Webdunia - Bharat's app for daily news and videos

Install App

ಹೀರೆಕಾಯಿ ಹುಳಿ ತೊವ್ವೆ

Webdunia
ಮಂಗಳವಾರ, 28 ಜುಲೈ 2020 (08:51 IST)
ಬೆಂಗಳೂರು : ಹೀರೆಕಾಯಿಯಿಂದ ಬೋಂಡಾ, ಪಲ್ಯ ಸಾರು ಮಾಡಿದರೆ ಎಷ್ಟು ರುಚಿಕರವಾಗಿರುತ್ತೋ ಹೀರೆಕಾಯಿಯ ಹುಳಿತೊವ್ವೆ ಕೂಡ ಅಷ್ಟೇ ರುಚಿಕರವಾಗಿರುತ್ತೆ. ಹಾಗಾದ್ರೆ ಹೀರೆಕಾಯಿ ಹುಳಿತೊವ್ವೆ ಮಾಡೋಣ.

ಬೇಕಾಗುವ ಸಾಮಾಗ್ರಿಗಳು : ಹೀರೆಕಾಯಿ-3, ತೊಗರಿಬೇಳೆ ¼ ಕಪ್, ಚಕ್ಕೆ, ಹುಳಿ, ಕೊತ್ತಂಬರಿ 1ಚಮಚ, ಜೀರಿಗೆ 1 ¼  ಚಮಚ, ಮೆಂತೆ-4 ಕಾಳು, ಉದ್ದಿನಬೇಳೆ 1 ಚಮಚ, ಕಡಲೇಬೇಳೆ-1 ಚಮಚ. ಮೆಣಸು-6, ತೆಂಗಿನಕಾಯಿ ತುರಿ ½ ಕಪ್, ಎಣ್ಣೆ, ಸಾಸಿವೆ, ಕರಿಬೇವು. ಬೆಲ್ಲ, ಉಪ್ಪು.

ಮಾಡುವ ವಿಧಾನ : ಮೊದಲಿಗೆ ಹೀರೆಕಾಯಿಯನ್ನು ಕತ್ತರಿಸಿಕೊಳ್ಳಿ. ಅದಕ್ಕೆ ಬೇಳೆ, ಸ್ವಲ್ಪ ಉಪ್ಪು, ಅರಿಶಿನ ಹಾಕಿ ಕುಕ್ಕರ್ ನಲ್ಲಿ ಎರಡು ವಿಷಲ್ ಹಾಕಿ. ನಂತರ ಒಂದು ಬಾಣಲೆಗೆ ಎಣ್ಣೆ, ಚಕ್ಕೆ, ಮೊಗ್ಗು, ಜೀರಿಗೆ ಕೊತ್ತಂಬರಿ, ಮೆಂತೆ, ಕಡಲೇಬೇಳೆ, ಉದ್ದಿನಬೇಳೆ  ಹಾಕಿ ಹುರಿದುಕೊಳ್ಳಿ. ಮೆಣಸನ್ನು ಹುರಿದುಕೊಳ್ಳಿ. . ನಂತರ ಹುರಿದ ಸಾಮಾಗ್ರಿಗಳನ್ನು ಕಾಯಿತುರಿಯೊಂದಿಗೆ ಹುಳಿ ಹಾಕಿ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕರಿಬೇವು ಬೇಯಿಸಿದ ಹೀರೆಕಾಯಿಯನ್ನು ಹಾಕಿ. ಆಮೇಲೆ ಅದಕ್ಕೆ ರುಬ್ಬಿಕೊಂಡ ಮಿಶ್ರಣ ಹಾಕಿ. ಬೆಲ್ಲ, ಉಪ್ಪು ಸೇರಿಸಿ. ಚೆನ್ನಾಗಿ ಕುದಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments