ಇಂಗ್ಲೆಂಡ್ ಬೌಲರ್ ಗಳು ತಿರುಗೇಟು ನೀಡುವ ಮೂಲಕ ಭಾರತ ಮತ್ತು ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟ ತಲುಪಿದೆ.
ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಭಾರತ ಭೋಜನ ವಿರಾಮಕ್ಕೂ ಮುನ್ನ 6 ವಿಕೆಟ್ ಕಳೆದುಕೊಂಡು 329 ರನ್ ಗಳಿಸಿದೆ. ಮೊದಲ ಇನಿಂಗ್ಸ್ ನಲ್ಲಿ 99 ರನ್ ಗಳ ಹಿನ್ನಡೆ ಅನುಭವಿಸಿದ್ದ ಭಾರತ ಇದೀಗ 230 ರನ್ ಗಳ ಮುನ್ನಡೆ ಗಳಿಸಿದೆ.
ನಿನ್ನೆ ಕ್ರೀಸ್ ನಲ್ಲಿದ್ದ ನಾಯಕ ವಿರಾಟ್ ಕೊಹ್ಲಿ (44), ರವೀಂದ್ರ ಜಡೇಜಾ (17) ಮತ್ತು ರನ್ ಬರ ಎದುರಿಸುತ್ತಿರುವ ಅಜಿಂಕ್ಯ ರಹಾನೆ (0) ಔಟಾಗಿದ್ದರಿಂದ ಭಾರತ ಬೃಹತ್ ಮೊತ್ತದ ಮುನ್ನಡೆಗೆ ಹಿನ್ನಡೆ ಉಂಟಾದಂತೆ ಆಗಿದೆ. ಕ್ರಿಸ್ ವೋಕ್ಸ್ 2 ವಿಕೆಟ್ ಪಡೆದರೆ, ಕೊಹ್ಲಿ ಅವರ ವಿಕೆಟ್ ಅನ್ನು ಮೊಯಿನ್ ಅಲಿ ಪಡೆದು ಆಘಾತ ನೀಡಿದ್ದಾರೆ.
16 ರನ್ ಗಳಿಸಿರುವ ರಿಷಭ್ ಪಂತ್ ಮತ್ತು ಮೊದಲ ಇನಿಂಗ್ಸ್ ನಲ್ಲಿ ಅರ್ಧಶತಕ ಸಿಡಿಸಿದ್ದ ಶಾರ್ದೂಲ್ ಠಾಕೂರ್ 11 ರನ್ ಬಾರಿಸಿ ಕ್ರಿಸ್ ನಲ್ಲಿದ್ದಾರೆ.