Select Your Language

Notifications

webdunia
webdunia
webdunia
webdunia

ಧೋನಿ ತಪ್ಪು ಮಾಡಿದರು! ಸಿಟ್ಟಿಗೆದ್ದ ಸುನಿಲ್ ಗವಾಸ್ಕರ್ ಹೀಗೆ ಹೇಳಿದ್ದೇಕೆ?!

ಧೋನಿ ತಪ್ಪು ಮಾಡಿದರು! ಸಿಟ್ಟಿಗೆದ್ದ ಸುನಿಲ್ ಗವಾಸ್ಕರ್ ಹೀಗೆ ಹೇಳಿದ್ದೇಕೆ?!
ಮುಂಬೈ , ಗುರುವಾರ, 18 ಜನವರಿ 2018 (08:32 IST)
ಮುಂಬೈ: ದ.ಆಫ್ರಿಕಾ ವಿರುದ್ಧ ಭಾರತ ತಂಡದ ಪ್ರದರ್ಶನ ನೋಡಿ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಆಕ್ರೋಶಗೊಂಡಿದ್ದಾರೆ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪಾರ್ಥಿವ್ ಪಟೇಲ್ ಕೀಪಿಂಗ್ ಮಾಡುವುದು ನೋಡಿ ಧೋನಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗಬಾರದಿತ್ತು ಎಂದು ಸಿಟ್ಟಿನಿಂದಲೇ ಹೇಳಿದ್ದಾರೆ.
 

ವೃದ್ಧಿಮಾನ್ ಸಹಾ ಗಾಯಗೊಂಡಿರುವುದರಿಂದ ಭಾರತ ತಂಡದಲ್ಲಿ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಸ್ಥಾನ ಪಡೆದಿರುವ ಪಾರ್ಥಿವ್ ಹಲವು ಔಟ್ ಮಾಡುವ ಅವಕಾಶಗಳನ್ನು ಕಳೆದುಕೊಂಡಿದ್ದರು. ಇದು ಗವಾಸ್ಕರ್ ಸಿಟ್ಟಿಗೆ ಕಾರಣ.

ಕಾಮೆಂಟರಿ ಬಾಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಗವಾಸ್ಕರ್ ಒಂದು ವೇಳೆ ಧೋನಿ ತಂಡದಲ್ಲಿದ್ದಿದ್ದರೆ ಒತ್ತಡ ನಿಭಾಯಿಸುವುದು ಹೇಗೆಂದು ತಂಡಕ್ಕೆ ಉಪಯುಕ್ತ ಸಲಹೆ ಕೊಡುತ್ತಿದ್ದರು. ಅವರು ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಮುಂದುವರಿಯಬೇಕಿತ್ತು ಎಂದು ಗವಾಸ್ಕರ್ ಹತಾಶೆಯಿಂದ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಸರಣಿ ಗೆಲ್ಲದ ಮೇಲೆ ನನ್ನ ಶತಕಕ್ಕೆ ಮೂರು ಕಾಸಿನ ಬೆಲೆಯಿಲ್ಲ’