Select Your Language

Notifications

webdunia
webdunia
webdunia
webdunia

ತುಂಬಾ ರುಚಿಕರ ಆಲೂ ಟಿಕ್ಕಿ ಕಬಾಬ್

ತುಂಬಾ ರುಚಿಕರ ಆಲೂ ಟಿಕ್ಕಿ ಕಬಾಬ್
ಬೆಂಗಳೂರು , ಗುರುವಾರ, 15 ಸೆಪ್ಟಂಬರ್ 2022 (13:46 IST)
ಚಿಕನ್ ಪ್ರಿಯರಿಗೂ ತುಂಬಾ ಇಷ್ಟಪಟ್ಟು ತಿನ್ನುವಂತಹ ರೆಸಿಪಿ. ಕಬಾಬ್ ಇಷ್ಟ ಪಡದವರು ಯಾರಿದ್ದಾರೆ? ಚಿಕನ್ ಮಾತ್ರವೇ ಕಬಾಬ್ ಪದಕ್ಕೆ ಮೀಸಲಾಗಿಲ್ಲ ಎಂಬುದನ್ನು ಎಲ್ಲರೂ ತಿಳಿದಿರಬೇಕು.

ಏಕೆಂದರೆ ತರಕಾರಿಗಳನ್ನು ಬಳಸಿಯೂ ಕಬಾಬ್ ಮಾಡಬಹುದು. ಇದಕ್ಕೆ ಉದಾಹರಣೆಯೇ ಫೇಮಸ್ ಆಲೂ ಟಿಕ್ಕಿ ಕಬಾಬ್. ನಾನ್ವೆಜ್ ತಿನ್ನಲು ಸಾಧ್ಯವಾಗದ ದಿನಗಳಲ್ಲಿ ಆಲೂಗಡ್ಡೆಯಿಂದ ಕಬಾಬ್ ಮಾಡಿ. ರುಚಿಕರ ಹಾಗೂ ಸಿಂಪಲ್ ಆಲೂ ಟಿಕ್ಕಿ ಕಬಾಬ್ ರೆಸಿಪಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು

ಬೇಯಿಸಿದ ಆಲೂಗಡ್ಡೆ – 5
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 3 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಕರಿಮೆಣಸಿನ ಪುಡಿ – 1 ಟೀಸ್ಪೂನ್
ಎಣ್ಣೆ – 4 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಶುಂಠಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ

* ಮೊದಲಿಗೆ ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ, ಗಂಟಿಲ್ಲದಂತೆ ಹಿಚುಕಿಡಿ.
* ಒಂದು ಬಟ್ಟಲಿಗೆ ಬೇಯಿಸಿ, ಹಿಚುಕಿದ ಆಲೂಗಡ್ಡೆಯನ್ನು ತೆಗೆದುಕೊಂಡು, ಅದಕ್ಕೆ ಶುಂಠಿ, ಹಸಿರು ಮೆಣಸಿನಕಾಯಿ, ಕರಿಮೆಣಸಿನ ಪುಡಿ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
* ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಆಲೂಗಡ್ಡೆ ಮಿಶ್ರಣವನ್ನು ಮಧ್ಯಮ ಗಾತ್ರದ ಉಂಡೆಗಳನ್ನಾಗಿ ಮಾಡಿ, ಸ್ವಲ್ಪ ತಟ್ಟಿ, ಪ್ಯಾಟೀಗಳನ್ನಾಗಿ ಮಾಡಿ.
* ಈಗ ಒಂದು ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು, ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ.
* ಆಲೂಗಡ್ಡೆ ಪ್ಯಾಟೀಗಳನ್ನು ಬಿಸಿಯಾದ ಎಣ್ಣೆಯಲ್ಲಿ ಹಾಕಿ, ಸಣ್ಣ ಉರಿಯಲ್ಲಿ ಹುರಿಯಲು ಬಿಡಿ.
* ಪ್ಯಾಟೀಯ ಎರಡೂ ಬದಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
* ಇದೀಗ ಆಲೂ ಟಿಕ್ಕಿ ಕಬಾಬ್ ತಯಾರಾಗಿದ್ದು, ನಿಮಗಿಷ್ಟದ ಚಟ್ನಿ ಅಥವಾ ರಾಯಿತಾದೊಂದಿಗೆ ಸವಿಯಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ದೇಶಿ ಶೈಲಿಯ ರುಚಿಕರ ಹಸಿ ಕೈ ಗೊಜ್ಜು