ಜೋಳದ ರೊಟ್ಟಿ ಹೀಗೆ ಮಾಡಿದರೆ ಚೆನ್ನಾಗಿ ಆಗುತ್ತದೆ

Webdunia
ಭಾನುವಾರ, 7 ಜೂನ್ 2020 (09:17 IST)
ಬೆಂಗಳೂರು: ಜೋಳದ ರೊಟ್ಟಿ ಎಂದರೆ ಉತ್ತರ ಕರ್ನಾಟಕದ ಮಂದಿಗೆ ಚಿರಪರಿಚಿತ ಹಾಗೂ ಇಷ್ಟದ ತಿಂಡಿ. ಆದರೆ ಎಲ್ಲರಿಗೂ ಇದನ್ನು ಮಾಡಲು ಗೊತ್ತಿರೋದಿಲ್ಲ. ಜೋಳದ ರೊಟ್ಟಿ ಮೃದುವಾಗಿ ಸುಲಭವಾಗಿ ಮಾಡುವುದು ಹೇಗೆ ಗೊತ್ತಾ?

 

ಬೇಕಾಗುವ ಸಾಮಗ್ರಿಗಳು
ಜೋಳದ ಹಿಟ್ಟು
ಎಣ್ಣೆ
ಉಪ್ಪು

ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಕುದಿಸಿ. ಇದು ಕುದಿಯುವಾಗ ಸ್ವಲ್ಪ ಉಪ್ಪು, ಒಂದು ಚಮಚ ಎಣ್ಣೆ ಹಾಕಿ ಸ್ಟೌವ್ ಆಫ್ ಮಾಡಿ ಬಳಿಕ ಜೋಳದ ಹಿಟ್ಟನ್ನು ಸೌಟಿನಲ್ಲಿ ಕೈಯಾಡಿಸಿ. ಅದು ಸ್ವಲ್ಪ ತಣ್ಣಗಾದ ಬಳಿಕ ಇನ್ನೂ ಸ್ವಲ್ಪ ಎಣ್ಣ ಹಾಕಿಕೊಂಡು ಚೆನ್ನಾಗಿ ನಾದಿಕೊಳ್ಳಿ. ಈ ಹಿಟ್ಟು ಮೃದುವಾಗಿ ನಾದಿಕೊಂಡ ಮೇಲೆ ಉಂಡೆ ಮಾಡಿಕೊಂಡು ಚಪಾತಿಯಂತೆ ಲಟ್ಟಿಸಿಕೊಳ್ಳಿ. ಬಳಿಕ ಕಾದ ಕಾವಲಿ ಮೇಲೆ ಹಾಕಿಕೊಂಡು ಅದನ್ನು ಒದ್ದೆ ಕಾಟನ್ ಬಟ್ಟೆಯಿಂದ ಸವರಿಕೊಳ್ಳಿ. ಈಗ ರೊಟ್ಟಿ ಸ್ವಲ್ಪ ಉಬ್ಬಿಕೊಳ್ಳುತ್ತದೆ. ಇದಾದ ಬಳಿಕ ಎರಡೂ ಬದಿಯನ್ನೂ ಇದೇ ರೀತಿ ಬೇಯಿಸಿಕೊಂಡರೆ ಮೃದುವಾದ ಜೋಳದ ರೊಟ್ಟಿ ಸವಿಯಲು ಸಿದ್ಧ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಆಹಾರ ಕ್ರಮ ಅನುಸರಿಸಿದರೆ ಬಿಪಿ ಸಮತೋಲನದಲ್ಲಿಡಲು ಸಹಕಾರಿ

ಚಳಿಗಾಲದಲ್ಲಿ ಮೊಸರು ಸೇವನೆ ಮಾಡಬಹುದಾ, ಶೀತ ಆಗುವ ಭಯದಲ್ಲಿರುವವರು ಈ ಸುದ್ದಿ ಓದಿ

ತೆಳ್ಳಗಿರುವವರು ಯಾವ ರೀತಿಯ ಆಹಾರ ಸೇವಿಸಬೇಕು

ಈಗ ಅಗ್ಗದಲ್ಲಿ ಸಿಗುವ ಸಿಹಿ ಗೆಣಸನ್ನು ಯಾವುದೇ ಕಾರಣಕ್ಕೂ ಬಿಡಬೇಡಿ

ಈರುಳ್ಳಿ, ಬೆಳ್ಳುಳ್ಳಿ ಸೇವನೆ ಬಳಿಕ ಬಾಯಿ ವಾಸನೆ ಬರುತ್ತಿದ್ದರೆ ಇಲ್ಲಿದೆ ಬೆಸ್ಟ್ ಪರಿಹಾರ

ಮುಂದಿನ ಸುದ್ದಿ
Show comments