Select Your Language

Notifications

webdunia
webdunia
webdunia
webdunia

ಹೀರೇಕಾಯಿ ತಿಂದು ಹಿರಿ ಹಿರಿ ಹಿಗ್ಗಿ!

ಹೀರೇಕಾಯಿ  ತಿಂದು ಹಿರಿ ಹಿರಿ ಹಿಗ್ಗಿ!
Bangalore , ಶುಕ್ರವಾರ, 20 ಜನವರಿ 2017 (11:28 IST)
ಬೆಂಗಳೂರು: ಹೀರೇಕಾಯಿ ಪಲ್ಯ ಎಂದರೆ ಸಾಮಾನ್ಯ ಎಲ್ಲರಿಗೂ ಇಷ್ಟ. ಚಪಾತಿಯಿಂದ ಹಿಡಿದು ಅನ್ನದ ಜತೆಗೂ ಬೆಸ್ಟ್ ಕಾಂಬಿನೇಷನ್. ಈ ತರಕಾರಿ ತಿನ್ನುವುದರಿಂದ ನಮಗೆ ಹಲವು ಆರೋಗ್ಯಕರ ಲಾಭಗಳಿವೆ. ಅವು ಯಾವುವು ನೋಡೋಣ.

 
ಹೀರೇಕಾಯಿ ಮುಖ್ಯವಾಗಿ ನಾರಿನಂಶವಿರುವ ತರಕಾರಿ. ಇದಲ್ಲದೆ, ಕಬ್ಬಿಣದಂಶ,  ವಿಟಮಿನ್ ಸಿ, ಜಿಂಕ್, ಮ್ಯಾಗ್ನೀಶಿಯಂ ಅಂಶಗಳೂ ಈ ತರಕಾರಿಯಲ್ಲಿ ಹೇರಳವಾಗಿವೆ. ಕಡಿಮೆ ಕೆಲೋರಿ,  ಕೊಲೆಸ್ಟ್ರಾಲ್ ಅಂಶ ಕಡಿಮೆ ಇರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ತಿನ್ನಲೇಬೇಕಾದ ತರಕಾರಿ.

ಹೀರೇಕಾಯಿ ಮುಖ್ಯವಾಗಿ ನಾರಿನಂಶ ಇರುವ ತರಕಾರಿ. ಹಾಗಾಗಿ ಸರಿಯಾಗಿ ಜೀರ್ಣಕ್ರಿಯೆ ಆಗಲು ಇದು ಸಹಕರಿಸುತ್ತದೆ. ಅಲ್ಲದೆ, ಮಲ ವಿಸರ್ಜನೆ ಸರಿಯಾಗಿ ಆಗದವರು, ಮಲಬದ್ಧತೆ ಇರುವವರು ಈ ತರಕಾರಿಯನ್ನು ಹೆಚ್ಚು ಬಳಸಬೇಕು.

ಇದು ರಕ್ತ ಪರಿಶುದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಲಿವರ್ ನ ಆರೋಗ್ಯ ಕಾಪಾಡುವುದಲ್ಲದೆ, ಮದ್ಯಪಾನದಿಂದ ಲಿವರ್ ಮೇಲಾಗುವ ಕೆಟ್ಟ ಪರಿಣಾಮಗಳನ್ನು ದೂರ ಮಾಡುವ ಗುಣ ಹೊಂದಿದೆ.  ಅಲ್ಲದೆ ಲಿವರ್ ಗೆ ಸಂಬಂಧಿಸಿದಂತೆ ಬರುವ ಹಳದಿ ಪಿತ್ತ ಅಥವಾ ಜಾಂಡೀಸ್ ಖಾಯಿಲೆ ಇರುವವರು ಇದರ ಜ್ಯೂಸ್ ಮಾಡಿ ರಸ ಸೇವಿಸಬೇಕು.

ಅಲ್ಲದೆ ಈ ತರಕಾರಿ ಸಾಕಷ್ಟು ನೀರಿನಂಶ ಹೊಂದಿರುವುದರಿಂದ, ದೇಹಕ್ಕೆ, ಕಣ್ಣಿಗೆ, ಚರ್ಮದ ಕಾಂತಿಗೆ ಹಾಗೂ ಮೊಡವೆ ಸಮಸ್ಯೆಗಳಿಗೆ  ಉಪಯುಕ್ತ. ಅಲ್ಲದೆ ಇದರಲ್ಲಿರುವ ನೀರಿನಂಶ ಅಸಿಡಿಟಿ ಸಮಸ್ಯೆಗೂ ಉತ್ತಮ. ಇನ್ನೇಕೆ ತಡ? ಹೀರೇಕಾಯಿ ತಿಂದು ಹಿರಿ ಹಿರಿ ಹಿಗ್ಗಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರುಚಿಯಾದ ಆಲೂಗಡ್ಡೆ ಹಲ್ವಾ ಮಾಡುವ ವಿಧಾನ