ಬೆಂಗಳೂರು: ಬಾಣಂತಿಯರು ಎಲ್ಲಾ ಆಹಾರಗಳನ್ನು ತಿನ್ನುವಂತಿಲ್ಲ. ಈ ಸಮಯದಲ್ಲಿ ಬಾಣಂತಿಯರು ಹುಷಾರು ತಪ್ಪದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ. ಅವರಿಗಾಗಿ ಒಂದು ಸಿಂಪಲ್ ಆರೋಗ್ಯಕರ ಸಾರಿನ ರೆಸಿಪಿ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು
ಟೊಮೆಟೊ
ಕಾಳು ಮೆಣಸು
ಉದ್ದಿನ ಬೇಳೆ
ಜೀರಿಗೆ
ಒಣ ಮೆಣಸು
ಕಡ್ಲೆ ಬೇಳೆ
ಉಪ್ಪು
ಮಾಡುವ ವಿಧಾನ
ಟೊಮೆಟೊ ಬಿಟ್ಟು ಉಳಿದೆಲ್ಲಾ ಸಾಮಾನುಗಳನ್ನು ಎಣ್ಣೆ ಹಾಕದೆ ಬಾಣಲೆಯಲ್ಲಿ ಫ್ರೈ ಮಾಡಿಕೊಳ್ಳಿ. ಇದನ್ನು ಮಿಕ್ಸಿಯಲ್ಲಿ ನೀರು ಹಾಕದೆ ಪುಡಿ ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ಮಿಕ್ಸಿಯಲ್ಲಿ ಮಾಡಿಟ್ಟ ಪುಡಿ, ಟೊಮೆಟೊ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಟೊಮೆಟೊ ಬೆಂದ ಮೇಲೆ ಒಗ್ಗರಣೆ ಕೊಟ್ಟರೆ ಬಾಣಂತಿ ಸಾರು ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ