Webdunia - Bharat's app for daily news and videos

Install App

ರುಚಿಕರ ಬ್ರೆಡ್ ಮೊಸರು ವಡೆ ರೆಸಿಪಿ ಒಮ್ಮೆ ಟ್ರೈ ಮಾಡಿ

Webdunia
ಗುರುವಾರ, 28 ಅಕ್ಟೋಬರ್ 2021 (09:59 IST)
ಈ ರೆಸಿಪಿ ಎಂದು ಮರೆಯದ, ಬಾಯಿಗೆ ರುಚಿ ಕೊಡುವಂತಹ ಒಂದು ಉತ್ತಮ ತಿನಿಸಾಗಿದೆ. ಇದನ್ನು ಒಮ್ಮೆ ಟ್ರೈ ಮಾಡಿ ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ.
 ಬೇಕಾಗುವ ಸಾಮಗ್ರಿಗಳು
•4 - ಕತ್ತರಿಸಿದ ಬ್ರೆಡ್ ಪೀಸ್ಗಳು
•3/4 ಕಪ್ ಮೊಸರು
•ಅಗತ್ಯಕ್ಕೆ ತಕ್ಕಷ್ಟು ಕೊತ್ತಂಬರಿ ಚಟ್ನಿ
•5 - ಕತ್ತರಿಸಿದ ಹಸಿಮೆಣಸಿನಕಾಯಿ
•ಅಗತ್ಯಕ್ಕೆ ತಕ್ಕಷ್ಟು ಹುುಣಸೆಹಣ್ಣು
•1 ಚಮಚ ಸಕ್ಕರೆ
•ಅಗತ್ಯಕ್ಕೆ ತಕ್ಕಷ್ಟು ಪುಡಿ ಮಾಡಿದ ಜೀರಿಗೆ
•1 ಚಮಚ ಖಾರದ ಪುಡಿ
•ಅಗತ್ಯಕ್ಕೆ ತಕ್ಕಷ್ಟು ಉಪ್ಪು
•2 ಕಪ್ ಮಜ್ಜಿಗೆ
•2 - ಬೇಯಿಸಿದ ಆಲೂಗಡ್ಡೆ
•ಅಗತ್ಯಕ್ಕೆ ತಕ್ಕಷ್ಟು ಕರಿ ಉಪ್ಪು
ಮಾಡುವ ವಿಧಾನ
•ಬ್ರೆಡ್ ಸ್ಲೈಸ್ಗಳನ್ನು ತೆಗೆದುಕೊಂಡು ಅದರ ಅಂಚುಗಳನ್ನು ಕತ್ತರಿಸಿಕೊಳ್ಳಿ.- ನಂತರ ಒಂದು ಪ್ಲೇಟ್ನಲ್ಲಿ ಪಕ್ಕಕ್ಕೆ ಇರಿಸಿ.
•ಒಂದು ಬಟ್ಟಲಲ್ಲಿ ಬೇಯಿಸಿಕೊಂಡ ಆಲೂಗಡ್ಡೆ, ಹಸಿ ಮೆಣಸಿನಕಾಯಿ, ಹುಳಿ ಪುಡಿ, ಒಣದ್ರಾಕ್ಷಿ, ಜೀರಿಗೆ ಪುಡಿ ಮತ್ತು ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.- ಮೊಸರಿಗೆ ಸಕ್ಕರೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
ಈ ಮೊದಲೆ ಸಿದ್ಧಪಡಿಸಿಕೊಂಡ ಒಂದು ಬ್ರೆಡ್ ಸ್ಲೈಸ್ ತೆಗೆದುಕೊಳ್ಳಿ.- ನಂತರ ಅದರ ಮೇಲೆ ಮೊಸರನ್ನು ಲೇಪಿಸಿ.- ಬಳಿಕ ಆಲೂಗಡ್ಡೆಯ ಮಿಶ್ರಣದ ಉಂಡೆಯನ್ನು ಇಡಿ.- ಪುನಃ ಬ್ರೆಡ್ ಅನ್ನು ಉಂಡೆಯ ಸುತ್ತ ಮುಚ್ಚುವಂತೆ ಸುತ್ತಿಕೊಳ್ಳಬೇಕು.
•ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಸೇರಿಸಿ, ಬಿಸಿ ಮಾಡಿ.- ಬಿಸಿಯಾದ ತುಪ್ಪಕ್ಕೆ ಬ್ರೆಡ್ನ ಉಂಡೆಯನ್ನು ಸೇರಿಸಿ, ಹುರಿಯಿರಿ.- ಉಂಡೆಯ ಸುತ್ತಲೂ ಹೊಂಬಣ್ಣ ಬರುವ ಹಾಗೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ.
•ಬಳಿಕ ಬಡಿಸುವ ಪ್ಲೇಟ್ ಅಲ್ಲಿ ಬೇಯಿಸಿದ ಬ್ರೆಡ್ ವಡೆಯನ್ನು ಇಡಿ.- ನಂತರ ಅದರ ಮೇಲೆ ಸಕ್ಕರೆ ಮಿಶ್ರಿತ ಮೊಸರು, ಕೊತ್ತಂಬರಿ ಸೊಪ್ಪು, ಹುಣಸೆ ಹಣ್ಣಿನ ಚಟ್ನಿ, ಜೀರಿಗೆ ಪುಡಿ, ಮೆಣಸಿನ ಪುಡಿ ಮತ್ತು ಕಪ್ಪು ಉಪ್ಪನ್ನು ಸೇರಿಸಿ- ಚೆನ್ನಾಗಿ ಅಲಂಕರಿಸಿದ ಬಳಿಕ ಸವಿಯಲು ನೀಡಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments