Select Your Language

Notifications

webdunia
webdunia
webdunia
webdunia

ಪಿಸ್ತಾ ಸೇವನೆಯಿಂದ ಆರೋಗ್ಯ ವೃದ್ಧಿ

ಪಿಸ್ತಾ ಸೇವನೆಯಿಂದ ಆರೋಗ್ಯ ವೃದ್ಧಿ
ಬೆಂಗಳೂರು , ಬುಧವಾರ, 10 ಅಕ್ಟೋಬರ್ 2018 (13:51 IST)
ಒಣ ಹಣ್ಣುಗಳು ( ಡ್ರೈ ಫ್ರೂಟ್ಸ್) ಮನುಷ್ಯನ ಆಹಾರ ಸೇವನೆಯ ವಿಧಾನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇವುಗಳನ್ನು ಹಾಗೆಯೇ ಹಸಿಯಾಗಿ ತಿಂದರೂ ಆರೋಗ್ಯಕ್ಕೆ ಲಾಭವೇ ಮತ್ತು ಇನ್ನಿತರ ಆಹಾರ ಪದಾರ್ಥಗಳೊಂದಿಗೆ ಬೇಯಿಸಿದರೂ ರುಚಿಯನ್ನು ಹೆಚ್ಚಿಸುತ್ತದೆ. ಅಂತಹ ಒಣಹಣ್ಣುಗಳಲ್ಲಿ ಬಾದಾಮಿ, ನೆಲಗಡಲೆ, ಗೋಡಂಬಿ, ದ್ರಾಕ್ಷಿ, ಪಿಸ್ತಾ ಹೀಗೆ ಹತ್ತು ಹಲವಾರಿವೆ. ಇಂತಹ ಒಣಹಣ್ಣುಗಳಲ್ಲಿ ಚಿಪ್ಪಿನಂತಿರುವ ಎರಡು ದಳಗಳ ನಡುವೆ ಇರುವ ಕಂದು ಬಣ್ಣದಲ್ಲಿರುವ ಹಣ್ಣೇ ಪಿಸ್ತಾ. ಈ ಪಿಸ್ತಾವು ರುಚಿಗಷ್ಟೇ ಅಲ್ಲದೇ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದೇ. 
* ಪಿಸ್ತಾವು ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚಿನ ಕರಗುವ ನಾರನ್ನು ಹೊಂದಿರುವ ಮೂಲಕ ಹೃದಯ ಮತ್ತು ರಕ್ತನಾಳಗಳ ಆರೋಗ್ಯವನ್ನು ವೃದ್ಧಿಸುತ್ತದೆ.
 
* ಪಿಸ್ತಾ ಸೇವನೆಯಿಂದ ಆರೋಗ್ಯಕಾರಿ ಕೊಲೆಸ್ಟ್ರಾಲ್‌ಗಳು ಹೆಚ್ಚುವುದಲ್ಲದೇ ಇವು ಹೃದಯವನ್ನು ಸಂಪರ್ಕಿಸುವ ರಕ್ತನಾಳಗಳನ್ನು ಸದೃಢಗೊಳಿಸುತ್ತವೆ.
 
* ದೇಹದಲ್ಲಿ ಅಮೈನೋ ಆಮ್ಲ ಹೆಚ್ಚಲು ಮತ್ತು ದೇಹದ ನರವ್ಯೆಹ ಸರಿಯಾಗಿ ಕೆಲಸ ನಿರ್ವಹಿಸಲು ಪಿಸ್ತಾ ಸಹಕಾರಿಯಾಗಿದೆ. ಒಂದು ಹಿಡಿಯಷ್ಟು ಪಿಸ್ತಾಕ್ಕೆ ಸ್ವಲ್ಪ ಜೇನನ್ನು ಸೇರಿಸಿ ದಿನವೂ ಬೆಳಗ್ಗೆ ತಿನ್ನುತ್ತಿದ್ದರೆ ನಿರೋಧಕ ಶಕ್ತಿ ಮತ್ತಷ್ಟು ಹೆಚ್ಚುತ್ತದೆ.
 
* 2001 ರಲ್ಲಿ ಕಂಡುಬಂದಿರುವ ಸಂಶೋಧನೆಯ ಪ್ರಕಾರ ಪಿಸ್ತಾ ತಿನ್ನುವುದರಿಂದ ದೇಹದಲ್ಲಿರುವ ಕೆಟ್ಟ ಕೊಬ್ಬು ಕಡಿಮೆಯಾಗುತ್ತದೆಂದು ತಿಳಿದು ಬಂದಿದೆ. 
 
* ದೇಹದಲ್ಲಿ ಬಿಳಿರಕ್ತಕಣಗಳನ್ನು ಹೆಚ್ಚಿಸುವಲ್ಲಿಯೂ ಪಿಸ್ತಾ ಸಹಕಾರಿಯಾಗಿದೆ. ಮಧುಮೇಹದಿಂದ ಬಳಲುತ್ತಿರುವವರು ಪಿಸ್ತಾ ಸೇವಿಸುವುದರಿಂದ ರೋಗವು ಹತೋಟಿಗ ಬರುತ್ತದೆ.
 
* ಪಿಸ್ತಾವನ್ನು ದಿನನಿತ್ಯ ಸೇವಿಸುವುದರಿಂದ ವಯಸ್ಸಾದಂತೆ ಬರುವಂತಹ ಅಕ್ಷಿಪಟಲದ ಸಮಸ್ಯೆಯನ್ನು ನಿವಾರಣೆ ಮಾಡಬಹುದು.
 
* ಪಿಸ್ತಾಗಳಲ್ಲಿ ವಿಟಮಿನ್ ಬಿ6 ಹೆಚ್ಚಿನ ಪ್ರಮಾಣದಲ್ಲಿವೆ. ಈ ವಿಟಮಿನ್ನುಗಳು ಮೆದುಳಿನ ಕ್ಷಮತೆಗೆ ಅತಿ ಅಗತ್ಯವಾಗಿವೆ. ಪಿಸ್ತಾ ಸೇವನೆಯಿಂದ ಮೆದುಳಿನ ಜೀವಕೋಶಗಳು ನಷ್ಟವಾಗುವುದನ್ನು ತಪ್ಪಿಸಬಹುದು ಹಾಗೂ ಮೆದುಳಿಗೆ ರಕ್ತಪರಿಚಲನೆ ಹೆಚ್ಚುವ ಮೂಲಕ ಸ್ಮರಣಶಕ್ತಿ ಹಾಗೂ ಏಕಾಗ್ರತೆಯೂ ಹೆಚ್ಚುತ್ತದೆ.
 
* ಪಿಸ್ತಾಗಳಲ್ಲಿ ವಿಟಮಿನ್ ಬಿ6 ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಇವು ಹಿಮೊಗ್ಲೋಬಿನ್ ಪ್ರಮಾಣ ಹೆಚ್ಚಲು ನೆರವಾಗುತ್ತದೆ.
 
* ಪಿಸ್ತಾದಲ್ಲಿ ಬಯೋಟಿನ್ ಅಂಶವಿರುವುದರಿಂದ ಇದನ್ನು ಸೇವಿಸುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.
 
* ಶುಶ್ಕ ಚರ್ಮವನ್ನು ಹೊಂದಿರುವವರು ಪಿಸ್ತಾವನ್ನು ಹೇರಳವಾಗಿ ಸೇವಿಸುವುದರಿಂದ ಚರ್ಮವು ಕಾಂತಿಯುಕ್ತವಾಗುತ್ತದೆ. ಇದು ಚರ್ಮದ ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತದೆ.
 
* ಪಿಸ್ತಾವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯು ಸುಧಾರಿಸುವುದರಿಂದ ತೂಕವನ್ನು ಇಳಿಸಲು ಬಯಸುವವರು ಪಿಸ್ತಾವನ್ನು ಸೇವಿಸುವುದರಿಂದ ಬೊಜ್ಜು ಮತ್ತು ಕೊಲೆಸ್ಟ್ರಾಲ್‌ಗಳು ನಿಯಂತ್ರಣಗೊಂಡು ತೂಕದಲ್ಲಿ ಇಳಿಕೆಯಾಗುತ್ತದೆ.
 
* ಪಿಸ್ತಾವು ಜೀವಕೋಶಗಳ ಸವೆತವನ್ನು ತಡೆಯುತ್ತದೆ. ಪಿಸ್ತಾಗಳಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿರುವ ಫ್ರೀ ರಾಡಿಕಲ್‌ಗಳನ್ನು ನಿವಾರಿಸುತ್ತದೆ.
 
* ಪಿಸ್ತಾಗಳಲ್ಲಿ ಹೆಚ್ಚಿನ ಶಕ್ತಿ ತುಂಬಿದ್ದು ಇವುಗಳ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಚುರುಕುತನ ಲಭಿಸುತ್ತದೆ.
 
* ಪಿಸ್ತಾದಲ್ಲಿ ಗಂಧಕವು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಇವು ಆಹಾರದಲ್ಲಿರುವ ಪ್ರೋಟೀನ್‌ಗಳನ್ನು ಅಮೈನೋ ಅಮ್ಲಗಳನ್ನಾಗಿಸಲು ನೆರವಾಗುತ್ತದೆ.
 
*  ಪಿಸ್ತಾದಲ್ಲಿ ವಿಟಮಿನ್ ಎ, ಇ ಮತ್ತು ಉರಿಬಾವುಗಳನ್ನು ತಡೆಯುವ ಅಂಶಗಳು ಯಥೇಚ್ಛವಾಗಿ ಇವೆ. ಇವುಗಳು ನಮ್ಮ ದೇಹದಲ್ಲಿ ಯಾವುದಾದರು ತೊಂದರೆಯಿಂದ ಊತ ಮತ್ತು ಬಾವುಗಳು ಉಂಟಾಗುವುದನ್ನು ತಪ್ಪಿಸುತ್ತವೆ.
 
* ಪಿಸ್ತಾ ಎಣ್ಣೆಯು ಒಂದು ಅತ್ಯುತ್ತಮ ಪ್ರಾಕೃತಿಕ ಮೊಯಿಶ್ಚರೈಸರ್ ಆಗಿರುತ್ತದೆ. ಇದು ತ್ವಚೆಯಲ್ಲಿ ತೇವಾಂಶವನ್ನು ಮತ್ತು ಮೃದುತ್ವವನ್ನು ಹೆಚ್ಚಿಸುವ ಅಂಶಗಳನ್ನು ತನ್ನಲ್ಲಿ ಒಳಗೊಂಡಿದೆ. ನಿಮ್ಮ ತ್ವಚೆ ಮೃದು ಮತ್ತು ರೇಷ್ಮೆಯಂತೆ ಮಿಂಚಲು ಮೊಯಿಶ್ಚರೈಸರ್ ಬಳಸುವ ಬದಲು ಪಿಸ್ತಾ ಎಣ್ಣೆಯನ್ನು ಬಳಸಿ.
 
* ಪಿಸ್ತಾದಲ್ಲಿ ಕೆರೊಟಿನಾಯ್ಡ್ ಮತ್ತು ಲ್ಯುಟಿನ್ ಅಂಶವು ಹೇರಳವಾಗಿವೆ. ಇದು ಕಣ್ಣಿನಲ್ಲಿ ಅವಶ್ಯಕ ಕೋಶಗಳ ಬೆಳವಣಿಗೆಗೆ ಸಹಕರಿಸಿ ದೃಷ್ಟಿದೋಷವನ್ನು ಕಡಿಮೆಗೊಳಿಸುತ್ತದೆ.
 
* ಪಿಸ್ತಾದಲ್ಲಿ ಸಮೃದ್ಧವಾಗಿರುವ ವಿಟಮಿನ್ ಇ ಯು ಒಂದು ಉತ್ತಮವಾದ ಕರಗುವ ಗುಣ ಹೊಂದಿದೆ ಆಂಟಿ ಆಕ್ಸಿಡೆಂಟ್ ಆಗಿರುತ್ತದೆ. ಪಿಸ್ತಾವು ಚರ್ಮದ ಮೇಲೆ ಸೂರ್ಯನ ಬಿಸಿಲಿನ ಪರಿಣಾಮ ಬೀರದಂತೆ ತಡೆಯುತ್ತದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಹೋಳಿಗೆ ಸಾರು ಮಾಡುವುದು ಹೇಗೆ ಗೊತ್ತಾ?