Webdunia - Bharat's app for daily news and videos

Install App

ಬೇಗ ಬೇಗನೆ ರೆಡಿಯಾಗುವ ಬಾಂಬೆ ಸಾಗು!

Webdunia
ಶುಕ್ರವಾರ, 13 ಜುಲೈ 2018 (12:54 IST)
ಬೆಂಗಳೂರು: ಮನೆಯಲ್ಲಿ ಪೂರಿನೋ,  ಚಪಾತಿನೋ ಮಾಡಿದಾಗ ಅದಕ್ಕೆ ಏನಾದರೂ ಪಲ್ಯ ಮಾಡಬೇಕು ಎಂಬ ತಲೆಬಿಸಿಯಲ್ಲಿರುತ್ತೇವೆ. ತಕರಕಾರಿ ಸಾಗು ಮಾಡುವುದಕ್ಕೆ  ಸ್ವಲ್ಪ ಸಮಯ ಬೇಕಾಗುತ್ತದೆ. ಈ ಬಾಂಬೆ ಸಾಗು ಪ್ರಯತ್ನಿಸಿ ನೋಡಿ. ನಿಮ್ಮ ಸಮಯವೂ ಉಳಿಯುತ್ತೆ, ರುಚಿಕರವಾಗಿಯೂ ಇರುತ್ತದೆ.

ಬೇಕಾಗುವ ಸಾಮಾಗ್ರಿ
ಬೇಯಿಸಿದ ಆಲೂಗಡ್ಡೆ ೨
ಈರುಳ್ಳಿ ೧
ಬೆಳ್ಳುಳ್ಳಿ ಶುಂಟಿ ಪೇಸ್ಟ್ ೧ ಟೀಚ
ಹಸಿಮೆಣಸು ೪
ಕಡಲೆ ಹಿಟ್ಟು ೨ ಟೇ ಚ
ಟೊಮೇಟೊ ೧
ಉದ್ದಿನಬೇಳೆ ೧ ಟೀ ಚ
ಕಡಲೆಬೇಳೆ ೧ ಟೀ ಚ
ಅರಿಶಿನ ಚಿಟಿಕೆ
ಕೊತ್ತೊಂಬರಿ ಸೊಪ್ಪು
ಎಣ್ಣೆ ೧ ಚಮಚ
ಕರಿಬೇವು ಸ್ವಲ್ಪ
ಇಂಗು ಚಿಟಿಕೆ
ಸಾಸಿವೆ ೧ ಟೀ ಚ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಒಂದು ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಉದ್ದಿನಬೇಳೆ, ಕಡಲೆಬೇಳೆ, ಸಾಸಿವೆ, ಇಂಗು, ಹಸಿಮೆಣಸು ಹಾಕಿ ಹುರಿಯಿರಿ.

ಉದ್ದಿನಬೇಳೆ ಮತ್ತು ಕಡಲೆಬೇಳೆ ಕೆಂಪಗಾದ ಮೇಲೆ ಅದಕ್ಕೆ ಕರಿಬೇವು, ಅರಿಶಿನ, ಶುಂಠಿ ಬೆಳ್ಳಿ ಪೇಸ್ಟ್ ಮತ್ತು ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. 

ನಂತರ ಅದಕ್ಕೆ ಹೆಚ್ಚಿದ ಟೊಮೇಟೊ ಸೇರಿಸಿ ನಂತರ ೨ ಕಪ್ ನೀರು ಸೇರಿಸಿ ಕುದಿಸಿ.ಈಗ ಅದಕ್ಕೆ ಬೇಯಿಸಿದ ಆಲೂಗಡ್ಡೆಯ ಚೂರುಗಳು, ಉಪ್ಪು, ಸ್ವಲ್ಪ ನೀರಿನಲ್ಲಿ ಕರಗಿಸಿದ ಕಡಲೆಹಿಟ್ಟು ಸೇರಿಸಿ ಚೆನ್ನಾಗಿ ಕುದಿಸಿ.ಕೊತ್ತೊಂಬರಿ ಸೊಪ್ಪಿನಿಂದ ಅಲಂಕರಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments