Select Your Language

Notifications

webdunia
webdunia
webdunia
webdunia

ಈ ಕೇಸರಿಬಾತ್ ರುಚಿ ನೋಡಿದ್ದೀರೆ ನೀವು ಪದೇ ಪದೇ ಮಾಡಿ ಸವಿಯುತ್ತೀರಿ

ಈ  ಕೇಸರಿಬಾತ್ ರುಚಿ ನೋಡಿದ್ದೀರೆ ನೀವು ಪದೇ ಪದೇ ಮಾಡಿ ಸವಿಯುತ್ತೀರಿ
ಬೆಂಗಳೂರು , ಸೋಮವಾರ, 24 ಆಗಸ್ಟ್ 2020 (11:39 IST)
ಬೆಂಗಳೂರು : ಕೇಸರಿಬಾತ್ ನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಈ ಕೇಸರಿಬಾತ್ ನ್ನು ಹಣ್ಣುಗಳನ್ನು ಸೇರಿಸಿ ತಯಾರಿಸಿದರೆ ಇನ್ನು ರುಚಿಕರವಾಗಿ, ಆರೋಗ್ಯಕರವಾಗಿರುತ್ತದೆ.

ಬೇಕಾಗುವ ಸಾಮಾಗ್ರಿಗಳು : 1 ಕಪ್ ರವಾ, 1 ಕಪ್ ಸಕ್ಕರೆ, 1 ಕಪ್ ಮಾವಿನ ಹಣ್ಣಿನ ತಿರುಳು, 4 ಚಮಚ ತುಪ್ಪ, 2 ಚಮಚ ಒಣದ್ರಾಕ್ಷಿ, 10 ಗೋಡಂಬಿ, 3 ಏಲಕ್ಕಿ, ಹಾಲಿನಲ್ಲಿ ನೆನೆಸಿಟ್ಟ ಕೇಸರಿ ಸ್ವಲ್ಪ.

ಮಾಡುವ ವಿಧಾನ : ಬಾಣಲೆಯಲ್ಲಿ ಸ್ವಲ್ಪ ತುಪ್ಪ ಬಿಸಿಮಾಡಿ ಗೋಡಂಬಿ, ದ್ರಾಕ್ಷಿಯನ್ನು ಹುರಿದುಕೊಳ್ಳಿ. ಬಳಿಕ ರವಾವನ್ನು ಹುರಿದುಕೊಳ್ಳಿ.  ಬಳಿಕ ಹಾಲಿನೊಂದಿಗೆ ನೆನೆಸಿಟ್ಟ ಕೇಸರಿ , ತುಪ್ಪ, ನೀರು ಮತ್ತು ಮಾವಿನ ತಿರುಳನ್ನು ಹಾಕಿ ಕುದಿಸಿ. ಅದಕ್ಕೆ ರವಾವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 1 ನಿಮಿಷ ಬೇಯಿಸಿ. ಬಳಿಕ ಅದಕ್ಕೆ ಸಕ್ಕರೆ ಮತ್ತು ತುಪ್ಪ, ಏಲಕ್ಕಿ ಸೇರಿಸಿ. ಕೊನೆಯಲ್ಲಿ ದ್ರಾಕ್ಷಿ, ಗೋಡಂಬಿ ಸೇರಿದರೆ ಮಾವಿನ ಹಣ್ಣಿನ ಕೇಸರಿಬಾತ್ ರೆಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಿಗ್ಗಿನ ತಿಂಡಿಗೆ ಥಟ್ಟಂತ ಮಾಡಿ ಬಿಡಿ ತೆಂಗಿನಕಾಯಿ ದೋಸೆ