ಮಾವು ಎಂದರೆ ಹಣ್ಣುಗಳ ರಾಜ. ರುಚಿಕರವಾದ ಮಾವಿನಕಾಯಿಗಳಿಂದ ಬಾಯಲ್ಲಿ ನೀರೂರಿಸುವ ಗೊಜ್ಜು ಮನೆಯಲ್ಲೇ ತಯಾರಿಸಿ. ಏನೇನ್ ಬೇಕು?ಮಾವಿನಕಾಯಿ 2 ಉಪ್ಪು ಬೆಲ್ಲ 50 ಗ್ರಾಂ ಹಸಿಮೆಣಸಿನಕಾಯಿ 6 ಸಾಸಿವೆ ಎಣ್ಣೆ ಒಣಮೆಣಸಿನಕಾಯಿ 3ಮಾಡೋದು ಹೇಗೆ?ಮಾವಿನಕಾಯಿ ಸಣ್ಣಗೆ ಹೆಚ್ಚಿಕೊಂಡು ಬೇಯಿಸಿ. ಅದಕ್ಕೆ ಹಸಿಮೆಣಸಿನಕಾಯಿ, ಉಪ್ಪು, ಬೆಲ್ಲ ಹಾಕಿ. ಆನಂತರ ಎಣ್ಣೆಯಲ್ಲಿ ಸಾಸಿವೆ, ಒಣಮೆಣಸಿನಕಾಯಿ ಒಗ್ಗರಣೆ ಕೊಡಿ.ಗೊಜ್ಜು ಮಾಡಿ ನಿಮ್ಮಿಷ್ಟದ ಚಪಾತಿ, ಇಡ್ಲಿ, ದೋಸೆ ಜೊತೆಗೆ ತಿನ್ನಬಹುದು.