ಒಮ್ಮೆ ಮಸಾಲಾ ಪೂರಿ ಮಾಡಿ ನೋಡಿ...

ನಾಗಶ್ರೀ ಭಟ್
ಗುರುವಾರ, 15 ಫೆಬ್ರವರಿ 2018 (13:09 IST)
ಪೂರಿ ಮಾಡುವುದು ಹೇಗೆ ಎನ್ನುವುದು ನಿಮಗೆಲ್ಲಾ ತಿಳಿದೇ ಇರುತ್ತದೆ. ಹೆಚ್ಚಾಗಿ ಭಾರತದ ಎಲ್ಲಾ ಭಾಗಗಳಲ್ಲೂ ಪೂರಿಯನ್ನು ಮಾಡುತ್ತಾರೆ. ಆದರೆ ಮಸಾಲೆ ಪದಾರ್ಥಗಳನ್ನು ಸೇರಿಸಿ ಪೂರಿ ಮಾಡುವುದನ್ನು ಕೇಳಿದ್ದೀರಾ? ಇಲ್ಲ ಎನ್ನುವುದಾದರೆ ಈ ಲೇಖನವನ್ನು ಓದಿ ಮಸಾಲಾ ಪೂರಿ ಮಾಡುವ ವಿಧಾನವನ್ನು ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿಗಳು:
 
ಗೋಧಿ ಹಿಟ್ಟು - 1 ಕಪ್
ಓಮಕಾಳು - 1 ಚಮಚ
ದನಿಯಾ ಪುಡಿ - 1 ಚಮಚ
ಅಚ್ಚಖಾರದ ಪುಡಿ - 1 ಚಮಚ
ಚಾಟ್ ಮಸಾಲಾ - 1 ಚಮಚ
ಗರಂ ಮಸಾಲಾ - 1/2 ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು - 1/4 ಕಪ್
ಎಣ್ಣೆ - ಕರಿಯಲು
ಉಪ್ಪು - ರುಚಿಗೆ
 
ಮಾಡುವ ವಿಧಾನ:
 
ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಗೋಧಿ ಹಿಟ್ಟು, ಓಮಕಾಳು, ಅಚ್ಚಖಾರದ ಪುಡಿ, ದನಿಯಾ ಪುಡಿ, ಚಾಟ್ ಮಸಾಲಾ, ಗರಂ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು, ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು 2 ಚಮಚ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅಗತ್ಯವಿರುವಷ್ಟು ನೀರನ್ನು ಹಾಕಿ ಕಲಸಿ ಚಪಾತಿ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ಹೀಗೆ ರೆಡಿಯಾದ ಹಿಟ್ಟನ್ನು 1/2 ಗಂಟೆ ಹಾಗೆಯೇ ಬಿಡಿ.
 
ಒಂದು ಬಾಣಲೆಯನ್ನು ಸ್ಟೌ ಮೇಲಿಟ್ಟು ಕರಿಯಲು ಅಗತ್ಯವಿರುವಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಇನ್ನೊಂದು ಕಡೆ ಈ ಮೊದಲೇ ರೆಡಿ ಮಾಡಿಟ್ಟ ಹಿಟ್ಟಿನ ಉಂಡೆಯನ್ನು ಚೆನ್ನಾಗಿ ನಾದಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ನಂತರ ಆ ಉಂಡೆಗಳಿಗೆ ಸ್ವಲ್ಪ ಎಣ್ಣೆಯನ್ನು ಸವರಿಕೊಂಡು ಲಟ್ಟಿಸಿ ಅದನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದರೆ ಮಸಾಲಾ ಪೂರಿ ರೆಡಿಯಾಗುತ್ತದೆ. ಇದನ್ನು ನೀವು ಕೊಬ್ಬರಿ ಚಟ್ನಿಯೊಂದಿಗೆ ಅಥವಾ ಆಲೂಗಡ್ಡೆಯ ಪಲ್ಯದೊಂದಿಗೆ ಸವಿಯಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನಕ್ಕೆ ಎಷ್ಟು ಉಪ್ಪು ಸೇವಿಸಬಹುದು, ಹೆಚ್ಚು ಸೇವಿಸಿದ್ರೆ ಏನಾಗುತ್ತದೆ

ಬೇಸಿಗೆಯ ಉರಿಬಿಸಿಲಿಗೆ ಹೆಚ್ಚು ಸಿಹಿ ಪದಾರ್ಥಗಳನ್ನು ಸೇವಿಸಿದ್ರೆ ಏನಾಗುತ್ತೆ

ಮಕ್ಕಳು ಸೇವಿಸುವ ಈ ಆಹಾರಗಳು ಅವರ ಸ್ಮರಣ ಶಕ್ತಿ ದುರ್ಬಲಗೊಳಿಸಬಹುದು

ಡಿಹೈಡ್ರೇಶನ್ ಅಂದ್ರೆ ಏನ್‌, ಸಮಸ್ಯೆಯಾದಾಗ ಏನ್‌ ಮಾಡಬೇಕು ಗೊತ್ತಾ

ಹಿತ್ತಲಲ್ಲಿ ಸಿಗುವ ಪೇರಳೆ ಹಣ್ಣಿನ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು ನಿಮಗೆ ಗೊತ್ತಾ

ಮುಂದಿನ ಸುದ್ದಿ
Show comments