Publish Date: Wed, 10 Oct 2018 (13:32 IST)
Updated Date: Wed, 10 Oct 2018 (13:34 IST)
ಬೇಕಾಗುವ ಸಾಮಗ್ರಿಗಳು :
ಸಿಹಿಗೆಣಸು 1 ಬಟ್ಟಲು (ಕತ್ತರಿಸಿದ್ದು)
ತೆಂಗಿನ ಹಾಲು 1 ಬಟ್ಟಲು
ಬೆಲ್ಲ (ಸಿಹಿಗೆ ತಕ್ಕಷ್ಟು)
ಏಲಕ್ಕಿ 2 ಚಿಟಿಕೆ
ತುಪ್ಪ 1 ಬಟ್ಟಲು
ಉಪ್ಪು
ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ
ತಯಾರಿಸುವ ವಿಧಾನ :
ಮೊದಲು ಕುಕ್ಕರಿನಲ್ಲಿ ಹೆಚ್ಚಿದ ಗೆಣಸು, ಸ್ವಲ್ಪ ನೀರು ಮತ್ತು ಚಿಟಿಕೆ ಉಪ್ಪು ಹಾಕಿ ಗೆಣಸನ್ನು ಬೇಯಿಸಿಕೊಳ್ಳಬೇಕು. ನಂತರ ಇನ್ನೊಂದು ಪಾತ್ರೆಯಲ್ಲಿ ತೆಂಗಿನಹಾಲನ್ನು ಹಾಕಿ ಸ್ವಲ್ಪ ಕುದಿಸಿ ಅದಕ್ಕೆ ಬೆಲ್ಲವನ್ನು ಹಾಕಿ ಕುದಿಸಬೇಕು. ಬೆಲ್ಲವನ್ನು ಕರಗಲು ಬಿಡಬೇಕು. ನಂತರ ಬೆಲ್ಲವು ಕರಗಿದ ಬಳಿಕ ತೆಂಗಿನಹಾಲು ಚೆನ್ನಾಗಿ ಕುದಿ ಬಂದ ಬಳಿಕ ಬೆಂದ ಗೆಣಸನ್ನು ಸೇರಿಸಿ 5 ರಿಂದ 10 ನಿಮಿಷ ಕುದಿಯಲು ಬಿಡಬೇಕು. ನಂತರ ಇದಕ್ಕೆ ತುಪ್ಪದಲ್ಲಿ ಹುರಿದುಕೊಂಡ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹಾಕಿ ಬಳಿಕ ಏಲಕ್ಕಿ ಪುಡಿಯನ್ನು ಹಾಕಿದರೆ ರುಚಿಕರವಾದ ಮತ್ತು ಆರೋಗ್ಯಕರವಾದ ಸಿಹಿಗೆಣಸಿನ ಪಾಯಸ ಸವಿಯಲು ಸಿದ್ಧ.