Select Your Language

Notifications

webdunia
webdunia
webdunia
webdunia

ಒತ್ತಡವೇ? ಸ್ಮಾರ್ಟ್ ಫೋನ್ ನಲ್ಲಿರುವ ಆಪ್ ನೋಡುತ್ತಾ ಖುಷಿಯಾಗಿರಿ!

ಒತ್ತಡವೇ?  ಸ್ಮಾರ್ಟ್ ಫೋನ್ ನಲ್ಲಿರುವ ಆಪ್ ನೋಡುತ್ತಾ ಖುಷಿಯಾಗಿರಿ!
Bangalore , ಶನಿವಾರ, 7 ಜನವರಿ 2017 (13:23 IST)
ಬೆಂಗಳೂರು: ಯಾರಾದರೂ ನಿಮ್ಮನ್ನು ಯಾಕೆ ಯಾವತ್ತೂ ಫೋನ್ ಹಿಡ್ಕೊಂಡೇ ಇರ್ತೀಯಾ ಎಂದು ರೇಗಾಡಿದರೆ ಚಿಂತೆ ಮಾಡಬೇಡಿ. ನೀವು ಒತ್ತಡದಲ್ಲಿದ್ದರೆ, ಆತಂಕದಲ್ಲಿದ್ದರೆ, ಇದೇ ಸ್ಮಾರ್ಟ್ ಫೋನ್ ಉಪಯೋಗಕ್ಕೆ ಬರುತ್ತದೆ ಎನ್ನುವುದನ್ನು ಹೊಸ ಸಂಶೋಧನೆಯೊಂದನ್ನು ತಿಳಿಸಿದೆ.


ಅಮೆರಿಕದ ವಿವಿಯೊಂದು ಇಂತಹದ್ದೊಂದು ಸಂಶೋಧನೆ ನಡೆಸಿದೆ. ಒತ್ತಡದಲ್ಲಿದ್ದಾಗ ಸ್ಮಾರ್ಟ್ ಫೋನ್ ನಲ್ಲಿರುವ ಆಪ್ ಗಳನ್ನೆಲ್ಲಾ ನೋಡುತ್ತಾ ಸಮಯ ಕಳೆಯಿರಿ. ಇದರಿಂದ ಮನಸ್ಸಲ್ಲಿರುವ ಎಲ್ಲಾ ಆತಂಕಗಳೂ ದೂರವಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಹಾಗಿದ್ದ ಮಾತ್ರಕ್ಕೆ ಯಾವ್ಯಾವುದೋ ಆಪ್ ನೋಡುತ್ತಾ ಕೂತರೆ ಪ್ರಯೋಜನವಿಲ್ಲ. ತಲೆಗೆ ಕೆಲಸ ಕೊಡುವಂತಹ ದಾರಿ ತೋರಿಸುವ ಗೂಗಲ್ ಮ್ಯಾಪ್ ನಂತಹ ಆಪ್ ಗಳನ್ನು ನೋಡಿದರೆ ಚಿಂತೆ ತಲೆಯಿಂದ ದೂರವಾಗಿ ಬೇರೆ ಕಡೆ ಆಲೋಚನೆ ಹೊರಳುತ್ತದೆ ಎನ್ನುವುದು ಇದರ ಒಳಗುಟ್ಟು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರುಚಿಕರ ಬಾಳೆದಿಂಡಿನ ದೋಸೆ ಮಾಡುವ ವಿಧಾನ