Webdunia - Bharat's app for daily news and videos

Install App

ಬೆಂಗಳೂರಿಗೆ ಬಂದ ಬಾರ್ಸ್ ಅಕಾಡೆಮಿ

Webdunia
ಸೋಮವಾರ, 8 ಅಕ್ಟೋಬರ್ 2018 (16:04 IST)
ದೇಶದ ಶೈಕ್ಷಣಿಕ ವಲಯದಲ್ಲಿ ್ಲ ಅತ್ಯಂತ ಜನಪ್ರಿಯವಾಗಿರುವ ಬಾರ್ಸ (ಬಿಎಆರ್‍ಸಿಎ) ಅಕಾಡೆಮಿ ಬೆಂಗಳೂರು ಜತೆಗಿನ ಬಾಂಧ್ಯವವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆಯಿಟ್ಟಿದೆ.

ಬೆಂಗಳೂರಿನ ಎರಡು ಕಡೆ ಫುಟ್‍ಬಾಲ್ ತರಬೇತಿ ಶಾಲೆಗಳನ್ನು ಆರಂಭಿಸಲು ಬಾರ್ಸ ಸಂಸ್ಥೆ ನಿರ್ಧರಿಸಿದೆ. ಯಲಹಂಕ ಸಮೀಪದ ಸಹಕಾರ ನಗರದಲ್ಲಿ ಟ್ರಿಯೋ ವಲ್ರ್ಡ್ ಅಕಾಡೆಮಿ ಹಾಗೂ ವೈಟ್‍ಫೀಲ್ಡ್ ಬಳಿ ಎಕ್ಯುಮೆನಿಕಲ್ ಕ್ರಿಶ್ಚಿಯನ್ ಕೇಂದ್ರದಲ್ಲಿ ತರಬೇತಿ ಕೇಂದ್ರಗಳನ್ನು ಅರಂಭಿಸಲು ತೀರ್ಮಾನಿಸಿ, ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. 2018ರ ನ.19ರಂದು ಎರಡೂ ಕೇಂದ್ರಗಳಿಗೆ ಅಧಿಕೃತವಾಗಿ ಚಾಲನೆ ನೀಡಲು ನಿರ್ಧರಿಸಿದ್ದು, ಎರಡೂ ಕೇಂದ್ರಗಳಲ್ಲಿ 1 ಸಾವಿರ ಹೊಸ ಯುವಕರಿಗೆ ಫುಟ್‍ಬಾಲ್ ತರಬೇತಿ ನೀಡಲು ತೀರ್ಮಾನಿಸಿದೆ.
 
 ಬಾರ್ಸ್ ಅಕಾಡೆಮಿಯ ತಾಂತ್ರಿಕ ನಿರ್ದೇಶಕ ಜೊರ್ಡಿ ಎಸ್ಕೋಬಾರ್ ಬೆಂಗಳೂರು ಕೇಂದ್ರಗಳ ನಿರ್ವಹಣಾ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇವರ ನೇತೃತ್ವದಲ್ಲಿ ಒಟ್ಟು 12 ಫುಟ್‍ಬಾಲ್ ಕೋಚ್‍ಗಳು ತರಬೇತಿ ನೀಡಲಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಹೊಸ ಯುವಕರಿಗೆ ತರಬೇತಿ ನೀಡಲಾಗುತ್ತದೆ. ಪ್ರತಿ ಕೇಂದ್ರದಲ್ಲಿ ವಾರಕ್ಕೆ 3 ದಿನ ತರಬೇತಿ ನೀಡಲಾಗುತ್ತದೆ.
 
 ಅಕಾಡೆಮಿ ಏಷಿಯಾ ಪೆಸಿಫಿಕ್ ಕಪ್ ಟೂರ್ನಿ ಆಯೋಜನೆ ಸಿದ್ಧತೆ ಸಂದರ್ಭದಲ್ಲೆ ಬೆಂಗಳೂರನಲ್ಲಿ ಈ ಎರಡೂ ಕೇಂದ್ರಗಳ ಉದ್ಘಾನೆಯಾಗಲಿವೆ. ಪೆಸಿಫಿಕ್ ಕಪ್ ಟೂರ್ನಿಗೆ ಗುರ್‍ಗಾಂವ್ ಆತಿಥ್ಯ ವಹಿಸುತ್ತಿದ್ದು, ಈ ವಿಚಾರವನ್ನು ಅರ್ಜೆಂಟಿನಾದ ಮಾಜಿ ವಿಶ್ವಕಪ್ ಆಟಗಾರ ಜೇವಿಯರ್ ಸವಿಯೋಲಾ ಅವರು ಘೋಷಣೆ ಮಾಡಲಿದ್ದಾರೆ.
 
 ಅಕಾಡೆಮಿ, ಮುಖ್ಯಸ್ಥ ಆಂಥೋನಿಯೊ ಕ್ಲವರಿಯಾ ಮಾತನಾಡಿ, “ಭಾರತೀಯರಿಗೆ ಕ್ರೀಡೆಯ ಜತೆಗೆ ವಿಶೇಷ ಬಾಂಧವ್ಯವಿದೆ. ಅದರಲ್ಲೂ ಫುಟ್‍ಬಾಲ್ ಆಟಕ್ಕೆ ಬೇರೆಲ್ಲ ಆಟಗಳಿಗಿಂಥ ಹೆಚ್ಚಿನ ಮಹತ್ವ ನೀಡುತ್ತಾರೆ. ಯುವಪೀಳಿಗೆಗೆ ಫುಟ್‍ಬಾಲ್ ಅಚ್ಚುಮೆಚ್ಚಿನ ಆಟವಾಗಿದೆ. ಕಳೆದ 7 ವರ್ಷಗಳಿಂದ ಬಾರ್ಸ ಅಕಾಡೆಮಿ ಹೊಸ ಫುಟ್‍ಬಾಲ್ ಆಟಗಾರರನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತ ಮುಂದೆ ಬಂದಿದೆ” ಎಂದು ಹೇಳಿದರು.
 
ಭಾರತದಲ್ಲಿ 2011ರಲ್ಲಿ (ನವದೆಹಲಿಯಲ್ಲಿ) ಮೊದಲ ಫುಟ್‍ಬಾಲ್ ತರಬೇತಿಯನ್ನು ಕಾನ್ಸಿಯಂಟ್ ಫುಟ್‍ಬಾಲ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ ಪ್ರಮುಖ ಯುರೋಪ್ ಕ್ಲಬ್‍ಗಳಲ್ಲಿ ಎಫ್‍ಸಿಬಾರ್ಸಿಲೋನಾ ಕೂಡ ಒಂದು. ಆ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆದಿತ್ತು. ಅದಾದ ಬಳಿಕ ದೇಶದ ಪ್ರಮುಖ ನಗರದಲ್ಲಿ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ಇದಾದ ಬಳಿಕ ಎಫ್‍ಸಿಬಿ ಹಾಗೂ ಎಫ್‍ಸಿ ಸಹಭಾಗಿತ್ವದಲ್ಲಿ ಮೊದಲ ಬಾರಿಗೆ ಬಾರ್ಸ ಅಕಾಡೆಮಿಯಿಂದ ತರಬೇತಿ ಕೇಂದ್ರ ಶುರು ಮಾಡಲಾಗಿತ್ತು.
 
 ಬಾರ್ಸ ಅಕಾಡೆಮಿಯಲ್ಲಿ ತರಬೇತಿ ಪಡೆದ ಅದೆಷ್ಟೊ ಫುಟ್‍ಬಾಲ್ ಆಟಗಾರರು ಬಾರ್ಸಿಲೋನಾಗೆ ಪ್ರಯಾಣ ಬೆಳೆಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದಾರೆ. ಈವರೆಗೆ 25 ಸಾವಿರಕ್ಕೂ ಹೆಚ್ಚು ಆಟಗಾರರಿಗೆ ತರಬೇತಿ ಕೊಟ್ಟು ತಯಾರು ಮಾಡುವ ಮುಖಾಂತರ ಬಾರ್ಸ ಅಕಾಡೆಮಿ ಫುಟಬಾಲ್ ಕ್ಷೇತ್ರಕ್ಕೆ ಕೊಡುಗೆ ನೀಡಿದೆ. ಇದೇ ವೇಳೆ ಕಾನ್ಸಿಯಂಟ್ ಫುಟ್‍ಬಾಲ್ ಸಂಸ್ಥೆಯ ನಿರ್ದೇಶಕಿ ಅನುಪಮಾ ಜೈನ್ ಮಾತನಾಡಿ, “2011ರಲ್ಲಿ ಎಫ್‍ಸಿಬಿ ಹಾಗೂ ಎಫ್‍ಸಿ ಜಂಟಿಯಾಗಿ ಭಾರತದಲ್ಲಿ ಬಾರ್ಸ ಅಕಾಡೆಮಿ ಸ್ಥಾಪನೆ ಮಾಡಿತ್ತು. ಫುಟ್‍ಬಾಲ್ ಆಟದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಾರ್ಸ ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ. ಹಲವು ತರಬೇತಿ ಶಿಬಿರಗಳನ್ನು ನಡೆಸುತ್ತಿದೆ” ಎಂದು ವಿವರಿಸಿದರು.
 
 ಬಾರ್ಸ ಅಕಾಡೆಮಿ ಟ್ರೈನಿಂಗ್ ಕೇಂದ್ರಗಳಲ್ಲಿ ಆಟಗಾರರಿಗೆ ಬರೀ ತರಬೇತಿ ಮಾತ್ರ ನೀಡುತ್ತಿಲ್ಲ. ಬದಲಾಗಿ ಸ್ನೇಹ, ಪ್ರೀತಿ, ನಂಬಿಕೆ ಹಾಗೂ ನೈತಿಕ ಮೌಲ್ಯಗಳ ಕುರಿತು ಕಲಿಸಲಾಗುತ್ತದೆ. ತರಬೇತಿ ಪಡೆಯುವ ಆಟಗಾರರ ಆರೋಗ್ಯ, ಫಿಟ್‍ನೆಸ್, ಪೌಷ್ಟಿಕತೆಯ ಬಗ್ಗೆಯೂ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಇಂಥ ತರಬೇತಿಯಿಂದ ಮಕ್ಕಳು ಹಾಗೂ ಅವರ ಪಾಲಕರಿಗೆ ಹೆಚ್ಚಿನ ಲಾಭವಿದೆ ಎಂದು ಹೇಳಿದರು.
 
 ಬಾರ್ಸ ಅಕಾಡೆಮಿ ಹಲವು ಉತ್ತಮ ಆಟಗಾರರನ್ನು ಸೃಷ್ಟಿಸುವ ನಿಟ್ಟಿನಲ್ಲಿ ವಿಶ್ವದಲ್ಲೆ ಅತ್ಯುತ್ಯಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮೆಸ್ಸಿ, ಇನಿಯಸ್ಟ ಅವರಂಥ ಶ್ರೇಷ್ಟ ಆಟಗಾರರನ್ನು ತಯಾರು ಮಾಡಲಾಗುತ್ತಿದೆ. ಇಂಡಿಯಾ ಯು17 ವಲ್ರ್ಡ ಕಪ್, ಹರಿಯಾಣ, ದೆಹಲಿ ಸಬ್ ಜೂನಿಯರ್ ಮತ್ತು ಜೂನಿಯರ್ ಸ್ಟೇಟ್ ತಂಡ ಹಾಗೂ ದೆಹಲಿ ಫುಟ್‍ಬಾಲ್ ಲೀಗ್‍ಗಳಲ್ಲಿ ಬಾರ್ಸ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಆಟಗಾರರು ಭಾಗವಹಿಸುತ್ತಿದ್ದಾರೆ. ಭಾರತದಲ್ಲಿ ಬಾರ್ಸ ಅಕಾಡೆಮಿ ಅತಿದೊಡ್ಡ ತರಬೇತಿ ಸಂಸ್ಥೆಯಾಗಿದೆ. ಎಐಎಫ್‍ಎಫ್ ಸಂಸ್ಥೆ ಕೂಡ ಬಾರ್ಸ ಅಕಾಡೆಮಿ ಉಳಿದೆಲ್ಲ ಅಕಾಡೆಮಿಗಳಿಗಿಂಥ ಅಗ್ರಸ್ಥಾನದಲ್ಲಿದೆ ಎಂದು ಹೇಳಿದೆ.
 
 ಎಫ್‍ಸಿ ಬಾರ್ಸಿಲೋನಾ ಬಗ್ಗೆ:
 
ಎಫ್‍ಸಿಬಾರ್ಸಿಲೋನ 1899ರಲ್ಲಿ ಸ್ಥಾಪನೆಯಾಯಿತು. ಇಂದು ಇಡೀ ವಿಶ್ವದಲ್ಲೆ ಅತ್ಯಂತ ಜನಪ್ರಿಯ ಫುಟ್‍ಬಾಲ್ ಕ್ಲಬ್‍ಗಳ ಸಾಲಿನಲ್ಲಿ ಪ್ರಮುಖ ಸ್ಥಾನದಲ್ಲಿದೆ. ವಿಶ್ವದಾದ್ಯಂತ ಅಭಿಮಾನಿಗಳು ಹಾಗೂ ಕ್ಲಬ್ ಸದಸ್ಯರನ್ನು ಹೊಂದಿದೆ. ಅತ್ಯುತ್ತಮ ಆಟಗಾರರನ್ನು ಫುಟ್‍ಬಾಲ್ ಕ್ಷೇತ್ರಕ್ಕೆ ನೀಡುವ ನಿಟ್ಟಿನಲ್ಲಿ ಈ ಸಂಸ್ಥೆ ನಿರಂತರವಾಗಿ ಕೆಲಸ ಮಾಡುತ್ತಿದೆ.
 
ಕಾನ್ಸಿಯಂಟ್ ಫುಟ್‍ಬಾಲ್ ಕುರಿತು:
 
ಕಾನ್ಸಿಯಂಟ್ ಫುಟ್‍ಬಾಲ್ ಸಂಸ್ಥೆಯು ಜನಸಾಮಾನ್ಯರ ಅಭಿವೃದ್ಧಿ ಹಾಗೂ ಶೈP್ಷÀಣಿಕ ಅಭ್ಯುದಯದ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಫುಟ್‍ಬಾಲ್ ಕ್ಷೇತ್ರದ ಏಳಿಗೆಗಾಗಿ ಶ್ರಮಿಸುತ್ತಿರುವ ಸಂಸ್ಥೆಗಳಲ್ಲಿ ಕಾನ್ಸಿಯಂಟ್ ಪುಟ್‍ಬಾಲ್ ಸಂಸ್ಥೆಯೂ ಒಂದಾಗಿದೆ. ಹಲವು ಕಾರ್ಯಕ್ರಮಗಳ ಆಯೋಜನೆ ಮುಖಾಂತರ ಜನಪ್ರಿಯವಾಗಿದೆ. ಫುಟ್‍ಬಾಲ್ ಟೂರ್ನಿ, ತರಬೇತಿ ಶಿಬಿರ ಹಾಗೂ ಕೋಚಿಂಗ್ ಕೋರ್ಸ್‍ಗಳನ್ನು ಆಯೋಜಿಸುತ್ತಿದೆ. ಹೊಸ ಫುಟ್‍ಬಾಲ್ ಆಟಗಾರರು ಗುರುತಿಸಿಕೊಳ್ಳಲು ಸಹಕಾರಿಯಾಗುವಂಥ ಪ್ರವಾಸಗಳನ್ನು ಆಯೋಜಿಸುವ ಮೂಲಕ ನೆರವು ನೀಡುತ್ತಿದೆ.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments