69ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಭಾರತ

Webdunia
ಶುಕ್ರವಾರ, 19 ಜನವರಿ 2018 (16:35 IST)
ನವದೆಹಲಿ: 2018 ರ ಜನವರಿ 26 ರಂದು ಭಾರತ ದೇಶಕ್ಕೆ 69ನೇ ಗಣರಾಜ್ಯೋತ್ಸವದ ಸಂಭ್ರಮ. ಭಾರತ ಪ್ರಜಾಪ್ರಭುತ್ವ ದೇಶವಾಗಿ ಮಾರ್ಪಟ್ಟು 69 ವರ್ಷಗಳಾಗುತ್ತವೆ. ಈ ಗಣರಾಜ್ಯೋತ್ಸವದಂದು ಆಗ್ನೇಯ ಏಷ್ಯಾ ದೇಶಗಳ ಒಕ್ಕೂಟದ (ಆಸಿಯಾನ್) 10 ದೇಶಗಳ ನಾಯಕರು ಪಾಲ್ಗೋಳ್ಳುತ್ತಿರುವುದು ವಿಶೇಷವಾಗಿದೆ.

 
ಗಣರಾಜ್ಯೋತ್ಸವದಲ್ಲಿ ಆಸಿಯಾನ್‌‌ದ ಹತ್ತು ದೇಶಗಳ ಪ್ರಮುಖರು ಮತ್ತು ಅವರ ಕುಟುಂಬ ಸದಸ್ಯರು ಪಾಲ್ಗೊಳ್ಳಲಿದ್ದು ಪರೇಡ್‌ನ‌ಲ್ಲಿ ಆಸಿಯಾನ್‌-ಇಂಡಿಯಾ ಟ್ಯಾಬ್ಲೋ ಪ್ರಮುಖ ಆಕರ್ಷಣೆಯನ್ನು ಪಡೆಯಲಿದೆ. ಟ್ಯಾಬ್ಲೋದಲ್ಲಿ ರಾಮಾಯಣದ ಪ್ರಸಂಗವನ್ನು ಕಲಾವಿದರು ಪ್ರದರ್ಶಿಸಲಿದ್ದಾರೆ.
 
ವಿದೇಶಿ ಗಣ್ಯರು ಅತಿಥಿಗಳಾಗಿ ಆಗಮಿಸುತ್ತಿರುವುದರಿಂದ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೇಂದ್ರ ಲೋಕೋಪಯೋಗಿ ಇಲಾಖೆಯು 95 ಅಡಿ ಅಗಲದ ವೇದಿಕೆ ಸಿದ್ಧಪಡಿಸುತ್ತಿದೆ. ಇದೇ ಸಂದರ್ಭದಲ್ಲಿ ನವದೆಹಲಿಯಲ್ಲಿ ಆಸಿಯಾನ್‌-ಇಂಡಿಯಾ ದೇಶಗಳ ಮೈತ್ರಿಕೂಟವಾಗಿ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಸಿಯಾನ್‌ ರಾಷ್ಟ್ರಗಳ ಸಮಾವೇಶವು ನಡೆಯಲಿದೆ.
 
ಆಸಿಯಾನ್‌ ನಾಯಕರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾಗತಿಸಲಿದ್ದು. ಸಮ್ಮೇಳನದ ಅಧ್ಯಕ್ಷತೆಯನ್ನು ಸಿಂಗಪುರ್ ಪ್ರಧಾನಮಂತ್ರಿ ಲೀ ಹೀಸನ್‌ ಲೂಂಗ್‌ ಆಸಿಯಾನ್‌ ವಹಿಸಲಿದ್ದಾರೆ.
 
ಥೈಲ್ಯಾಂಡ್, ವಿಯೆಟ್ನಾಂ, ಇಂಡೋನೇಷ್ಯಾ, ಮಲೇಷ್ಯಾ, ಪಿಲಿಪೀನ್ಸ್, ಸಿಂಗಪುರ್, ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್, ಬ್ರೂನೆ ದೇಶಗಳ ಒಕ್ಕೂಟವೇ ಆಗ್ನೇಯ ಏಷ್ಯಾ ದೇಶಗಳ ಒಕ್ಕೂಟ (ಆಸಿಯಾನ್).

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್‌ನೊಂದಿಗೆ ಕಾರಿನಲ್ಲಿ ಒಟ್ಟಿಗೆ ಪ್ರಯಾಣಿಸಿದ ಪ್ರಧಾನಿ ಮೋದಿ

ಸೈಟ್ ವಿಚಾರವಾಗಿ ಸುಮ್ಮನಾಗಲ್ಲ ಎಂದ ಯಶ್ ತಾಯಿ ಪುಷ್ಪಾ ಇದೀಗ ಎಸ್‌ಪಿಯನ್ನು ಭೇಟಿಯಾಗಿದ್ಯಾಕೆ

ಬಿಜೆಪಿ ಕೇಂದ್ರ ಸಚಿವನ ಕಾರ್ಯವೈಖರಿ ಸೋತುಹೋದ ಜಮೀರ್ ಅಹ್ಮದ್‌, ಹೇಳಿದ್ದೇನು

ಬೈಕ್ ಸವಾರನ ಅತಿ ವೇಗದ ಚಾಲನೆಗೆ ವಿದ್ಯುತ್ ಕಂಬವೇ ಎರಡು ತುಂಡು, ಮೈ ಝುಮ್ಮೆನಿಸುತ್ತದೆ, Video

ಕೋಝಿಕ್ಕೋಡ್‌ನ ಜಯಲಕ್ಷ್ಮಿ ಸಿಲ್ಕ್ಸ್‌ನಲ್ಲಿ ಜನ ಕಿಕ್ಕಿರಿದ್ದ ವೇಳೆಯೇ ನಡೆಯಿತು ಬೆಂಕಿ ಅವಘಡ

ಮುಂದಿನ ಸುದ್ದಿ
Show comments