪಂದ್ಯಕ್ಕೂ ಮುನ್ನ ಧೋನಿ ಪಾಕ್ ತಂಡದ ನಾಯಕ ಸರ್ಫರಾಜ್ ಖಾನ್ ಅವರ ಕುಟುಂಬದೊಂದಿಗೆ ಕೆಲ ಕ್ಷಣಗಳನ್ನು ಕಳೆದಿದ್ದು, ಸರ್ಫರಾಜ್ ಪುತ್ರ ಅಬ್ದುಲ್ಲಾ ನನ್ನು  ಎತ್ತಿಕೊಂಡು ಚಿತ್ರ ತೆಗೆಸಿಕೊಂಡಿದ್ದಾರೆ. ಧೋನಿ ಅವರ ಈ ಕಾರ್ಯ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.
 
ಉಭಯ ದೇಶಗಳ ನಡುವೆ ಗಡಿ ವಿಚಾರದಲ್ಲಿ ಬಿಕ್ಕಟ್ಟಿನ ನಡುವೆಯೂ ಭಾರತ ತಂಡದ ಮಾಜಿ ನಾಯಕ ಧೋನಿ ಅವರ ಈ ಕಾರ್ಯ ಸಾಮರಸ್ಯ ಬೆಸೆಯುವ ಪ್ರಯತ್ನವಾಗಿದೆ ಎನ್ನಲಾಗುತ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯದ ಲಿಮಿಟ್ ಮೀರಬೇಡಿ, ಮ್ಯಾಚ್ ಎಂಜಾಯ್ ಮಾಡಿ