Select Your Language

Notifications

webdunia
webdunia
webdunia
webdunia

ಸಿಎಂ ಜಯಲಲಿತಾ ತಮ್ಮ ನಿವಾಸದಲ್ಲಿ ನಾಯಿಯಂತೆ ಕಟ್ಟಿಹಾಕಿದ್ದರು: ಸಂಸದೆ ಶಶಿಕಲಾ ಪುಷ್ಪಾ

ಸಿಎಂ ಜಯಲಲಿತಾ  ತಮ್ಮ ನಿವಾಸದಲ್ಲಿ ನಾಯಿಯಂತೆ ಕಟ್ಟಿಹಾಕಿದ್ದರು: ಸಂಸದೆ ಶಶಿಕಲಾ ಪುಷ್ಪಾ
ನವದೆಹಲಿ , ಸೋಮವಾರ, 1 ಆಗಸ್ಟ್ 2016 (19:29 IST)
ಎಐಎಡಿಎಂಕೆ ಮುಖ್ಯಸ್ಥೆ, ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಸುಮಾರು ಎರಡು ತಿಂಗಳುಗಳ ಕಾಲ ತಮ್ಮ ಪೋಯಿಸ್ ಗಾರ್ಡನ್‌ ನಿವಾಸದಲ್ಲಿ ನಾಯಿಯಂತೆ ಬಂಧನದಲ್ಲಿಟ್ಟು ರಾಜೀನಾಮೆ ಕೊಡುವಂತೆ ಒತ್ತಡೃ ಹೇರಿದ್ದರು ಎಂದು ಎಐಎಡಿಎಂಕೆ ಉಚ್ಚಾಟಿತ ಸಂಸದೆ ಶಶಿಕಲಾ ಪುಷ್ಪಾ ಆರೋಪಿಸಿದ್ದಾರೆ.  
ಸಂಸತ್ತಿನ ಹೊರ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ತಿಂಗಳುಗಳಿಂದ ನನಗೆ ಮನೆಗೆ ಹೋಗಲು ಅವಕಾಶ ನೀಡಲಿಲ್ಲ. ಅವರ ಮನೆಯಲ್ಲಿ ನಾಯಿಯಂತೆ ಕಟ್ಟಿಹಾಕಿ ಜೀವ ಬೆದರಿಕೆಯೊಡ್ಡಲಾಗಿತ್ತು ಎಂದು ಸಿಎಂ ಜಯಲಲಿತಾ ವಿರುದ್ಧ ಗಂಬೀರ ಆರೋಪ ಮಾಡಿದ್ದಾರೆ.
 
ಎಐಎಡಿಎಂಕೆ ಪಕ್ಷ ತಮ್ಮನ್ನು ಉಚ್ಚಿಟಿಸಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಇದೀಗ ನಾನು ನನ್ನ ಸ್ವಂತ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
 
ಮುಖ್ಯಮಂತ್ರಿ ಜೆ.ಜಯಲಲಿತಾ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಿದ್ದ ಸಂಸದೆ ಶಶಿಕಲಾ, ಸುದ್ದಿಗಾರರ ಎದುರು ಸ್ಪಷ್ಟಪಡಿಸಲು ನಿರಾಕರಿಸಿದರು.
 
ವಿಪಕ್ಷವಾದ ಡಿಎಂಕೆ ನಾಯಕನಿಗೆ ಕಪಾಳ ಮೋಕ್ಷ ಮಾಡಿದ ಆರೋಪದ ಮೇಲೆ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ನಂತರ ಸುದ್ದಿಗಾರರಿಗೆ ಸಂಸದೆ ಶಶಿಕಲಾ ಪ್ರತಿಕ್ರಿಯೆ ನೀಡಿದ್ದಾರೆ.
 
ಮುಖ್ಯಮಂತ್ರಿ ಜೆ.ಜಯಲಲಿತಾ ಪ್ರಕಟಣೆಯೊಂದನ್ನು ಹೊರಡಿಸಿ, ಪಕ್ಷದ ಸಿದ್ದಾಂತಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸಂಸದೆ ಶಶಿಕಲಾ ಪುಷ್ಪಾ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳು ಮತ್ತು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಘೋಷಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಆನಂದಿಬೆನ್ ಪಟೇಲ್