Webdunia - Bharat's app for daily news and videos

Install App

ಕೃಷ್ಣನಿಗಾಗಿ ವಿಶೇಷ ನೈವೇದ್ಯ ಸಿಹಿ ಕರ್ಜಿಕಾಯಿ ಮಾಡುವ ವಿಧಾನ

Webdunia
ಬುಧವಾರ, 6 ಸೆಪ್ಟಂಬರ್ 2023 (08:51 IST)
ಇಂದು ಕೃಷ್ಣ ಜನ್ಮಾಷ್ಟಮಿ ಪೂಜೆ ಮಾಡುವ ಮುನ್ನ ಕೃಷ್ಣನಿಗಾಗಿ ಸಿಹಿ ಪ್ರಸಾದ ಮಾಡಿ ನೈವೆದ್ಯವನ್ನು ಇಡಬೇಕು. ಪ್ರತಿ ಹಬ್ಬಕ್ಕೂ ಕೇಸರಿ ಬಾತ್, ಪಾಯಸ ಅದೇ ಸಿಹಿ ತಿಂಡಿ ಮಾಡಿ ಬೇಸರವಾಗಿದ್ದರೆ ಈ ಬಾರಿ ಕೃಷ್ಣನಿಗಾಗಿ ಬೇಗ ಹಾಗೂ ಸುಲಭವಾಗಿ ಸಿಹಿ ಕರ್ಜಿಕಾಯಿ ಮಾಡುವ ವಿಧಾನ ನಾವಿಂದು ಹೇಳಿಕೊಡುತ್ತಿದ್ದೇವೆ.
 
ಬೇಕಾಗುವ ಪದಾರ್ಥಗಳು
ಮೈದಾ ಹಿಟ್ಟು – ಅರ್ಧ ಕೆಜಿ
ಉಪ್ಪು – ಚಿಟಿಕೆ
ಎಣ್ಣೆ – ಕರಿಯಲು
ಕೊಬ್ಬರಿ – ಅರ್ಧ ಕೆಜಿ
ಸಕ್ಕರೆ – ಕಾಲು ಕೆಜಿ
ಏಲಕ್ಕಿ ಪುಡಿ – ಸ್ವಲ್ಪ

ಮಾಡುವ ವಿಧಾನ
* ಮೈದಾ ಹಿಟ್ಟನ್ನು ಜರಡಿ ಅದಕ್ಕೆ ಚಿಟಿಕೆ ಉಪ್ಪು ಹಾಕಿ ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಡಿ.
* ಕೊಬ್ಬರಿಯನ್ನು ತುರಿದು ಅದಕ್ಕೆ ಪುಡಿ ಮಾಡಿದ ಸಕ್ಕರೆ, ಏಲಕ್ಕಿ ಪುಡಿಯನ್ನು ಬೆರೆಸಿಡಿ.
* ಇತ್ತ ಚೆನ್ನಾಗಿ ನಾದಿದ ಮೈದಾ ಹಿಟ್ಟನ್ನು ಸಣ್ಣ ಉಂಡೆಯನ್ನಾಗಿ ಮಾಡಿ ಪೂರಿಯಂತೆ ಲಟ್ಟಿಸಿ.
* ಹೀಗೆ ಲಟ್ಟಿಸಿದ ಹಿಟ್ಟಿನ ಮಧ್ಯ ಭಾಗದಲ್ಲಿ ಕೊಬ್ಬರಿ ಮಿಶ್ರಿತ ಊರ್ಣವನ್ನು ತುಂಬಿ ಮಧ್ಯಕ್ಕೆ ಮಡಚಿ ಸೀಲ್ ಮಾಡಿ. (ಮಾರ್ಕೆಟ್ನಲ್ಲಿ ಸಿಗುವ ಕರ್ಜಿಕಾಯಿ ಮೌಲ್ಡ್ ಬಳಸಬಹುದು)
* ಈ ರೀತಿ ಎಲ್ಲವನ್ನೂ ಮಾಡಿಟ್ಟುಕೊಂಡ ನಂತರ ಕಾದ ಎಣ್ಣೆಗೆ ಹಾಕಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೂ ಕರಿಯಿರಿ.
* ಕರಿದ ಬಳಿಕ ಎಣ್ಣೆಯಿಂದ ತೆಗೆದು ಒಂದು ಪಾತ್ರೆಗೆ ಹಾಕಿ. ಗರಿ ಗರಿಯಾದ ಕರ್ಜಿಕಾಯಿಯನ್ನು ಹಲವು ದಿನಗಳ ಕಾಲ ಸ್ಟೋರ್ ಮಾಡಿ ತಿನ್ನಬಹುದು.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

ಮುಂದಿನ ಸುದ್ದಿ
Show comments