Select Your Language

Notifications

webdunia
webdunia
webdunia
webdunia

ಹಲ್ಲಿ ನಿಯಂತ್ರಣಕ್ಕೆ ಕೆಲವು ಸುಲಭ ಉಪಾಯಗಳು

ಹಲ್ಲಿ ನಿಯಂತ್ರಣಕ್ಕೆ ಕೆಲವು ಸುಲಭ ಉಪಾಯಗಳು
Bangalore , ಶನಿವಾರ, 3 ಜೂನ್ 2017 (08:15 IST)
ಬೆಂಗಳೂರು: ಅಡುಗೆ ಮನೆಯಲ್ಲಿ ಹಲ್ಲಿಯ ಕಾಟ ಜಾಸ್ತಿ ಎಂದು ತಲೆಬಿಸಿ ಮಾಡಿಕೊಂಡಿದ್ದೀರಾ? ಈ ಅನಪೇಕ್ಷಿತ ಅತಿಥಿಯನ್ನು ಮನೆಯಿಂದ ಹೊರಗೆ ಹಾಕಲು ಇಲ್ಲಿದೆ ಕೆಲವು ಸರಳ ಉಪಾಯಗಳು.

 
ಐಸ್ ವಾಟರ್
ಹಲ್ಲಿ ಕಂಡೊಡನೆ ಅದರ ಮೇಲೆ ಐಸ್ ವಾಟರ್ ಹಾಕಿ. ಐಸ್ ನೀರು ಬಿದ್ದರೆ ಅದಕ್ಕೆ ಬೇಗನೇ ಓಡಾಡಲು ಆಗುವುದಿಲ್ಲ. ಆಗ ಅದನ್ನು ಎತ್ತಿ ಹೊರಹಾಕಬಹುದು.
ಈರುಳ್ಳಿ
ಈರುಳ್ಳಿಯನ್ನು ಕತ್ತರಿಸಿ ಅಡುಗೆ ಮನೆಯ ಮೂಲೆ ಮೂಲೆಯಲ್ಲಿ ಇಡಿ. ಈರುಳ್ಳಿಯ ವಾಸನೆ ಹಲ್ಲಿಗೆ ಆಗಿ ಬರೋದಿಲ್ಲ. ಅದು ಆ ಜಾಗಕ್ಕೆ ಸುಳಿಯುವುದೇ ಇಲ್ಲ.

ನವಿಲುಗರಿ
ಮನೆಯ ಗೋಡೆಯ ಮೂಲೆ ಮೂಲೆಯಲ್ಲಿ ನವಿಲು ಗರಿಯನ್ನು ನೇತಾಡಿಸಿ. ಅದನ್ನು ನೋಡಿದ ತಕ್ಷಣ ಹಲ್ಲಿ ಬೇರೇನೋ ಪ್ರಾಣಿ ಅಂದುಕೊಂಡು ಆ ಕಡೆಗೆ ಸುಳಿಯುವುದೇ ಇಲ್ಲ.

ಕಾಫಿ ಹುಡಿ ಮತ್ತು ತಂಬಾಕು ಉಂಡೆ
ಕಾಫಿ ಹುಡಿ ಮತ್ತು ತಂಬಾಕನ್ನು ಉಂಡೆ ಮಾಡಿ ಅಡುಗೆ ಮನೆಯ ಮೂಲೆ ಮೂಲೆಯಲ್ಲಿಟ್ಟು ನೋಡಿ. ಕಾಫಿ ಹುಡಿಯ ವಾಸನೆಗೆ ಹಲ್ಲಿ ಬಲೆಗೆ ಬೀಳುತ್ತದೆ.

ಇದೆಲ್ಲಾ ಆಗದಿದ್ದರೆ, ಮನೆಯಲ್ಲೊಂದು ಬೆಕ್ಕು ಸಾಕಿ ನೋಡಿ. ತಕ್ಷಣ ಹಲ್ಲಿಗಳು ಮಂಗಮಾಯವಾದಿದ್ದರೆ ಹೇಳಿ!

 http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಉಗುರುಗಳ ಸೌಂದರ್ಯಕ್ಕಾಗಿ ಈಸಿ ನೇಲ್ ಆರ್ಟ್