ಮಾವಿನ ಹಣ್ಣಿನ ಪಲ್ಯ..

Webdunia
ಗುರುವಾರ, 21 ಫೆಬ್ರವರಿ 2019 (15:28 IST)
ಬೇಸಿಗೆ ಬಂತೆಂದರೆ ಮಾರುಕಟ್ಟೆಯಲ್ಲಿ ಬಗೆಬಗೆಯ ಮಾವಿನ ಹಣ್ಣುಗಳು ದೊರೆಯುತ್ತವೆ. ಮಾವಿನ ಹಣ್ಣುಗಳು ಹಾಗೆಯೇ ತಿನ್ನಲು ಎಷ್ಟು ರುಚಿಯೋ ಹಾಗೆಯೇ ಅದರ ಪದಾರ್ಥಗಳೂ ರುಚಿಯಾಗಿರುತ್ತವೆ. ಮಾವಿನ ಹಣ್ಣಿನ ಪಲ್ಯ ಅಥವಾ ಗ್ರೇವಿಯನ್ನು ಮಾಡಲು ನಿಮಗೆ ಸ್ವಲ್ಪ ಹುಳಿ-ಸಿಹಿ ಮಿಶ್ರವಾಗಿರುವ ಚಿಕ್ಕ-ಚಿಕ್ಕ ಹಣ್ಣುಗಳು ಅಗತ್ಯವಿರುತ್ತವೆ. ಈ ಪಲ್ಯವನ್ನು ನಿಮ್ಮ ರುಚಿಗೆ ಅನುಸಾರವಾಗಿ ನೀವು ಸಿಹಿ, ಖಾರ, ಹುಳಿಯಾಗಿ ತಯಾರಿಸಿಕೊಳ್ಳಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು:
ಮಾವಿನ ಹಣ್ಣು (ಸಣ್ಣ ಗಾತ್ರದ್ದು) - 8-10
ಎಣ್ಣೆ - 2 ಚಮಚ
ಸಾಸಿವೆ - 1 ಚಮಚ
ಉದ್ದಿನಬೇಳೆ - 1 ಚಮಚ
ಕೆಂಪು ಮೆಣಸು - 1
ಹಸಿಮೆಣಸು - 1
ಕರಿಬೇವು - ಸ್ವಲ್ಪ
ಇಂಗು - 1/2
ಅರಿಶಿಣ - 1/2 ಚಮಚ
ಉಪ್ಪು - ರುಚಿಗೆ
ಬೆಲ್ಲ - 1/2 ಕಪ್
 
ಮಾಡುವ ವಿಧಾನ:
ಸ್ವಲ್ಪ ಹುಳಿ-ಸಿಹಿಯಿರುವ ಚಿಕ್ಕ ಚಿಕ್ಕ ಮಾವಿನ ಹಣ್ಣುಗಳನ್ನು ತೆಗೆದುಕೊಂಡು ತೊಳೆದುಕೊಳ್ಳಿ. ನಂತರ ಅವುಗಳ ತೊಟ್ಟಿನ ಭಾಗವನ್ನು ಕತ್ತರಿಸಿ. ಈಗ ಹಣ್ಣುಗಳನ್ನು ನಾಲ್ಕು ಮೂಲೆಯಲ್ಲಿ ಸಿಗಿದು ಅರ್ಧ-ಅರ್ಧ ಬಿಡಿಸಿಡಿ. ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಸ್ವಲ್ಪ ಬಿಸಿಯಾದ ನಂತರ 2 ಚಮಚ ಎಣ್ಣೆ ಹಾಕಿ. ನಂತರ 1 ಚಮಚ ಸಾಸಿವೆ ಹಾಕಿ ಅದು ಸಿಡಿಯಲು ಆರಂಭವಾದಾಗ 1 ಚಮಚ ಉದ್ದಿನಬೇಳೆ, 1 ಕತ್ತರಿಸಿದ ಕೆಂಪು ಮೆಣಸು, 1/2 ಚಮಚ ಇಂಗು, ಕರಿಬೇವಿನ ಎಲೆಯನ್ನು ಹಾಕಿ 1 ಹುರಿಯಿರಿ.

ಈಗ ಅದಕ್ಕೆ 1/2 ಚಮಚ ಅರಿಶಿಣ, 1 ಕತ್ತರಿಸಿದ ಹಸಿಮೆಣಸನ್ನು ಹಾಕಿ ಇನ್ನೂ ಸ್ವಲ್ಪ ಹುರಿದು ನಂತರ ಇದಕ್ಕೆ 1 ಕಪ್ ನೀರನ್ನು ಹಾಕಿ. ನಂತರ 1/2 ಕಪ್ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಬೆಲ್ಲ ಕರಗುವವರೆಗೆ ಕುದಿಸಿ. 2-3 ನಿಮಿಷಗಳ ನಂತರ ಅರ್ಧ ಸಿಪ್ಪೆ ಸುಲಿದ ಮಾವಿನ ಹಣ್ಣುಗಳನ್ನು ಈ ಮಿಶ್ರಣದಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮಧ್ಯಮ ಉರಿಯಲ್ಲಿ ಬೇಯಿಸಿದರೆ ರುಚಿಯಾದ ಮಾವಿನ ಹಣ್ಣಿನ ಪಲ್ಯ ಅಥವಾ ಗ್ರೇವಿ ಸಿದ್ಧವಾಗುತ್ತದೆ. ನೀವು ಇದನ್ನು ಅನ್ನ, ಚಪಾತಿ ಅಥವಾ ದೋಸೆಯೊಂದಿಗೆ ಸೇವಿಸಬಹುದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೇಸಿಗೆ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ‌ಎಷ್ಟು ನೀರು‌ ಕುಡಿಯಬೇಕು ಗೊತ್ತಾ

ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡುವುದನ್ನು ಅವಾಯ್ಡ್ ಮಾಡಿ

ಕಾಡುವ ತಲೆನೋವಿಗೆ ತಕ್ಷಣದ ಉಪಶಮನಕ್ಕಾಗಿ ಈ ರೀತಿ ಮಾಡಿ

ಚಿಕ್ಕ ಗಾಯಗಳೂ ಬೇಗ ಗುಣವಾಗುತ್ತಿಲ್ಲ ಎಂದರೆ ಕಾರಣವೇನು ಗೊತ್ತಾ

ಬೀಸಿಲಿನ ಝಳಕ್ಕೆ ಬೇರೆಲ್ಲ ಪಾನೀಯ ಕುಡಿಯುವ ಬದಲು ಇದನ್ನೊಮ್ಮೆ ಟ್ರೈ ಮಾಡಿ

ಮುಂದಿನ ಸುದ್ದಿ
Show comments