Webdunia - Bharat's app for daily news and videos

Install App

ರವಾ ಜಾಮೂನು ಮಾಡುವುದು ಹೇಗೆ ಗೊತ್ತಾ...?

Webdunia
ಮಂಗಳವಾರ, 6 ಫೆಬ್ರವರಿ 2018 (06:30 IST)
ಬೆಂಗಳೂರು : ಈಗ ಜಾಮೂನು ಮಾಡಬೇಕೆಂದ್ರೆ ರೆಡಿ ಜಾಮುನು ಮಿಕ್ಸ್ ಸಿಗುತ್ತದೆ. ಆದರೆ ರವೆಯಿಂದ ನಾವು ಮನೆಯಲ್ಲೇ  ಕೂಡ ಜಾಮೂನನ್ನು ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಸಾಮಾಗ್ರಿಗಳು
*ರವೆ – 1 ಕಪ್
*ಸಕ್ಕರೆ – 1.5 ಕಪ್
*ಹಾಲು – 1.5 ಕಪ್
*ನೀರು – 1 ಕಪ್
* ತುಪ್ಪ – 1 ಸ್ಪೋನ್
* ಕರಿಯಲು ಎಣ್ಣೆ
*ಏಲಕಿ ಪುಡಿ- ಸ್ವಲ್ಪ
ಮಾಡುವ ವಿಧಾನ
* ಪ್ಯಾನ್‍ಗೆ 1.5 ಕಪ್ ಸಕ್ಕರೆ, 1 ಕಪ್ ನೀರು ಹಾಕಿ ಕುದಿಯಲು ಬಿಡಿ.
* ಸಕ್ಕರೆ ಕರಗಿ ಒಂದೆಳೆ ಪಾಕ ಬರೋವರೆಗೂ ಕೈಯಾಡಿಸುತ್ತಿರಿ. ನಂತರ ಏಲಕ್ಕಿ ಪೌಡರ್ ಹಾಕಿ.
* ಮತ್ತೊಂದು ಪ್ಯಾನ್‍ಗೆ 1 ಕಪ್ ರವೆ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ.
* ರವೆ ಸ್ವಲ್ಪ ಕೆಂಪಾದ ಬಳಿಕ ಅದಕ್ಕೆ 1.5 ಕಪ್ ಹಾಲು ಹಾಕಿ ಕೈಯಾಡಿಸುತ್ತಿರಿ.
* ನಂತರ ಸ್ವಲ್ಪ ಗಟ್ಟಿಯಾದ ಬಳಿಕ 1 ಚಮಚ ತುಪ್ಪ ಹಾಕಿ ಕಲಸಿ ಕೆಳಗಿಳಿಸಿ.
* ನಂತರ ಅದನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಹಿಟ್ಟು ಮೃದುವಾಗುವವರೆಗೆ ಕೈಯಲ್ಲಿ ಕಲಸಿ.
* ಬಳಿಕ ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿಕೊಳ್ಳಿ.
* ಬಾಣಲೆಗೆ ಎಣ್ಣೆ ಹಾಕಿ ಬಿಸಿಗಿಟ್ಟು ಸಣ್ಣ ಉರಿಯಲ್ಲಿ ಜಾಮೂನನ್ನು ಎಣ್ಣೆಗೆ ಹಾಕಿ ಕಂದು ಬಣ್ಣ ಬರುವ ತನಕ ಕರಿಯಿರಿ.
* ಎಣ್ಣೆಯಿಂದ ತೆಗೆದ ಬಂತರ ಸಕ್ಕರೆ ಪಾಕಕ್ಕೆ ಹಾಕಿ, 2 ನಿಮಿಷ ಕುದಿಸಿ, ಆರಲು ಬಿಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments