Publish Date: Sat, 21 Jan 2017 (08:55 IST)
Updated Date: Sat, 21 Jan 2017 (08:59 IST)
ಬೆಂಗಳೂರು: ಯಾರಾದರೂ ನೆಂಟರು ಬರುತ್ತಿದ್ದಾರೆ. ಮನೆಯಲ್ಲಿ ಗ್ಯಾಸ್ ಖಾಲಿಯಾಗಿದೆ. ಏನಾದರೂ ಸ್ವೀಟ್ ಮಾಡಬೇಕಲ್ಲಾ ಎಂದು ತಲೆಕೆಡಿಸಿಕೊಳ್ಳುತ್ತಿದ್ದೀರಾ? ಸಿಂಪಲ್ ಆಗಿ ಒಲೆ ಉರಿಸದೇ ಬಾಳೆ ಹಣ್ಣಿನ ರಸಾಯನ ಮಾಡಿಕೊಡಿ.
ಬೇಕಾಗುವ ಸಾಮಗ್ರಿಗಳು
ಬಾಳೆಹಣ್ಣು
ಕಾಯಿ ಹಾಲು
ಬೆಲ್ಲ
ಏಲಕ್ಕಿ
ಎಳ್ಳು
ಮಾಡುವ ವಿಧಾನ
ಬಾಳೆಹಣ್ಣನ್ನು ಚಿಕ್ಕ ಬಿಲ್ಲೆಗಳಾಗಿ ಕತ್ತರಿಸಿಕೊಳ್ಳಿ. ಇದಕ್ಕೆ ಬೆಲ್ಲ ತುರಿದು ಒಂದು ಗಂಟೆ ಬಿಡಿ. ಬೆಲ್ಲ ಬಾಳೆಹಣ್ಣಿನೊಂದಿಗೆ ಸಂಪೂರ್ಣವಾಗಿ ಕರಗಿ ಮಿಕ್ಸ್ ಆದ ಮೇಲೆ ಕಾಯಿ ಹಾಲು ತಯಾರಿಸಿ ಸೇರಿಸಿ. ಇದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಮತ್ತು ಎಳ್ಳನ್ನು ಫ್ರೈ ಮಾಡಿ ಹಾಕಿ. ಇದು ಘಮ ಕೊಡುತ್ತದೆ. ಚೆನ್ನಾಗಿ ತಿರುವಿ ನಂತರ ಕಪ್ ನಲ್ಲಿ ಹಾಕಿಕೊಡಿ. ಆರೋಗ್ಯಕ್ಕೂ ಉತ್ತಮ, ರುಚಿಕರ ಕೂಡಾ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ