Select Your Language

Notifications

webdunia
webdunia
webdunia
webdunia

ಶೇಂಗಾ ಬರ್ಫಿ ಮಾಡಿ ರುಚಿ ಸವಿಯಿರಿ

ಶೇಂಗಾ ಬರ್ಫಿ ಮಾಡಿ ರುಚಿ ಸವಿಯಿರಿ
ಬೆಂಗಳೂರು , ಬುಧವಾರ, 19 ಸೆಪ್ಟಂಬರ್ 2018 (14:07 IST)
ಶೇಂಗಾ ಬರ್ಫಿಯನ್ನು ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರು ಇಷ್ಟಪಡುತ್ತಾರೆ. ಇದನ್ನು ತಿನ್ನುವಾಗ ಮಧ್ಯ ಮಧ್ಯ ಸಿಗುವ ಶೇಂಗಾ ಬೀಜಗಳು ಇದರ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಮತ್ತು ಕಡಿಮೆ ಖರ್ಚಿನಲ್ಲಿ ಇದನ್ನು ಮಾಡಬಹುದು. ಹಾಗಾದರೆ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ.
ಬೇಕಾಗುವ ಸಾಮಗ್ರಿಗಳು:
 
ಶೇಂಗಾ 1 ಕಪ್
ಸಕ್ಕರೆ 3/4 ಕಪ್
ತುಪ್ಪ 1 ಚಮಚ
 
 ಮಾಡುವ ವಿಧಾನ:
 
ಮೊದಲು ಶೇಂಗಾವನ್ನು ಸಣ್ಣ ಉರಿಯಲ್ಲಿ ಗರಿ ಗರಿಯಾಗಿ ಹುರಿದುಕೊಳ್ಳಬೇಕು. ಆದರ ಬಿಸಿ ಆರಿದ ಮೇಲೆ ಅದರ ಮೇಲಿನ ತೆಳುವಾದ ಸಿಪ್ಪೆಯನ್ನು ತೆಗೆಯಬೇಕು. ನಂತರ ಅರ್ಧ ಶೇಂಗಾವನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಒಂದು ಸುತ್ತು ತಿರುಗಿಸಬೇಕು ಅಂದರೆ ಶೇಂಗಾ 2 ರಿಂದ 3 ಚೂರು ಆಗಬೇಕು ಅಷ್ಟೇ. ಉಳಿದದ್ದನ್ನು ಹಾಗೆಯೇ ಸೇರಿಸಬೇಕು. ನಂತರ ದಪ್ಪ ತಳದ ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಸಕ್ಕರೆಯನ್ನು ಹಾಕಿ 1/2 ಚಮಚ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಅದು ಕರಗಿ ಸಕ್ಕರೆಯೂ ಪೂರ್ತಿಯಾಗಿ ಕರಗಿದ ಮೇಲೆ ಅದರ ಪಾಕವು ಹೊಂಬಣ್ಣಕ್ಕೆ ತಿರುಗುತ್ತದೆ.
webdunia

ನಂತರ ಶೇಂಗಾವನ್ನು ಹಾಕಿ ಚೆನ್ನಾಗಿ ಕಲೆಸಬೇಕು. ನಂತರ ಒಂದು ಸ್ವಚ್ಛವಾದ ಕಲ್ಲಿನ ಮೇಲೆ (ಪ್ಲೇಟಿನಲ್ಲಿ ಈ ಮಿಶ್ರಣವನ್ನು ಹರವಬಾರದು. ಏಕೆಂದರೆ ಅದನ್ನು ಪ್ಲೇಟಿನಿಂದ ತೆಗೆಯುವುದು ತುಂಬಾ ಕಷ್ಟಕರ) ತುಪ್ಪವನ್ನು ಸವರಿ ಈ ಮಿಶ್ರಣವನ್ನು ಅದರ ಮೇಲೆ ಹಾಕಿ ಲಟ್ಟಣಿಗೆಯಿಂದ ಅದನ್ನು ಲಟ್ಟಿಸಿ ಅದು ಪೂರ್ತಿಯಾಗಿ ಬಿಸಿ ಆರುವುದರೊಳಗಾಗಿ ಚಾಕುವಿನಿಂದ ಹಲ್ವದ ತರಹ ಕತ್ತರಿಸಿದರೆ ರುಚಿ ರುಚಿಯಾದ ಶೇಂಗಾ ಬರ್ಫಿ ಸವಿಯಲು ಸಿದ್ಧ. 

Share this Story:

Follow Webdunia kannada

ಮುಂದಿನ ಸುದ್ದಿ

ರುಚಿ ರುಚಿಯಾದ ಖರ್ಜೂರದ ಪಾಯಸ