Webdunia - Bharat's app for daily news and videos

Install App

ಗೆಣಸಿನ ಹೋಳಿಗೆ (Sweet Potato HoLige)

Webdunia
ಸೋಮವಾರ, 15 ಅಕ್ಟೋಬರ್ 2018 (17:44 IST)
ಮನೆಯಲ್ಲಿ ಹಬ್ಬ ಬಂತೆಂದರೆ ಸಾಕು ಸಿಹಿ ಮಾಡುವುದು ನಮ್ಮ ಸಂಪ್ರದಾಯ ಆದರೆ ಎಲ್ಲಾ ಹಬ್ಬಕ್ಕೂ ಒಂದೇ ರೀತಿಯ ಸಿಹಿ ತಿನಿಸು ಅಂದರೆ ಮುಗು ಮುರಿಯುತ್ತಾರೆ ಅದಕ್ಕಾಗಿಯೇ ನಿಮಗಾಗಿ ಹೊಸ ರೀತಿಯ ಸಿಹಿ ತಿನಿಸುಗಳನ್ನು ಹೇಗೆ ಮಾಡುವುದು ಅಂತಾ ನಾವು ಹೇಳ್ತಿವಿ ನೀವು ಒಮ್ಮೆ ಮನೆಯಲ್ಲಿ ಪ್ರಯತ್ನಿಸಿ.
ಗೆಣಸು ಎಲ್ಲರಿಗೂ ತಿಳಿದಿರುವುದು ಅದರಲ್ಲೂ ಶಿವರಾತ್ರಿ ಬಂತೆಂದರೆ ಇದರ ಮಾರಾಟ ಬಲು ಜೋರು ಬೇಯಿಸಿ ಚಪ್ಪರಿಸಿ ತಿನ್ನುವವರನ್ನು ನಾವು ನೋಡಿರ್ತೆವೆ ಅಂತಹ ಗೆಣಸಿನಿಂದ ರುಚಿಕರವಾದ ಹೋಳಿಗೆಯನ್ನು  ತಯಾರಿಸಬಹುದು ಹೇಗೆ ಅಂತಿರಾ ಇಲ್ಲಿದೆ ವಿವರ
 
ಬೇಕಾಗುವ ಪದಾರ್ಥಗಳು - 
 
ಗೆಣಸು- 2 (ದೊಡ್ಡದು)
ಬೆಲ್ಲ- 1/4 ಲೋಟ
ತೆಂಗಿನ ತುರಿ- 1 ಕಪ್
ಎಣ್ಣೆ- 7 ರಿಂದ 8 ಚಮಚ
ತುಪ್ಪ- 2 ರಿಂದ 3 ಚಮಚ
ಮೈದಾ ಹಿಟ್ಟು- 2 ಲೋಟ
ಅಕ್ಕಿ ಹಿಟ್ಟು- 1 ಮುಷ್ಟಿಯಷ್ಟು
ಉಪ್ಪು- ಚಿಟಕಿ
ಅರಿಶಿನ- ಕಾಲು ಚಮಚ
 
ಮಾಡುವ ವಿಧಾನ:
ಒಂದು ಪಾತ್ರೆಯನ್ನು ತೆಗೆದುಕೊಳ್ಳಿ ಅದರಲ್ಲಿ ಮೈದಾ ಹಿಟ್ಟನ್ನು ಹಾಕಿ ಅದಕ್ಕೆ ಚಿಟಕಿ ಉಪ್ಪು, ಅರಿಶಿನ ಹಾಕಿ 4 ರಿಂದ 5 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಅರ್ಧ ಲೋಟ ನೀರು ಹಾಕಿ ಎಲ್ಲವನ್ನು ಚೆನ್ನಾಗಿ ಲಟ್ಟಿಸಲು ಹದವಾಗುವ ರೀತಿಯಲ್ಲಿ ಕಲೆಸಿ ಅದನ್ನು ಅದೇ ಪಾತ್ರೆಯಲ್ಲಿ ಹಾಕಿ ಸುಮಾರು ಅರ್ಧ ಗಂಟೆಯವರೆಗೆ ಮುಚ್ಚಿಡಿ. ನಂತರ ಗೆಣಸನ್ನು ನೀರಿನಲ್ಲಿ ತೊಳೆದು ಅದನ್ನು ಕುಕ್ಕರ್ ಇಲ್ಲವೇ ಪಾತ್ರೆಯಲ್ಲಿ ನೀರು ಹಾಕಿ ಚೆನ್ನಾಗಿ ಬೇಯಿಸಿ ಅದು ತಂಪಾದ ಮೇಲೆ ಅದರ ಸಿಪ್ಪೆಯನ್ನು ತೆಗೆದು ಚೆನ್ನಾಗಿ ನುರಿದು ಮಿಕ್ಸಿಯಲ್ಲಿ ಹಾಕಿ ತಿರುಗಿಸಿ ಅದನ್ನು ಇನ್ನೊಂದು ಪಾತ್ರೆಯಲ್ಲಿ ತೆಗೆದಿಡಿ
 
ನಂತರ ತೆಂಗಿನ ಕಾಯಿ ತುರಿ ಮತ್ತು ಬೆಲ್ಲವನ್ನು ಮಿಶ್ರಣ ಮಾಡಿ ಮಿಕ್ಸಿಗೆ ಹಾರಿ ನುಣ್ಣಗೆ ರುಬ್ಬಿರಿ ರುಬ್ಬುವಾಗ ನೀರನ್ನು ಹಾಕದಿರಿ. ನಂತರ ಗ್ಯಾಸ್ ಹಚ್ಚಿ ಒಂದು ದಪ್ಪ ತಳದ ಫ್ಯಾನ್‌ ಇರಿಸಿ ಅದು ಕಾದ ಬಳಿಕ 1 ಚಮಚ ತುಪ್ಪವನ್ನು ಹಾಕಿರಿ ಅದಕ್ಕೆ ಬೆಲ್ಲ-ಕಾಯಿಯನ್ನು ರುಬ್ಬಿದ ಭಾಗವನ್ನು ಹಾಕಿ ಕೈಯಾಡಿಸಿ. ನಂತರ ರುಬ್ಬಿದ ಗೆಣಸಿನ ಭಾಗವನ್ನು ಹಾಕಿ ಚೆನ್ನಾಗಿ ಮಗುಚುತ್ತಿರಿ. ಉರಿ ಸಣ್ಣಗೇ ಇರಲಿ. ಬೆಲ್ಲ-ಕಾಯಿಯ ನೀರಿನಂಶವೆಲ್ಲಾ ಹೋಗಿ, ಅದು ಗಟ್ಟಿಯಾಗಿ ಹೂರಣದ ಹದ ಬಂದಾಗ ಸ್ಟವ್ ಆರಿಸಿ. ಈಗ ಹೂರಣವೂ ಸಿದ್ಧವಾಗಿದೆ.
 
ನಂತರ ಮೊದಲೇ ತಯಾರಿಸಿದ ಹಿಟ್ಟನ್ನು ಲಿಂಬೆ ಗ್ರಾತ್ರದಲ್ಲಿ ಉಂಡೆ ಮಾಡಿ ಅದನ್ನು ಲಟ್ಟಿಸಿ ನಂತರ ಅದರಲ್ಲಿ ಈ ಹುರಣದ ಉಂಡೆಯನ್ನು ಇಟ್ಟು ಮಡಚಿ ಎರಡು ಬದಿಯಲ್ಲಿ ಹಿಟ್ಟನ್ನು ತಾಗಿಸಿ ಅದನ್ನು ಲಟ್ಟಿಸಿ. ನಂತರ ಫ್ಯಾನ್ ತೆಗೆದುಕೊಳ್ಳಿ ಅದು ಕಾದ ಮೇಲೆ ಅದಕ್ಕೆ ಸ್ವಲ್ಪ ತುಪ್ಪವನ್ನು  ಹಾಕಿ ಲಟ್ಟಿಸಿದ ಹಿಟ್ಟನ್ನು ಹಾಕಿ ಎರಡು ಕಡೆಯಲ್ಲಿ ಬೇಯಿಸಿದರೆ ಆರೋಗ್ಯಕರವಾದ ರುಚಿಯಾದ ಗೆಣಸಿನ ಹೋಳಿಗೆ ಸವಿಯಲು ಸಿದ್ಧ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments