Select Your Language

Notifications

webdunia
webdunia
webdunia
webdunia

ಕುಂದಾಪುರ್ ಶೈಲಿಯ ಚಿಕನ್ ಸುಕ್ಕಾ

ಕುಂದಾಪುರ್ ಶೈಲಿಯ ಚಿಕನ್ ಸುಕ್ಕಾ
ಬೆಂಗಳೂರು , ಶುಕ್ರವಾರ, 28 ಸೆಪ್ಟಂಬರ್ 2018 (17:30 IST)
ಬೇಕಾಗುವ ಸಾಮಗ್ರಿಗಳು
5 ಚಮಚ - ಎಣ್ಣೆ
7-8 - ಕೆಂಪು ಮೆಣಸಿನಕಾಯಿ
1 ಚಮಚ - ಕಾಳು ಮೆಣಸು
3/4 ಚಮಚ - ಕೊತ್ತಂಬರಿ ಕಾಳು
1/4 ಚಮಚ - ಮೆಂತೆ ಕಾಳು
1/4 ಚಮಚ - ಹುಣಸೆ ಹಣ್ಣು
1/2 ಚಮಚ  - ಜೀರಿಗೆ
7-8 ಎಸಳು ಬೆಳ್ಳುಳ್ಳಿ
1 ಕಪ್ - ತೆಂಗಿನ ತುರಿ
300 ಗ್ರಾಂ - ಚಿಕನ್
ಉಪ್ಪು
1/3 ಚಮಚ - ಅರಿಶಿಣ
1/2 ಕಪ್ - ಹೆಚ್ಚಿದ ಈರುಳ್ಳಿ
 
ಮಾಡುವ ವಿಧಾನ
 
* ಒಂದು ಬಾಣಲೆಯಲ್ಲಿ 1 ಚಮಚ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಕೆಂಪು ಮೆಣಸಿನಕಾಯಿ, ಕಾಳು ಮೆಣಸು, ಕೊತ್ತಂಬರಿ ಕಾಳು, ಮೆಂತೆ ಕಾಳು, ಹುಣಸೆ ಹಣ್ಣು ಹಾಕಿ ಹುರಿದುಕೊಳ್ಳಿ.
 
* ಒಂದು ಮಿಕ್ಸಿಯಲ್ಲಿ ಹುರಿದ ಮಸಾಲೆ ಮತ್ತು ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
 
* ಒಂದು ಬಾಣಲೆಯಲ್ಲಿ 1 ಚಮಚ ಎಣ್ಣೆ ಬಿಸಿ ಮಾಡಿ ಅದಕ್ಕೆ ಜೀರಿಗೆ, ಬೆಳ್ಳುಳ್ಳಿ ಮತ್ತು ತೆಂಗಿನ ತುರಿಯನ್ನು ಹಾಕಿ ಹುರಿದು, ರುಬ್ಬಿಕೊಳ್ಳಿ.
 
* ಒಂದು ಬಾಣಲೆಯಲ್ಲಿ 3 ಚಮಚ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಚಿಕನ್ ತುಂಡುಗಳು ಹಾಕಿ 5 ನಿಮಿಷ ಹುರಿಯಿರಿ. ನಂತರ ಉಪ್ಪು, ಅರಿಶಿಣ ಪುಡಿ ಹಾಕಿ ಮಿಶ್ರಣ ಮಾಡಿ 5 ನಿಮಿಷ ಹುರಿಯಿರಿ. 
 
* ನಂತರ ಅದಕ್ಕೆ ರುಬ್ಬಿದ ಮಸಾಲೆಗಳನ್ನು ಹಾಕಿ, ಸ್ವಲ್ಪ ನೀರು ಸೇರಿಸಿ ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿ.
 
* ಚಿಕನ್ ಬೇಯುತ್ತಿದ್ದಂತೆ ರುಬ್ಬಿದ ತೆಂಗಿನ ಮಸಾಲೆಯನ್ನು ಸೇರಿಸಿ ಬೇಯಿಸಿದರೆ. ಕುಂದಾಪುರ್ ಶೈಲಿಯ ರುಚಿಕರ ಚಿಕನ್ ಸುಕ್ಕಾ ಸವಿಯಲು ಸಿದ್ಧ.

Share this Story:

Follow Webdunia kannada

ಮುಂದಿನ ಸುದ್ದಿ

ಆಲೂ ಜೀರಾ ಫ್ರೈ…