Select Your Language

Notifications

webdunia
webdunia
webdunia
webdunia

ಐಸಿಐಸಿಐ ಬ್ಯಾಂಕ್ ತ್ರೈಮಾಸಿಕ ಫಲಿತಾಂಶ ಕುಸಿತ: ಸಂವೇದಿ ಸೂಚ್ಯಂಕ ಇಳಿಕೆ

ಸೆನ್ಸೆಕ್ಸ್
ಐಸಿಐಸಿಐ ಬ್ಯಾಂಕ್ ತ್ರೈಮಾಸಿಕ ಫಲಿತಾಂಶ ನಿರಾಶಾದಾಯಕವಾದ ಹಿನ್ನೆಲೆಯಲ್ಲಿ ಹೂಡಿಕೆದಾರರು ಲಾಬದಾಯಕ ವಹಿವಾಟಿಗೆ ಮೊರೆಹೋಗಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 49 ಪಾಯಿಂಟ್‌ಗಳ ಕುಸಿತ ಕಂಡಿದೆ. 
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ ಶೇ.1.95 ರಷ್ಟು ಕುಸಿತ ಕಂಡು 8,636.55 ಅಂಕಗಳಿಗೆ ತಲುಪಿದೆ.
 
ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 48.74 ಪಾಯಿಂಟ್‌ಗಳ ಇಳಿಕೆ ಕಂಡು  28,003.12 ಅಂಕಗಳಿಗೆ ತಲುಪಿದೆ. 
 
ಟಿಸಿಎಸ್, ಟಾಟಾ ಸ್ಟೀಲ್, ಮಾರುತಿ, ವಿಪ್ರೋ, ಡಾ.ರೆಡ್ಡಿ ಲ್ಯಾಬ್ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿದ್ದರೆ, ಐಸಿಐಸಿಐ ಬ್ಯಾಂಕ್, ಎಲ್‌ಆಂಡ್‌ಟಿ, ಆದಾನಿ ಪೋರ್ಟ್ಸ್, ಲುಪಿನ್ ಮತ್ತು ಎಸ್‌ಬಿಐ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.
 
ರಾಜ್ಯಸಭೆಯಲ್ಲಿ ಬಹುನಿರೀಕ್ಷಿತ ಜಿಎಸ್‌ಟಿ ಮಸೂದೆ ಅಂಗೀಕಾರವಾಗುವ ನಿರೀಕ್ಷೆಗಳ ಹಿನ್ನೆಲೆಯಲ್ಲಿ, ಕಳೆದ ವಾರದಿಂದ ಶೇರುಪೇಟೆ ಚೇತರಿಕೆ ಕಂಡಿತ್ತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಜಯಲಲಿತಾ ತಮ್ಮ ನಿವಾಸದಲ್ಲಿ ನಾಯಿಯಂತೆ ಕಟ್ಟಿಹಾಕಿದ್ದರು: ಸಂಸದೆ ಶಶಿಕಲಾ ಪುಷ್ಪಾ