ಬೆಂಗಳೂರು: ನಿಂಬೆ ಹುಳಿ ವಿಟಮಿನ್ ಸಿ ಅಧಿಕವಿರುವ ಹಣ್ಣು. ಇದರ ಹುಳಿ ಒಮ್ಮೆಯಾದರೂ ರುಚಿ ನೋಡದವರಿಲ್ಲ. ಪಾನಕ ಎಲ್ಲರ ಅಚ್ಚುಮೆಚ್ಚು. ನಿಂಬೆಹಣ್ಣು ಒಂದು ಬಹುಪಯೋಗಿ ಹಣ್ಣು. ಇದರಲ್ಲಿರುವ ವಿಟಮಿನ್ ಇ, ಎ, ಬಿ6, ಕಬ್ಬಿಣದಂಶ, ಕ್ಯಾಲ್ಶಿಯಂ ಅಂಶ ಹೇರಳವಾಗಿದೆ.
ಮನೆ ಮದ್ದಿನಲ್ಲಿ ಇದು ಹಲವು ರೀತಿಯಲ್ಲಿ ಉಪಯುಕ್ತವಾಗಿದೆ. ಹೊರಗಿನ ಆಹಾರ ತಿಂದು ಕರಗದೇ ಇದ್ದಾಗ ವಾಂತಿ ಬರುವಂತಾಗುವುದು ಸಹಜ. ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸ ಮತ್ತು ಉಪ್ಪು ಸೇರಿಸಿ ಸೇವಿಸಿದರೆ ಜೀರ್ಣಕ್ರಿಯೆಗೆ ಉತ್ತಮ. ಪಿತ್ತ, ಫುಡ್ ಪಾಯಿಸನ್ ಮುಂತಾದ ಸಮಸ್ಯೆಗಳಿಗೆ ಇದೇ ರೀತಿ ಮಾಡಿ ಸೇವಿಸುವುದು ಉತ್ತಮ ಪರಿಹಾರ.
ಬಿಡದೇ ಕೆಮ್ಮು ಕಾಡುತ್ತಿದ್ದರೂ ನಿಂಬೆ ರಸವನ್ನು ಬಳಸಬಹುದು. ನಿಂಬೆ ರಸಕ್ಕೆ ಕೊಂಚ, ಶುಂಠಿ ರಸ ಮತ್ತು ಜೇನು ತುಪ್ಪ ಸೇರಿಸಿ ಕುಡಿದರೆ ಬಿಡದೇ ಕಾಡುವ ಕೆಮ್ಮು ನಿವಾರಣೆಯಾಗುತ್ತದೆ. ಜ್ವರ ಬಂದು ನಿತ್ರಾಣರಾದಾಗ ನಿಂಬೆ ಹಣ್ಣಿನ ಪಾನಕ ಮಾಡಿಕೊಂಡು ಕುಡಿದರೆ ದೇಹಕ್ಕೆ ಬಲ ಸಿಗುತ್ತದೆ.
ದೇಹವನ್ನು ತಂಪಾಗಿಡಲು ಇದು ಸಹಾಯಕ. ದೇಹದ ಉಷ್ಣತೆ ಸಮತೋಲನದಲ್ಲಿಡಲು, ಮೂತ್ರಪಿಂಡದಲ್ಲಿ ಕಲ್ಲು ಸಮಸ್ಯೆಗೂ ಇದು ಪರಿಹಾರ ಒದಗಿಸುತ್ತದೆ. ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನಲ್ಲಿ ನಿಂಬೆ ರಸ ಮತ್ತು ಜೇನು ತುಪ್ಪ ಹಾಕಿ ಕುಡಿಯುವುದರಿಂದ ದೇಹದ ತೂಕ ನಿಯಂತ್ರಿಸಬಹುದು.
ಕೂದಲಿನ ಸಂರಕ್ಷಣೆಯಲ್ಲಂತೂ ಇದು ಪ್ರಮುಖವಾಗಿ ಬಳಕೆಯಾಗುತ್ತದೆ. ತಲೆ ಹೊಟ್ಟಿನ ಸಮಸ್ಯೆಗೆ ನಿಂಬೆ ರಸ ಹಚ್ಚಿಕೊಳ್ಳುವುದು ಪರಿಹಾರ. ಅಲ್ಲದೆ ಕೂದಲು ಉದುರುವಿಕೆ, ಸೀಳು ಕೂದಲುಗಳ ಸಮಸ್ಯೆಗೂ ನಿಂಬೆ ಹಣ್ಣನ್ನು ಬಳಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ