ಬೆಂಗಳೂರು: ಮಾವಿನ ಕಾಯಿ ಚಟ್ನಿ ಎಲ್ಲರಿಗೂ ಗೊತ್ತು. ಆದರೆ ಮಾವಿನ ಹೂವಿನಲ್ಲೂ ರುಚಿಯಾದ ಚಟ್ನಿ ಮಾಡಬಹುದು. ಹೇಗೆಂದು ಗೊತ್ತಾ? ಗೊತ್ತಿಲ್ಲದಿದ್ದರೆ ನೋಡಿಕೊಳ್ಳಿ.
ಬೇಕಾಗುವ ಸಾಮಗ್ರಿಗಳು
ಮಾವಿನ ಹೂವು
ಕಾಯಿ ತುರಿ
ಒಣಮೆಣಸು
ಉಪ್ಪು
ಹುಳಿ
ಮಾಡುವ ವಿಧಾನ
ಮಾವಿನ ಹೂವನ್ನು ಚೆನ್ನಾಗಿ ತೊಳೆದುಕೊಂಡು ಕುದಿಯುವ ನೀರಲ್ಲಿ ಕುದಿಸಿ. ನಂತರ ಇದ ನೀರು ಬಸಿದಿಡಿ. ಒಣ ಮೆಣಸನ್ನು ಹುರಿದುಕೊಳ್ಳಿ. ಈಗ ಕಾಯಿ ತುರಿಗೆ ಒಣ ಮೆಣಸು, ಬಾಡಿಸಿದ ಮಾವಿನ ಹೂ, ಹುಳಿ, ಉಪ್ಪು, ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದಕ್ಕೆ ಒಗ್ಗರಣೆ ಕೊಟ್ಟರೆ ಮಾವಿನ ಹೂವಿನ ಚಟ್ನಿ ರೆಡಿ. ಇದನ್ನು ದೋಸೆ, ಇಡ್ಲಿಯೊಂದಿಗೆ ತಿನ್ನಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ