ಸ್ವಾದಿಷ್ಠ ಕಾಶ್ಮೀರಿ ಪಲಾವ್..!

Webdunia
ಸೋಮವಾರ, 25 ಮಾರ್ಚ್ 2019 (14:35 IST)
ಪಲಾವ್ ಎಂದರೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ... ಎಲ್ಲರೂ ಇಷ್ಟಪಟ್ಟು ತಿನ್ನುವ ಅಡುಗೆಯಾಗಿದೆ. ಹಲವು ಮಸಾಲೆ ಪದಾರ್ಥಗಳನ್ನು ಬಳಸಿ ಮಾಡುವ ಪಲಾವ್ ಘಮಘಮವೆನ್ನುತ್ತಿರುತ್ತದೆ. ಆದರೆ ಹಲವು ಸ್ಥಳಗಳಿಗೆ ತಕ್ಕಂತೆ ಅದರ ರುಚಿ ಮತ್ತು ಮಾಡುವ ವಿಧಾನಗಳು ಬೇರೆಯಾಗುತ್ತವೆ. ಕಾಶ್ಮೀರಿ ಪಲಾವ್ ಮಾಡುವ ವಿಧಾನಕ್ಕಾಗಿ ಮುಂದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಅಕ್ಕಿ - 11/2 ಕಪ್
ಎಣ್ಣೆ - 2 ಚಮಚ
ತುಪ್ಪ - 2 ಚಮಚ
ಲವಂಗದ ಎಲೆ - 1
ಲವಂಗ - 3-4
ಏಲಕ್ಕಿ - 3-4
ಚೆಕ್ಕೆ - 1 ಚೂರು
ಜೀರಿಗೆ - 1 ಚಮಚ
ಶುಂಠಿ ಪೇಸ್ಟ್ - 1 ಚಮಚ
ಗೋಡಂಬಿ - 6-7
ಬಾದಾಮಿ - 6-7
ಈರುಳ್ಳಿ - 1-2
ಸೋಂಪು ಪುಡಿ - 1 ಚಮಚ
ಕೇಸರಿ ಹಾಲು - 1/2 ಕಪ್
ಒಣದ್ರಾಕ್ಷಿ - 1/4 ಕಪ್
ಕೊತ್ತಂಬರಿ ಸೊಪ್ಪು - ಸ್ವಲ್ಪ
ದಾಳಿಂಬೆ ಬೀಜ - ಸ್ವಲ್ಪ
ಸೇಬು - ಸ್ವಲ್ವ
ಹುರಿದ ಈರುಳ್ಳಿ ಸ್ಲೈಸ್ - ಸ್ವಲ್ಪ
ಉಪ್ಪು - ರುಚಿಗೆ
 
ಮಾಡುವ ವಿಧಾನ:
 
ಒಂದು ಪ್ಯಾನ್‌ನಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಸಣ್ಣ ಉರಿಯಲ್ಲಿ ಅದಕ್ಕೆ ಲವಂಗದ ಎಲೆ, ಲವಂಗ, ಏಲಕ್ಕಿ, ಚೆಕ್ಕೆ, ಜೀರಿಗೆ ಮತ್ತು ಶುಂಠಿ ಪೇಸ್ಟ್ ಅನ್ನು ಹಾಕಿ 1 ನಿಮಿಷ ಹುರಿಯಿರಿ. ನಂತರ ಅದಕ್ಕೆ ಗೋಡಂಬಿ, ಬಾದಾಮಿ, ಸ್ಲೈಸ್ ಮಾಡಿದ ಒಂದು ಈರುಳ್ಳಿ ಮತ್ತು ಸೋಂಪು ಪುಡಿಯನ್ನು ಹಾಕಿ ಈರುಳ್ಳಿ ಬೇಯುವವರೆಗೆ ಹುರಿಯಿರಿ. ನಂತರ ಇದಕ್ಕೆ ತೊಳೆದಿಟ್ಟ 11/2 ಕಪ್ ಭಾಸುಮತಿ ಅಕ್ಕಿ, ಕೇಸರಿ ಹಾಲು, ಒಣದ್ರಾಕ್ಷಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು 2 ಕಪ್ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ 2 ಚಮಚ ತುಪ್ಪವನ್ನು ಬೆರೆಸಿ ಮಧ್ಯಮ ಉರಿಯಲ್ಲಿ 15 ನಿಮಿಷ ಪ್ಯಾನ್ ಅನ್ನು ಮುಚ್ಚಿ ಬೇಯಿಸಿದರೆ ಕಾಶ್ಮೀರಿ ಪಲಾವ್ ರೆಡಿಯಾಗುತ್ತದೆ. ಇದನ್ನು ಒಂದು ಬೌಲ್‌ಗೆ ಹಾಕಿ ಅದರ ಮೇಲೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಮತ್ತು ಹೆಚ್ಚಿದ ಸೇಬು, ಹುರಿದ ಈರುಳ್ಳಿ ಸ್ಲೈಸ್, ದಾಳಿಂಬೆ ಬೀಜಗಳಿಂದ ಅಲಂಕರಿಸಬಹುದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ
Show comments