Daily Horoscope
✕

ಎಳೆ ಹಲಸಿನ ಕಾಯಿ ಪಲ್ಯ

Webdunia
ಭಾನುವಾರ, 2 ಆಗಸ್ಟ್ 2020 (08:29 IST)
ಬೆಂಗಳೂರು : ಹಲಸಿನ ಹಣ್ಣು ಎಲ್ಲರಿಗೂ ಪ್ರಿಯವಾದ ಹಣ್ಣು. ಇದರ ಎಳೆಕಾಯಿಯಿಂದಲೂ ಅಡುಗೆ ತಯಾರಿಸಬಹುದು. ಅದು ಹೇಗೆ ಎಂಬುದನ್ನು ನೋಡೋಣ.

ಬೇಕಾಗುವ ಸಾಮಾಗ್ರಿಗಳು : 1 ಎಳೆ ಹಲಸಿನ ಕಾಯಿ, ನೆನೆಸಿದ ಕಡಲೆಕಾಳು 1 ಕಪ್, ಅಚ್ಚಖಾರದ ಪುಡಿ 4 ಚಮಚ, ಈರುಳ್ಳಿ 1, ಬೆಳ್ಳುಳ್ಳಿ12 ಎಸಳು, ಟೊಮೆಟೊ 1,  ತೆಂಗಿನಕಾಯಿ ತುರಿ ½  ಕಪ್, ಜೀರಿಗೆ ಪುಡಿ ½ ಟೀ ಚಮಚ, ಅರಶಿನ 1 ಚಿಟಿಕೆ, ದನಿಯಾ ಪುಡಿ ½  ಚಮಚ, ಎಣ್ಣೆ 1 ಚಮಚ, ಹುಣಸೆ ಹಣ್ಣು , ಉಪ್ಪು.

ಮಾಡುವ ವಿಧಾನ : ಎಳೆಯ ಹಲಸಿನ ಕಾಯಿ ಯನ್ನು ಸಿಪ್ಪೆ ತೆಗೆದು ಉದ್ದಕ್ಕೆ ಹೆಚ್ಚಿಕೊಂಡು ಕುಕ್ಕರ್ ಗೆ ಹಾಕಿ ಅದಕ್ಕೆ ಸ್ವಲ್ಪ ನೀರು, 2 ಟೀ ಚಮಚ ಖಾರದ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ, ಉಪ್ಪು ಹಾಗೂ ಹುಣಸೆ ಹಣ್ಣನ್ನು ಹಾಕಿ ಒಂದು ಅಥವಾ ಎರಡು ವಿಶಲ್ ಹಾಕಿ.

ಒಂದು ಬಾಣಲೆಗೆ ಸ್ವಲ್ಪ ಎಣ್ಣೆ, ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೊ ಹಾಕಿ ಬೇಯಿಸಿ. ನಂತರ ಖಾರದ ಪುಡಿ, ಚಿಟಿಕೆ ಅರಶಿನ ಹಾಕಿ ಬೇಯಿಸಿ ಇಟ್ಟುಕೊಂಡ ಹಲಸಿನ ಕಾಯಿ ಹಾಗೂ ಬೇಯಿಸಿದ ಕಡಲೆಕಾಳು, ಉಪ್ಪು ಹಾಕಿ ಮಿಕ್ಸ್ ಮಾಡಿ. ಕೊನೆಯಲ್ಲಿ ತುರಿದ ತೆಂಗಿನಕಾಯಿ ಹಾಕಿ ತಿರುವಿ ಸ್ವಲ್ಪ ಹೊತ್ತು ಬಿಸಿ ಮಾಡಿ ಉರಿಯಿಂದ ಕೆಳಗಿಳಿಸಿದರೆ ರುಚಿಯಾದ ಎಳೆ ಹಲಸಿನ ಕಾಯಿ ಪಲ್ಯ ರೆಡಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರಿಗೆ ಅತಿಯಾದ ವಾಂತಿಯೇ, ತಕ್ಷಣವೇ ಈ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಿ

ಕೂತು ಥಟ್ಟನೆ ಏಳುವಾಗ ತಲೆ ಸುತ್ತು ಬರುವುದೇಕೆ

ಸಿಹಿ ತಿಂಡಿ ತಿಂದ ಬಳಿಕ ಮಜ್ಜಿಗೆ ಅಥವಾ ಮೊಸರು ಸೇವಿಸಬಾರದು ಯಾಕೆ

ಅತಿಯಾಗಿ ಉಪ್ಪು ತಿಂದರೆ ಗರ್ಭಧರಿಸುವುದು ಕಷ್ಟವೇ, ತಜ್ಞರ ಅಭಿಪ್ರಾಯ ಇಲ್ಲಿದೆ

ಉಪ್ಪು ಪ್ಯಾಕೆಟ್ ಮೇಲೆ ಕರ್ನಾಟಕ ಆರೋಗ್ಯ ಇಲಾಖೆ ಎಚ್ಚರಿಕೆ ಸಂದೇಶ ಪ್ರಕಟಿಸಲು ನಿರ್ಧರಿಸಿರುವುದು ಯಾಕೆ

ಮುಂದಿನ ಸುದ್ದಿ
Show comments