Select Your Language

Notifications

webdunia
webdunia
webdunia
webdunia

ಉಗುರುಗಳ ಸೌಂದರ್ಯಕ್ಕಾಗಿ ಈಸಿ ನೇಲ್ ಆರ್ಟ್

ಉಗುರುಗಳ ಸೌಂದರ್ಯಕ್ಕಾಗಿ ಈಸಿ ನೇಲ್ ಆರ್ಟ್
ಬೆಂಗಳೂರು , ಗುರುವಾರ, 1 ಜೂನ್ 2017 (17:22 IST)
ಬೆಂಗಳೂರು: ನೇಲ್ ಆರ್ಟ್ ಯಾರಿಗೆ ತಾನೆ ಇಷ್ಟವಾಗಲ್ಲ, ಉಗುರಿನ ಮೇಲೆ ಬಣ್ಣಹಾಕಿ ಅದರ ಮೇಲೊಂದು ನಿಮಗಿಷ್ಟವಾದ ರೀತಿಯ ಚಿತ್ರಗಳನ್ನು ಬಿಡಿಸುವುದೇ ಈ ನೇಲ್ ಆರ್ಟ್. ಇದು ಇತ್ತೀಚಿನ ದಿನಗಳಲ್ಲಿ ಟ್ರೆಂಡಿ ಫ್ಯಾಷನ್.

ಕಾಲೇಜು ಹುಡುಗಿಯರು, ಮಹಿಳೆಯರು, ಗೃಹಿಣಿಯರು, ಮಕ್ಕಳು, ಕೆಲಸಗಳಿಗೆ ಹೋಗುವ ಮಹಿಳೆಯರು, ಮಧ್ಯಮ ವಯಸ್ಸಿನ ಮಹಿಳೆಯರು ಹೀಗೆ ಎಲ್ಲರೂ ಈ ನೇಲ್ ಆರ್ಟ್ ಗೆ ಮಾರುಹೋದವರೇ. ಇದು ಒಂದು ರೀತಿಯಲ್ಲಿ ಉಗುರುಗಳ ಮೇಲಿನ ಚಿತ್ತಾರದ ಮೂಲಕ ಕ್ರಿಯೇಟಿವಿಟಿಯನ್ನು ಓರೆಗೆ ಹಚ್ಚಿದಂತೆ. ಅವರವರ ಆಸಕ್ತಿಗಳಿಗೆ ಅನುಗುಣವಾಗಿ ಬಗೆ ಬಗೆಯ ನೇಲ್ ಆರ್ಟ್ ಗಳು ಸೃಷ್ಟಿಯಾಗುತ್ತಲೆ ಇರುತ್ತವೆ.
 
ಒಂದಿಷ್ಟು ಕಲರ್ ಗಳ ನೇಲ್ ಪಾಲಿಶ್ ಇದ್ದರೆ ಈ ನೇಲ್ ಆರ್ಟ್ ನ್ನು ನಾವೇ ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಸುಲಭವಾಗಿ ಹೇಳಬೇಕೆಂದರೆ ನಿಮ್ಮ ಉಗುರುಗಳ ಮೇಲೆ ಒಂದು ಕೋಟ್ ಪಾಲೀಶ್ ಮಾಡಿ. ನಂತರ ಟೂತ್ ಪಿಕ್ ತೆಗೆದುಕೊಂಡು ನಿಮಗೆ ಇಷ್ಟವಾದ ಬಣ್ಣದಲ್ಲಿ ಅದ್ದಿ ಪಾಲಿಶ್ ಹಾಕಿ. ತುಂಬಾ ಸುಲಭವಾದ ಡಿಸೈನ್ ಎಂದರೆ ಡಾಟ್ ಡಿಸೈನ್. 
 
ಡಾಟ್ ಡಿಸೈನ್ ನ್ನು ಉಗಿರಿನ ಮೂಲೆಯಿಂದ ಆರಂಭಿಸಿ. ದೊಡ್ಡ ಡಾಟ್ ನಿಂದ ಚಿಕ್ಕ ಡಾಟ್ ಗಳನ್ನು ಮಾಡಿಕೊಳ್ಳಿ. ಡಾಟ್ ಡಿಸೈನ್ ನಲ್ಲಿ ವಿವಿಧ ರೀತಿಯ ಕಲರ್ ಕಾಂಬಿನೇಷನ್ ಗಳನ್ನು ನೀವೇ ಮಾಡಿಕೊಳ್ಳಬಹುದು. ಬಿಳಿ ಅಥವಾ ತಿಳಿ ಗುಲಾಬಿ ಬಣ್ಣದ ಪಾಲಿಶ್ ಮೇಲೆ ಕಪ್ಪುಬಣ್ಣದ ಡಾಟ್, ಕಪ್ಪು ಬಣ್ಣದ ಪಾಲಿಶ್ ಮೇಲೆ ಗೋಲ್ಡನ್ ಕಲರ್ ಡಾಟ್, ಡಾರ್ಕ್ ನೀಲಿ ಅಥವಾ ತೆಳು ನೀಲಿ ಬಣ್ಣದ ಪಾಲೀಶ್ ಮೇಲೆ ಕಪ್ಪು ಡಾಟ್ ಹಿಗೆ ನಿಮಗಿಷ್ಟದ ಕಲರ್ ಗಳನ್ನು ಟ್ರೈ ಮಾಡಬಹುದು.
 
ಇನ್ನೊಂದು ಸುಲಭದ ಡಿಸೈನ್ ಎಂದರೆ ಜಿಬ್ರಾ ಡಿಸೈನ್. ಉಗಿರಿನ ಮೇಲೆ ಪಾಲಿಶ್ ಹಾಕಿಕೊಳ್ಳಿ. ಅದರ ಮೇಲೆ ಟೂತ್ ಪಿಕ್ ಅಥವಾ ಸೂಜಿಯ ಸಹಾಯದಿಂದ ಕಪ್ಪು ಬಣ್ನದ  ಗೆರೆ ಅಡ್ಡಲಾಗಿ ಎಳೆಯಿರಿ. ಬಿಳಿ ಪಾಲಿಶ್ ಮೇಲೆ ಕಪ್ಪು ಅಥವಾ ಹಳದಿ ಪಾಲಿಶ್ ಮೇಲೆ ಕಪ್ಪು ಜಿಬ್ರಾ ಡಿಜೈನ್ ಸುಂದರವಾಗಿ ಕಾಣುತ್ತದೆ.
 
ಇನ್ನೊಂದು ಸುಲಭ ಡಿಸೈನ್ ಎಂದರೆ ಒನ್ನೊಂದು ಉಗುರುಗಳಿಗೂ ಒನ್ನೊಂದು ಪಾಲಿಶ್. ಹೀಗೆ ಒನ್ನೊಂದು ಉಗುರಿಗೆ ಒನ್ನೊಂದು ಬಣ್ಣಗಳನ್ನು ಹಾಕಿಕೊಳ್ಳುವಾಗ ತುಂಬಾ ತಾಳ್ಮೆಯಿಂದ ಮಾಡಿಕೊಳ್ಳಬೇಕು. ಕಾರಣ ನಿಮ್ಮ ಉಗುರಿಗೆ ಯಾವ ಯಾವ ಬಣ್ಣಗಳು ಸುಂದರವಾಗಿ ಕಾಣಬಹುದು ಹಾಗೂ ಯಾವ ಬಣ್ಣದ ಬಳಿಕ ಯಾವ ಬಣ್ಣ ಬಂದಲ್ಲಿ ಇನ್ನಷ್ಟು ಆಕರ್ಷಣೀಯವಾಗಿ ಕಾಣಬಹುದು ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಹೀಗೆ ಎಲ್ಲಾ ಉಗುರುಗಳಿಗೂ ಬಣ್ಣ ಹಾಕಿದ ಮೇಲೆ ಗ್ಲಿಟರ್ ಪಾಲಿಶ್ ಒಂದು ಲೇಯರ್ ಹಾಕಿದರೆ ಇನ್ನೂ ಆಕರ್ಷಣೀಯವಾಗಿ ಕಾಣುತ್ತದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲೇ ಸುಲಭವಾಗಿ ಸ್ಟ್ರೈಟ್ ಹೇರ್ ಮಾಡಿ