Select Your Language

Notifications

webdunia
webdunia
webdunia
webdunia

ಪನೀರ್ ತವಾ ಮಸಾಲಾ ಮಾಡಿ ನೋಡಿ..!!

paneer tawa masala
ಇದೊಂದು ಸರಳವಾದ ರೆಸಿಪಿಯಾಗಿದ್ದು ಸುಲಭವಾಗಿ ನೀವೇ ಮಾಡಿಕೊಳ್ಳಬಹುದಾಗಿದೆ. ಇದೊಂದು ಶೀಘ್ರವಾಗಿ ತಯಾರಿಸಿಕೊಳ್ಳಬಹುದಾದ ರುಚಿಯಾದ ರೆಸಿಪಿ. ಇದು ಸಾಮಾನ್ಯವಾಗಿ ರೊಟ್ಟಿ ಅಥವಾ ಅನ್ನದ ಜೊತೆಗೆ ಚೆನ್ನಾಗಿರುತ್ತದೆ. ಪನೀರ್ ತವಾ ಮಸಾಲಾ ಮಾಡುವ ಸರಳ ವಿಧಾನಕ್ಕಾಗಿ ಇಲ್ಲಿ ನೋಡಿ.
ಬೇಕಾಗುವ ಸಾಮಗ್ರಿಗಳು:
 
ಪನೀರ್ - 250 ಗ್ರಾಂ
ಅಚ್ಚಖಾರದ ಪುಡಿ - 2 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಚಮಚ
ಕಸುರಿ ಮೇತಿ - 2 ಚಮಚ
ಚಾಟ್ ಮಸಾಲಾ - 1 ಚಮಚ
ಎಣ್ಣೆ - ಸ್ವಲ್ಪ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಜೀರಿಗೆ - 1 ಚಮಚ
ಓಂಕಾಳು - 1 ಚಮಚ
ಈರುಳ್ಳಿ - 1
ದನಿಯಾ ಪುಡಿ - 1 ಚಮಚ
ಗರಂ ಮಸಾಲಾ - 1 ಚಮಚ
ಹಸಿ ಮೆಣಸು - 1
ಟೊಮೆಟೋ ಪ್ಯೂರಿ - 1 ಕಪ್
ಉಪ್ಪು - ರುಚಿಗೆ
ಕ್ರೀಂ - 2 ಚಮಚ
 
ಮಾಡುವ ವಿಧಾನ:
 
ಒಂದು ಬೌಲ್‌ನಲ್ಲಿ ಕಟ್ ಮಾಡಿದ ಪನೀರ್ ಚೂರುಗಳು, 2 ಚಮಚ ಎಣ್ಣೆ, 1 ಚಮಚ ಅಚ್ಚಖಾರದ ಪುಡಿ, 1 ಚಮಚ ಚಾಟ್ ಮಸಾಲಾ, 1 ಚಮಚ ಕಸುರಿ ಮೇತಿ ಮತ್ತು ಒಂದು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 15 ನಿಮಿಷಗಳ ನಂತರ ಇದನ್ನು ಕಾದ ತವಾ ಮೇಲೆ 2 ಚಮಚ ಎಣ್ಣೆಯನ್ನು ಹಾಕಿ ಅದರ ಮೇಲೆ ಗರಿಗರಿಯಾಗುವವರೆಗೆ ಸಣ್ಣ ಉರಿಯಲ್ಲಿ ಹುರಿದಿಟ್ಟುಕೊಳ್ಳಿ.
 
ಈಗ ಇನ್ನೊಂದು ತವಾದಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಕಾದ ನಂತರ 1 ಚಮಚ ಜೀರಿಗೆ, 1 ಚಮಚ ಓಂಕಾಳು, 1 ಹೆಚ್ಚಿದ ಈರುಳ್ಳಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಎರಡು ನಿಮಿಷದ ನಂತರ ಅದಕ್ಕೆ 1 ಚಮಚ ಅಚ್ಚಖಾರದ ಪುಡಿ, 1 ಹೆಚ್ಚಿದ ಹಸಿಮೆಣಸು ಮತ್ತು 1 ಚಮಚ ದನಿಯಾ ಪುಡಿಯನ್ನು ಹಾಕಿ ಹುರಿಯಿರಿ. ಈಗ ಇದಕ್ಕೆ 1 ಕಪ್ ಟೊಮೆಟೋ ಪ್ಯೂರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ 5 ನಿಮಿಷ ಕುದಿಸಿ. ಈಗ ಅದಕ್ಕೆ 1 ಚಮಚ ಗರಂ ಮಸಾಲಾ, 2 ಚಮಚ ಕ್ರೀಂ ಮತ್ತು ಸ್ವಲ್ಪ ನೀರನ್ನು ಹಾಕಿ 2 ನಿಮಿಷ ಬಿಟ್ಟು ಈಗಾಗಲೇ ಹುರಿದಿಟ್ಟುಕೊಂಡ ಪನೀರ್ ಚೂರುಗಳನ್ನು ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಇದಕ್ಕೆ ಸೇರಿಸಿ ಮಿಕ್ಸ್ ಮಾಡಿದರೆ ಪನೀರ್ ತವಾ ಮಸಾಲಾ ಸಿದ್ಧವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಆಹಾರ ಸೇವಿಸಿದ ಮೇಲೆ ಸೆಕ್ಸ್ ಮಾಡಿದರೆ ಆಗುವ ಮ್ಯಾಜಿಕ್ಕೇ ಬೇರೆ!