Webdunia - Bharat's app for daily news and videos

Install App

ತಪ್ಪದೇ ಮಾಡಿ ತುಪ್ಪದ ಬಳಕೆ

Webdunia
ಸೋಮವಾರ, 15 ಅಕ್ಟೋಬರ್ 2018 (16:58 IST)
ತುಪ್ಪ ಹೆಚ್ಚಿನ ಪ್ರಮಾಣದ ಕ್ಯಾಲೋರಿ, ಪೋಷಕಾಂಶಗಳನ್ನು ಹೊಂದಿದ್ದು ವೈರಸ್ ಅಥವಾ ಬ್ಯಾಕ್ಟೀರಿಯ ವಿರುದ್ದ ಹೋರಾಡುವ ಗುಣ ಮತ್ತು ಅಂಟಿ ಆಕ್ಸಿಡೆಂಟುಗಳ ಜೊತೆಗೆ ಕೊಂಚ ಕೊಬ್ಬಿನ ತೈಲವನ್ನು ಹೊಂದಿದೆ.
- ಚಿಕ್ಕ ಮಕ್ಕಳಿಗೆ ಪ್ರತಿದಿನ ತುಪ್ಪ ಹಚ್ಚಿ ಸ್ನಾನ ಮಾಡಿಸುವುದರಿಂದ ಮಕ್ಕಳ ಚರ್ಮ ನುಣುಪಾಗಿ ಮತ್ತು ಕಾಂತಿಯುತವಾಗಿರುತ್ತದೆ
 
- ತುಪ್ಪವನ್ನು ಪ್ರತಿ ಊಟದೊಂದಿಗೆ ಚಿಕ್ಕ ಪ್ರಮಾಣದಲ್ಲಿ ಸೇವಿಸಿದರೆ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ.
 
-  ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಇರುವುದರಿಂದ ಇದು ನಮ್ಮ ಮೂಳೆಗಳು ಆರೋಗ್ಯಕರವಾಗಿರಲು ಹಾಗೂ ದೃಢಗೊಳ್ಳಲು ನೆರವಾಗುತ್ತದೆ.
 
- ಇದರ ಸೇವನೆಯಿಂದ ಮಧುಮೇಹ ಮತ್ತು ಹೃದಯದ ರೋಗಗಳನ್ನು ತಡೆಗಟ್ಟಬಹುದು.
 
- ಮೂಗಿನಲ್ಲಿ ರಕ್ತಬರುವ ಕಾಯಿಲೆಗಳಿರುವವರು ಕರಗಿದ ತುಪ್ಪವನ್ನು ಮೂಗಿನ ಹೊಳ್ಳೆಗಳ ಒಳ ಹಚ್ಚಿದರೆ ರಕ್ತ ಸೋರುವುದು ಕಡಿಮೆಯಾಗುತ್ತವೆ.
 
- 1 ಚಮಚ ತುಪ್ಪಕ್ಕೆ 5 ಗ್ರಾಂ ಕರಿಮೆಣಸಿನ ಪುಡಿ ಹಾಕಿ ದಿನಕ್ಕೆ 3 ಬಾರಿ ಸೇವಿಸಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.
 
- ಚಿಕ್ಕ ಹತ್ತಿ ತುಂಡಿಗೆ ಸ್ವಲ್ಪ ತುಪ್ಪ ಹಾಕಿ, ಹಲ್ಲು ನೋವಿರುವ ಜಾಗಕ್ಕೆ ಇಟ್ಟುಕೊಂಡರೆ ಹಲ್ಲು ನೋವು ಕಡಿಮೆಯಾಗುತ್ತದೆ
 
- ಇದರ ಸೇವನೆಯಿಂದ ಸ್ಮರಣಶಕ್ತಿ ಮತ್ತು ಬುದ್ದಿಮತ್ತೆ ಹೆಚ್ಚಲು ನೆರವಾಗುತ್ತದೆ.
 
- ರಾತ್ರಿ ಮಲಗುವ ಮುನ್ನ ಬಿಸಿಬಿಸಿ ಹಾಲಿಗೆ ಕೊಂಚ ತುಪ್ಪವನ್ನು ಸೇರಿಸಿ ಕುಡಿದರೆ ಉತ್ತಮ ನಿದ್ದೆ ಬರುತ್ತದೆ.
 
- ತುಪ್ಪದಲ್ಲಿ ವಿಟಮಿನ್ ಇ ಹೆಚ್ಚಿನ ಪ್ರಮಾಣದಲ್ಲಿದ್ದು ಕಣ್ಣುಗಳಿಗೆ ಹಾಗೂ ದೃಷ್ಟಿನರಕ್ಕೆ ಹೆಚ್ಚಿನ ಪೋಷಣೆ ನೀಡುತ್ತದೆ.
 
- ದಿನನಿತ್ಯ ತುಪ್ಪ ಸೇವಿಸಿದರೆ ಕ್ಯಾನ್ಸರ್ ಬರುವ ಪ್ರಮಾಣ ಕಡಿಮೆ ಆಗುತ್ತೆ.
 
- ಅರ್ಧ ಚಮಚ ಮೆಂತ್ಯೆ ಕಾಳನ್ನು ತುಪ್ಪದಲ್ಲಿ ಹುರಿದು ಪುಡಿ ಮಾಡಿ ಮಜ್ಜಿಗೆಗೆ ಹಾಕಿ ಕುಡಿದರೆ ಪಿತ್ತದಿಂದ ಉಂಟಾದ ಹೊಟ್ಟೆ ನೋವು ಕಡಿಮೆಯಾಗುತ್ತದೆ.
 
- ಪುಟ್ಟ ಗಾಯ, ತರಚುಗಾಯ, ಸುಟ್ಟ ಗಾಯಗಳಿಗೆ ತುಪ್ಪವನ್ನು ಹಚ್ಚಿದರೆ ಉರಿ ಕಡಿಮೆಯಾಗುತ್ತದೆ ಹಾಗೂ ಶೀಘ್ರವಾಗಿ ಹೊಸಚರ್ಮ ಬೆಳೆಯಲು ನೆರವಾಗುತ್ತದೆ.
 
- ಇದರ ಸೇವನೆಯಿಂದ ತ್ವಚೆಯ ಕಾಂತಿ ವೃದ್ಧಿಸುತ್ತದೆ.
 
- ಪ್ರತಿನಿತ್ಯ ಸ್ವಲ್ಪ ಪ್ರಮಾಣದಲ್ಲಿ ತುಪ್ಪವನ್ನು ಸೇವಿಸಿದರೆ ಹಸಿವು ಹೆಚ್ಚುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
 
- ಕಾಲುಗಳಲ್ಲಿ ರಕ್ತಸಂಚಾರ ಕಡಿಮೆಯಾಗಿ ಅಥವಾ ರಕ್ತನಾಳಗಳ ತಡೆಯಿಂದಾಗುವ ಸಿಡಿತ, ನೋವಿದ್ದರೆ ಕಾಲಿಗೆ ತುಪ್ಪವನ್ನು ಹಚ್ಚಬೇಕು
 
- ಹೆರಿಗೆ ನೋವು ಪ್ರಾರಂಭ ಅದ ತಕ್ಷಣ ಬಿಸಿ ಗಂಜಿಗೆ ತುಪ್ಪ ಹಾಕಿ ಸೇವಿಸಿದರೆ ಸುಖ ಪ್ರಸವಕ್ಕೆ ಸಹಕಾರಿಯಾಗುತ್ತದೆ.
 
- ಅತಿಯಾದ ಜ್ವರದ ಸಮಯದಲ್ಲಿ ತುಪ್ಪವನ್ನು ಅಂಗೈ, ಪಾದ ಮತ್ತು ಹಣೆಗೆ ಹಚ್ಚಿದರೆ ಜ್ವರ ಬೇಗನೆ ಶಮನವಾಗುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

ಮುಂದಿನ ಸುದ್ದಿ
Show comments