Select Your Language

Notifications

webdunia
webdunia
webdunia
webdunia

ಮೊಟ್ಟೆ ಹಾಕದೇ ಫಾರೆಸ್ಟ್ ಕೇಕ್ ತಯಾರಿಸಬಹುದು ಗೊತ್ತಾ?

ಮೊಟ್ಟೆ ಹಾಕದೇ ಫಾರೆಸ್ಟ್ ಕೇಕ್ ತಯಾರಿಸಬಹುದು ಗೊತ್ತಾ?
ಬೆಂಗಳೂರು , ಸೋಮವಾರ, 15 ಅಕ್ಟೋಬರ್ 2018 (16:34 IST)
ಕೇಕ್‌ಗೆ ಮೊಟ್ಟೆ ಹಾಕುತ್ತಾರೆ ಎಂದು ನಮ್ಮಲ್ಲಿ ಕೆಲವರು ಕೇಕ್ ಅನ್ನು ತಿನ್ನದವರು ಇದ್ದಾರೆ. ಆದರೆ ಮೊಟ್ಟೆಯನ್ನು ಹಾಕದೇ ಅದೇ ರುಚಿಯುಕ್ತವಾದ ಫಾರೆಸ್ಟ್ ಕೇಕ್ ಅನ್ನು ತಯಾರಿಸಬಹುದು. ಹೇಗೆ ಅಂತ ನಾವು ಹೇಳ್ತೀವಿ. ನೀವೂ ಒಮ್ಮೆ ಟ್ರೈ ಮಾಡಿ. 
ತಯಾರಿಸಲು ಬೇಕಾಗುವ ಸಾಮಗ್ರಿಗಳು :
 
* ಒಂದೂವರೆ ಕಪ್ ಮೈದಾ
* 4 ಚಮಚ ಸಕ್ಕರೆ
* 200 ಗ್ರಾಂ ಕಂಡೆನ್ಸ್‌ಡ್ ಮಿಲ್ಕ್
* 1 ಚಮಚ ಬೇಕಿಂಗ್ ಪೌಡರ್
* 1/2 ಚಮಚ ಬೇಕಿಂಗ್ ಸೋಡಾ
* 1 ಚಮಚ ವಿನೆಗರ್
* 50 ಗ್ರಾಂ ಕೋಕೋ ಪೌಡರ್
* 1 ಕಪ್ ಹಾಲು
* 1 ಕಪ್ ಬೆಣ್ಣೆ
* 1 ಚಮಚ ವೆನಿಲ್ಲಾ ಎಸೆನ್ಸ್
 
ತಯಾರಿಸುವ ವಿಧಾನ :
 
ಮೊದಲು ಕಂಡೆನ್ಸ್‌ಡ್ ಮಿಲ್ಕ್, ಹಾಲು, ವಿನಿಗರ್ ಅನ್ನು ಬಿಟ್ಟು ಉಳಿದ ಡ್ರೈ ಸಾಮಗ್ರಿಗಳನ್ನು ಜರಡಿ ಮಾಡಬೇಕು. ನಂತರ ಕಂಡೆನ್ಸ್‌ಡ್ ಮಿಲ್ಕ್, ಬಟರ್, ವಿನೆಗರ್ ಹಾಕಿ ಮಿಕ್ಸ್ ಮಾಡಿ ಡ್ರೈ ಪದಾರ್ಥಗಳನ್ನು ಹಾಕಬೇಕು. ನಂತರ ಚೆನ್ನಾಗಿ ಬಿಟ್ ಮಾಡಬೇಕು. (ಮಿಕ್ಸರ್‌ನಲ್ಲಿ ಬೇಕಾದರೂ ಕೂಡಾ ಮಾಡಬಹುದು. ನಂತರ ಅದಕ್ಕೆ ಹಿಡಿಯುವಷ್ಟು ಹಾಲನ್ನು ಹಾಕಿ ದೋಸೆ ಹಿಟ್ಟಿನ ಹದಕ್ಕೆ ರೆಡಿ ಮಾಡಿ ಗ್ರಿಸ್ ಮಾಡಿದ ಕೇಕ್ ಬಾಕ್ಸ್‌ಗೆ ಹಾಕಿ ಅದನ್ನು 180 ಡಿಗ್ರಿ, 45 ನಿಮಿಷ ಬೇಕ್ ಮಾಡಬೇಕು. ನಂತರ 2 ಕಪ್ ವಿಪಿಂಗ್ ಕ್ರೀಮ್‌ಗೆ ಸ್ವಲ್ಪ ವೆನಿಲ್ಲಾ ಎಸ್ಸೆನ್ಸ್ ಹಾಕಿ ನಿಮಗಿಷ್ಟವಾದ ರೀತಿಯಲ್ಲಿ ಅಲಂಕಾರ ಮಾಡಬೇಕು. ಇದಕ್ಕೆ ಅಮೂಲ್ ಫ್ರೆಶ್ ಕ್ರೀಮ್ ಕೂಡಾ ಬಳಸಬಹುದು.  

Share this Story:

Follow Webdunia kannada

ಮುಂದಿನ ಸುದ್ದಿ

ಉಡುಪಿ ಶೈಲಿಯ ಅನಾನಸ್ ಸಾಸಿವೆ ಮಾಡಿ ನೋಡಿ