Publish Date: Thu, 18 Jan 2018 (08:49 IST)
Updated Date: Thu, 18 Jan 2018 (08:52 IST)
ಸೆಂಚೂರಿಯನ್: ಸೋತವರ ಮೇಲೆ ಆಳಿಗೊಂದು ಕಲ್ಲಿನಂತೆ ಎಸೆಯುತ್ತಾರೆ ಎನ್ನುವುದು ನಿಜವೇ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಚಾರದಲ್ಲೂ ಹಾಗೆಯೇ ಆಗಿದೆ. ಕೊಹ್ಲಿ ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸಿಟ್ಟಿಗೆದ್ದ ಘಟನೆ ನಡೆದಿದೆ.
ಸರಣಿ ಸೋತ ಬಳಿಕ ಸುದ್ದಿಗೋಷ್ಠಿಗೆ ಬಂದ ಕೊಹ್ಲಿ ಪತ್ರಕರ್ತರು ಸಾಕಷ್ಟು ತೀಕ್ಷ್ಣ ಪ್ರಶ್ನೆಗಳನ್ನೇ ಕೇಳುತ್ತಿದ್ದರು. ಆರಂಭದಲ್ಲಿ ಶಾಂತವಾಗಿಯೇ ಉತ್ತರಿಸುತ್ತಿದ್ದ ಕೊಹ್ಲಿ ಕೊನೆಯಲ್ಲಿ ತಾಳ್ಮೆ ಕಳೆದುಕೊಂಡರು.
ನೀವು ಅತ್ಯುತ್ತಮ 11 ರ ಬಳಗವನ್ನು ಆರಿಸಿದ್ದೀರಾ ಎಂದು ಪತ್ರಕರ್ತರು ಕೇಳಿದಾಗ ಕೆಂಡಾಮಂಡಲರಾದ ಕೊಹ್ಲಿ ‘ಅತ್ಯುತ್ತಮ 11 ಕ್ರಿಕೆಟಿಗರು ಎಂದರೆ ಯಾರು? ಒಂದು ವೇಳೆ ನಾವು ಗೆದ್ದಿದ್ದರೆ ಇದುವೇ ಅತ್ಯುತ್ತಮ ತಂಡವಾಗಿರುತ್ತಿತ್ತು? ನೀವು ಹೇಳುವ ಪ್ರಕಾರ ನಾನು ಅತ್ಯುತ್ತಮ 11 ಆಟಗಾರರನ್ನು ಆರಿಸಬೇಕಿತ್ತು. ಹಾಗಿದ್ದರೆ ನೀವೇ ಹೇಳಿ ಯಾರು 11 ಅತ್ಯುತ್ತಮ ಕ್ರಿಕೆಟಿಗರು?’ ಎಂದು ಕೊಹ್ಲಿ ಆಕ್ರೋಶದಿಂದಲೇ ಪ್ರಶ್ನಿಸಿದರು.
‘ಸೋಲು ಎಲ್ಲರಿಗೂ ನಿರಾಸೆ ತರುತ್ತದೆ. ಹಾಗಂತ ಅಷ್ಟಕ್ಕೇ ತಂಡವನ್ನು ದೂಷಿಸುವುದು ಸರಿಯಲ್ಲ. ಯಾರೇ ಆಗಲಿ ತಂಡಕ್ಕೆ ಆಯ್ಕೆಯಾದ ಮೇಲೆ ತಮ್ಮ ಬೆಸ್ಟ್ ಪರ್ಫಾರ್ಮೆನ್ಸ್ ಕೊಡಲೇಬೇಕು. ನಾವು ಒಂದು ಅತ್ಯುತ್ತಮ ತಂಡದ ಎದುರು ಸೋತಿದ್ದೇವೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ