ಬೆಂಗಳೂರು: ಹಪ್ಪಳ, ಸೆಂಡಿಗೆ ಜತೆಗಿದ್ದರೆ ಊಟ ರುಚಿಕಟ್ಟಾಗಿರುತ್ತದೆ. ಹೀಗಾಗಿ ಒಂದು ಆಲೂಗಡ್ಡೆ ಬಳಸಿ ಸೆಂಡಿಗೆ ಮಾಡುವುದು ಹೇಗೆಂದು ಹೇಳಿದ್ದೇವೆ. ನೋಡಿ ಮಾಡಿ, ತಿನ್ನಿ.
ಬೇಕಾಗುವ ಸಾಮಗ್ರಿಗಳು
ಆಲೂಗಡ್ಡೆ
ಉಪ್ಪು
ನೀರು
ಕರಿಯಲು ಎಣ್ಣೆ
ಮಾಡುವ ವಿಧಾನ
ಆಲೂ ಗಡ್ಡೆ ಸಿಪ್ಪೆ ತೆಗೆದು ತೆಳುವಾಗಿ ಚಿಪ್ಸ್ ಗೆ ಬೇಕಾಗುವಂತೆ ಹೆಚ್ಚಿಕೊಳ್ಳಿ. ಚಿಪ್ಸ್ ಗಿಂತ ಸ್ವಲ್ಪ ದಪ್ಪವಾಗಿ ಹೆಚ್ಚಿಕೊಳ್ಳಿ. ಇದನ್ನು ಉಪ್ಪು ಹಾಕಿದ ಕುದಿಯುವ ನೀರಿನಲ್ಲಿ ಒಂದು ಕುದಿ ಕುದಿಸಿ. ನಂತರ ಈ ಆಲೂಗಡ್ಡೆ ಬಿಲ್ಲೆಗಳನ್ನು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ. ಒಣಗಿದ ಮೇಲೆ ಎಣ್ಣೆಯಲ್ಲಿ ಕರಿದರೆ ಚಿಪ್ಸ್ ನಂತೆ ಊಟದ ಜತೆಗೆ ರುಚಿಕರವಾದ ಸೆಂಡಿಗೆ ಸವಿಯಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ