Select Your Language

Notifications

webdunia
webdunia
webdunia
webdunia

ರುಚಿಕರವಾದ ಟೊಟೊ ದೋಸೆ

ರುಚಿಕರವಾದ ಟೊಟೊ ದೋಸೆ
ಬೆಂಗಳೂರು , ಮಂಗಳವಾರ, 28 ಜುಲೈ 2020 (08:20 IST)
Normal 0 false false false EN-US X-NONE X-NONE

ಬೆಂಗಳೂರು : ದೋಸೆಗಳನ್ನು ತಿನ್ನಲು  ಹೆಚ್ಚಿನವರು ಇಷ್ಟಪಡುತ್ತಾರೆ. ಅದು ನಿಮ್ಮ ನಾಲಿಗೆಯ ರುಚಿಯನ್ನು ಸಹ ಹೆಚ್ಚಿಸುತ್ತದೆ. ಆದರೆ ಒಂದೇ ತರಹದ ದೋಸೆಗಳನ್ನು ತಿನ್ನತಿದ್ದರೆ ಬೇಜಾರಾಗಬಹುದು. ಅದಕ್ಕೆ ಟೊಮೆಟೊ ದೋಸೆ ಮಾಡಿ.

ಬೇಕಾಗುವ ಸಾಮಾಗ್ರಿಗಳು : 1 ಗ್ಲಾಸ್ ಅಕ್ಕಿ ಮತ್ತು 1/4 ಗ್ಲಾಸ್ ಉದ್ದಿನ ಬೇಳೆ, ಸ್ವಲ್ಪ ಅವಲಕ್ಕಿ, ಸ್ವಲ್ಪ ಕಡಲೆಬೇಳೆ, ಹಸಿ ಮೆಣಸಿನಕಾಯಿ 3, ಟೊಮೆಟೊ  2 , ಜೀರಿಗೆ 1 ಚಮಚ, ಹಸಿ ಶುಂಠಿ ಸ್ವಲ್ಪ, ರುಚಿಗೆ ಬೇಕಾಗುವಷ್ಟು ಉಪ್ಪು, ಸ್ವಲ್ಪ  ಎಣ್ಣೆ

ಮಾಡುವ ವಿಧಾನ :  ಅಕ್ಕಿ, ಅವಲಕ್ಕಿ, ಕಡಲೆಬೇಳೆ, ಉದ್ದಿನ ಬೇಳೆಯನ್ನು ತೆಗೆದುಕೊಂಡು  ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಸಿ ನಂತರ ಚೆನ್ನಾಗಿ ತೊಳೆದು ರುಬ್ಬಿ 8-9 ಗಂಟೆಗಳ ಕಾಲ ಹಾಗೇ ಇಡಿ. ದೋಸೆ ಮಾಡುವ ಅರ್ಧ ಗಂಟೆ ಮೊದಲು ಟೊಮೆಟೊ, ಹಸಿ ಮೆಣಸಿನಕಾಯಿ, ಶುಂಠಿ, ಜೀರಿಗೆ ಒಟ್ಟಿಗೆ ಸೇರಿಸಿ ನೀರು ಹಾಕದೆ ಮಿಕ್ಸಿಯಲ್ಲಿ ರುಬ್ಬಿ. ನಂತರ ಅದನ್ನು ದೋಸೆ ಹಿಟ್ಟಿಗೆ ಹಾಕಿ ಆಮೇಲೆ ಅದಕ್ಕೆ ರುಚಿಗೆ ತಕ್ಕ ಉಪ್ಪು ಮತ್ತು ಸ್ವಲ್ಪ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕಾದ ತವಾದ ಮೇಲೆ ದೋಸೆ ಮಾಡಿರಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯ ವಧು-ವರ ಸಹಿತ ಕಾಸರಗೋಡಿನಲ್ಲಿ 43 ಮಂದಿಗೆ ಕೊರೋನಾ