Select Your Language

Notifications

webdunia
webdunia
webdunia
webdunia

ಸ್ಪೆಷಲ್ ಪಾಸ್ಟಾ ಮಸಾಲಾ

ಸ್ಪೆಷಲ್ ಪಾಸ್ಟಾ ಮಸಾಲಾ
ಬೆಂಗಳೂರು , ಶನಿವಾರ, 3 ಜೂನ್ 2017 (17:22 IST)
ಬಲು ರುಚಿಯಾದ ಸ್ಪೆಷಲ್ ಪಾಸ್ಟಾ ಮಸಾಲಾ ನೀವೂ ಟ್ರೈ ಮಾಡಿ
 
 ಬೇಕಾಗುವ ಸಾಮಗ್ರಿಗಳು:
 
* ಪಾಸ್ಟಾ -1 ಕಪ್ 
 
* ಟೊಮ್ಯಾಟೋ - 1 
 
* ಈರುಳ್ಳಿ - 2 
 
* ಬೆಳ್ಳುಳ್ಳಿ -1 ಚಮಚ 
 
* ಶುಂಠಿ - 1/2 ಟೀ ಚಮಚ 
 
* ಕೆಂಪು ಮೆಣಸಿನಕಾಯಿ ಪುಡಿ - 1 ಟೀಸ್ಪೂನ್
 
* ಜೀರಿಗೆ ಪುಡಿ - 1 ಟೀ ಸ್ಪೂನ್ 
 
* ಕಸೂರಿ ಮೇಥಿ - 1/2 ಟೀ ಸ್ಪೂನ್
 
* ಹಾಲು - 2 ಕಪ್
 
* ಎಣ್ಣೆ - 2 ಚಮಚ 
 
* ಕೊತ್ತಂಬರಿ ಸೊಪ್ಪು - ಸ್ವಲ್ಪ 
 
* ಉಪ್ಪು - ರುಚಿಗೆ ತಕ್ಕಷ್ಟು
 
ಮಾಡುವ ವಿಧಾನ:
 
ಒಂದು ಪ್ಯಾನ್ ಗೆ ಸ್ವಲ್ಪ ಉಪ್ಪು, 1 ಸ್ಪೂನ್ ಎಣ್ಣೆ, ಪಾಸ್ಟಾ ಮತ್ತು ನೀರನ್ನು ಹಾಕಿ ಬೇಯಿಸಿ. ಪಾಸ್ಟಾ ಬೆಂದ ನಂತ್ರ ಅದರಲ್ಲಿರುವ ನೀರನ್ನು ಬಸಿದು ಪಕ್ಕಕ್ಕಿಡಿ.
 
ಇನ್ನೊಂದು ಪ್ಯಾನ್ ನಲ್ಲಿ ಎಣ್ಣೆಯನ್ನು ಹಾಕಿ ಕಾದ ಬಳಿಕ ಈರುಳ್ಳಿ, ಟೊಮೆಟೊ, ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ಅದು ತಣ್ಣಗಾದ ನಂತ್ರ ಮಿಶ್ರಣವನ್ನು ರುಬ್ಬಿಕೊಳ್ಳಿ.
 
ನಂತ್ರ ಅದೇ ಪ್ಯಾನ್ ಗೆ ಎಣ್ಣೆ, ರುಬ್ಬಿದ ಮಿಶ್ರಣ ಹಾಗೂ ಉಪ್ಪನ್ನು ಹಾಕಿ ಬೇಯಿಸಿ. ನಂತರ ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಪುಡಿ, ಜೀರಿಗೆ ಹಾಕಿ ಫ್ರೈ ಮಾಡಿ.
 
ಇದಕ್ಕೆ ಹಾಲನ್ನು ಹಾಕಿ ಮಿಶ್ರಣ ದಪ್ಪಗಾಗುವವರೆಗೆ ಬೇಯಿಸಿ. ಹಾಲಿನ ಜೊತೆ ಮಸಾಲೆ ಸರಿಯಾಗಿ ಬೆಂದ ನಂತ್ರ ಅದಕ್ಕೆ ಕಸೂರಿ ಮೇಥಿ ಹಾಗೂ ಪಾಸ್ಟಾ ಹಾಕಿ ಮಿಕ್ಸ್ ಮಾಡಿ. ಒಮ್ದು ಬೌಲ್ ಗೆ ಸರ್ವ ಮಾಡಿ ಸವಿಯಿರಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಹಲ್ಲಿ ನಿಯಂತ್ರಣಕ್ಕೆ ಕೆಲವು ಸುಲಭ ಉಪಾಯಗಳು