Webdunia - Bharat's app for daily news and videos

Install App

ಪಾಲಾಕ್ ಪಲಾವ್

Webdunia
ಗುರುವಾರ, 14 ಮಾರ್ಚ್ 2019 (15:40 IST)
ಘಮಘಮಿಸುವ ಪಲಾವ್ ಅನ್ನು ಪೋಷಕಾಂಶಗಳ ಗಣಿಯಾಗಿರುವ ಪಾಲಕ್ ಸೊಪ್ಪಿನಿಂದ ಮಾಡಿದರೆ ರುಚಿಗೆ ರುಚಿ, ಆರೋಗ್ಯವು ಹೌದು. ಪುದೀನಾದಂತೆ ಪಾಲಾಕ್‌ನಿಂದಲೂ ರುಚಿಕರವಾದ ಪಲಾವ್ ಮಾಡಬಹುದು.
ಬೇಕಾಗುವ ಪದಾರ್ಥಗಳು:
ಬಾಸ್ಮತಿ ಅಕ್ಕಿ - ಎರಡು ಕಪ್ಪು
ಹಚ್ಚಿದ ಈರುಳ್ಳಿ - ಕಾಲು ಕಪ್
ಪಾಲಾಕ್ ಸೊಪ್ಪು - 1 ಕಪ್
ಹಸಿಮೆಣಸಿನಕಾಯಿ - ನಾಲ್ಕು
ಲವಂಗ - 4
ಏಲಕ್ಕಿಪುಡಿ - ಅರ್ಧ ಸ್ಪೂನ್
ಹಚ್ಚಿದ ಟೋಮೊಟೊ - ಅರ್ಧಕಪ್ಪು
ಗರಂ ಮಸಾಲಾ - ಅರ್ಧ ಟೀಸ್ಪೂನ್
ಗೊಡಂಬಿ - 5-6,
ಬೇಕಾಗುವಷ್ಟು ಎಣ್ಣೆ
ರುಚಿಗೆ ಬೇಕಾಗುವಷ್ಟು 
ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ -1 ಟೀಸ್ಪೂನ್
 
ಅಕ್ಕಿಯನ್ನು ಚೆನ್ನಾಗಿ ತೊಳೆದು ಅರ್ಧಗಂಟೆ ನೆನಸಿಡಬೇಕು. ಪಾಲಾಕ್ ಸೊಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಸ್ಟವ್ ಮೇಲೆ ಪ್ಯಾನ್ ಇರಿಸಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು. ಹಸಿಮೆಣಸಿನಕಾಯಿ, ಗರಂಮಸಾಲಾ. ಲವಂಗ, ಏಲಕ್ಕಿ ಪುಡಿ, ಗೋಡಂಬಿ ಹಾಕಿ ಫ್ರೈ ಮಾಡಬೇಕು. ಅದಕ್ಕೆ ರುಬ್ಬಿದ ಪಾಲಾಕ್ ಪೇಸ್ಟ್, ಬೇಕಾಗುವಷ್ಟು ಉಪ್ಪು ಸೇರಿಸಿ ಬೇಯಿಸಬೇಕು. ಅವು ಚೆನ್ನಾಗಿ ಬೆಂದಮೇಲೆ ನೆನಸಿಟ್ಟುಕೊಂಡ ಅಕ್ಕಿಯನ್ನು ಸೇರಿಸಿ ಅದಕ್ಕೆ ಬೇಕಾಗುವಷ್ಟು ನೀರು ಸೇರಿಸಿ 2 ಬಾರಿ ಕುಕ್ಕರ್ ವಿಷಲ್ ಹಾಕಿಸಿದರೆ ಸಾಕು. ಪಾಲಾಕ್ ಪಲಾವ್ ರೆಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments