Webdunia - Bharat's app for daily news and videos

Install App

ಆರೋಗ್ಯಕ್ಕೆ ಹಿತವಾದ ಕ್ಯಾಪ್ಸಿಕಂ ಸೂಪ್

Webdunia
ಭಾನುವಾರ, 14 ಅಕ್ಟೋಬರ್ 2018 (16:48 IST)
ಬೆಂಗಳೂರು : ಕ್ಯಾಪ್ಸಿಕಂ ಅಂದರೆ (ದೊಡ್ಡ ಮೆಣಸಿನಕಾಯಿ) ಕೇವಲ ನೋಡಲು ಅಷ್ಟೇ ಸುಂದರವಾಗಿಲ್ಲ ಇದರ  ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಉಪಯೋಗಗಳು ಕೂಡ ಇವೆ. ಬಹಳ ಉಪಯೋಗಕಾರಿಯಾದ ಈ ಕ್ಯಾಪ್ಸಿಕಂನಿಂದ ಸೂಪ್ ಮಾಡಿ ಕೂಡಿದರೆ ಇನ್ನೂ ಒಳ್ಳೆಯದು.


ಬೇಕಾಗುವ ಸಾಮಗ್ರಿಗಳು :
ಎರಡು ಕೆಂಪು ದಪ್ಪ ಮೆಣಸಿನಕಾಯಿ, 1ಟೇಬಲ್ ಚಮಚ ಅಡುಗೆ ಎಣ್ಣೆ, 4 ಟೊಮೇಟೋ (ನಾಲ್ಕರಿಂದ ಐದು ತುಂಡುಗಳಾಗಿ ಮಾಡಿರಬೇಕು), ಲವಂಗದ ಎಲೆ – 2, ನೀರು – 3 ಕಪ್, ಹಾಲು – 1/2 ಕಪ್, ಕಾರ್ನ್ ಫ್ಲೋರ್ – 1/2 ಟೇಬಲ್ ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಸಕ್ಕರೆ – ಒಂದು ಚಿಟಕಿ, ಕರಿ ಮೆಣಸು – ಒಂದು ಚಿಟಕಿ ಅಲಂಕಾರಕ್ಕಾಗಿ


ತಾಜಾ ದಪ್ಪ ಮೆಣಸಿನಕಾಯಿಯನ್ನು ತೆಗೆದುಕೊಂಡು ಎಲ್ಲಾ ಕಡೆ ಎಣ್ಣೆ ಹಚ್ಚಿ ಫೋರ್ಕ್ ಗೆ ಚುಚ್ಚಿ ಗ್ಯಾಸ್ ಒಲೆಯ ಮೇಲೆ ಕಪ್ಪು ಬಣ್ಣ ತಿರುಗುವವರೆಗೆ ಅದನ್ನು ಸುಡಬೇಕು. ನಂತರ ಒಂದು ಬೌಲ್ ನಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಸುಟ್ಟ ದಪ್ಪ ಮೆಣಸಿನಕಾಯನ್ನು ಅದ್ದಬೇಕು. ನಿಮ್ಮ ಕೈಗಳಿಂದ ಕಪ್ಪಗಾದ ಭಗವನ್ನು ತೆಗೆಯಬೇಕು.


ದಪ್ಪ ತಳದ ಬಾಣಲೆ ತೆಗೆದುಕೊಂಡು ಹಣ್ಣಾದ ಟೊಮೇಟೋವನ್ನು ಹಾಕಿ. ಅದಕ್ಕೆ ಲವಂಗದ ಎಲೆ, ನೀರು, ದಪ್ಪ ಮೆಣಸಿನಕಾಯಿಯ ತುಂಡುಗಳನ್ನು ಬಾಣಲಿಯಲ್ಲಿ ಹಾಕಿ. ಚೆನ್ನಾಗಿ ಬೇಯಿಸಬೇಕು. ನಂತರ ಒಲೆಯನ್ನು ಆರಿಸಿ. ತಣ್ಣಗಾಗಲು ಬಿಡಿ. ನಂತರ ಅದನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಒಂದು ಪಾತ್ರೆಯನ್ನು ತೆಗೆದುಕೊಂಡು ರುಬ್ಬಿದ ಮಿಶ್ರಣವನ್ನು ಸುರಿದು ಕುದಿಯಲು ಬಿಡಿ. ತಣ್ಣಗಿನ ಹಾಲಿಗೆ ಕಾರ್ನ್ ಫ್ಲೋರ್ ಅನ್ನು ಮಿಶ್ರಣ ಮಾಡಿ ನಿಧಾನವಾಗಿ ಕುದಿಯುತ್ತಿರುವ ಸೂಪಿನ ಮಿಶ್ರಣಕ್ಕೆ ಸುರಿದು ಕಲಕ್ಕುತ್ತಲೇ ಇರಬೇಕು. ಇಲ್ಲವಾದ್ದಲ್ಲಿ ಕಾರ್ನ್ ಫ್ಲೋರ್ ತುಂಬಾ ಜಿಗಿಯಾಗಿ ಬಿಡುತ್ತದೆ. ಸೂಪಿನ ರುಚಿ ನೋಡಿ. ಹುಳಿ ಅನಿಸಿದರೆ, ಸ್ವಲ್ಪವೇ ಸಕ್ಕರೆಯನ್ನು ಸೇರಿಸಿ. ಸ್ವಲ್ಪ ಹೊತ್ತು ಕುದಿಯಲು ಬಿಡಿ. ಸರಿಯಾದ ಹದ ಬಂದ ಕೂಡಲೆ ಸೂಪ್ ಬೌಲ್ ಗೆ ಸುರಿಯಿರಿ. ಈಗ ನಿಮ್ಮ ರೋಸ್ಟೆಡ್ ಕ್ಯಾಪ್ಸಿಕಮ್ ಸೂಪ್ ತಯಾರಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments